Monday , June 25 2018
ಕೇಳ್ರಪ್ಪೋ ಕೇಳಿ
Home / Film News / Bollywood / ಮೆಲ್ಬೋರ್ನ್​ನಲ್ಲಿ ಮಗಳೊಂದಿಗೆ ಐಶ್ವರ್ಯ ಧ್ವಜಾರೋಹಣ

ಮೆಲ್ಬೋರ್ನ್​ನಲ್ಲಿ ಮಗಳೊಂದಿಗೆ ಐಶ್ವರ್ಯ ಧ್ವಜಾರೋಹಣ

ಮೆಲ್ಬೋರ್ನ್​​ : ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಭಾರತೀಯ ಸಿನಿಮೋತ್ಸವದಲ್ಲಿ ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಐಶ್ವರ್ಯ ತಮ್ಮ ಐದು ವರ್ಷದ ಮಗಳು ಆರಾದ್ಯ ಜೊತೆ ಧ್ವಜಾರೋಹಣ ಮಾಡಿದ್ದಾರೆ.

ಇದು ಐಶ್ವರ್ಯಗೆ ಹೆಮ್ಮೆಯ ಕ್ಷಣ… ತನ್ನ ಮಗಳೊಂದಿಗೆ ಧ್ವಜಾರೋಹಣ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಐಶ್ವರ್ಯ ಖುಷಿಗೊಂಡಿದ್ದಾರೆ. ಅದೂ ಅಲ್ಲದೆ, ಮೆಲ್ಬೋರ್ನ್​ನಲ್ಲಿ ಭಾರತದ ಧ್ವಜಾರೋಹಣ ಮಾಡಿದ ಮೊದಲ ನಟಿ ಎಂಬ ಹೆಗ್ಗಳಿಕೆಗೂ ಐಶ್ವರ್ಯ ಪಾತ್ರರಾಗಿದ್ದಾರೆ…

ಇದಾದ ಬಳಿಕ ಮಾತನಾಡಿದ ಐಶ್ವರ್ಯ ತನಗೆ ಈ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಜೊತೆಗೆ, ತನ್ನ ಮಗಳು ಈ ಕ್ಷಣವನ್ನು ಖಂಡಿತಾ ಮರೆಯಲು ಸಾಧ್ಯವಿಲ್ಲ ಎಂದೂ ಹೇಳಿದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!