Sunday , July 22 2018
ಕೇಳ್ರಪ್ಪೋ ಕೇಳಿ
Home / Earth / ಸಾರ್ವಜನಿಕ ಶೌಚಾಲಯಕ್ಕೆ ಬಂದು ನೀರು ಕುಡಿದ ಹುಲಿ…!

ಸಾರ್ವಜನಿಕ ಶೌಚಾಲಯಕ್ಕೆ ಬಂದು ನೀರು ಕುಡಿದ ಹುಲಿ…!

ಮಾಸ್ಕೋ : ಇದೊಂದು ಎಲ್ಲರೂ ಭೀತಿಗೊಳ್ಳುವಂತಹ ಸುದ್ದಿ… ಹುಲಿಯೊಂದು ಶೌಚಾಲಯಕ್ಕೆ ಬಂದು ನೀರು ಕುಡಿದ ದೃಶ್ಯ ಇದು… ಈ ವೀಡಿಯೋ ಈಗ ಸಖತ್ ವೈರಲ್ ಆಗಿದೆ.

ರಷ್ಯಾದ ಸರ್ಕಸ್​ ಕಂಪೆನಿಯ ಹೆಣ್ಣು ಹುಲಿಯೊಂದು ತನ್ನ ಬಾಯಾರಿಕೆ ನೀಗಿಸಿಕೊಳ್ಳಲು ಶೌಚಾಲಯಕ್ಕೆ ಬಂದಿತ್ತು. ಅಲ್ಲದೆ, ಇಲ್ಲಿ ಟ್ಯಾಪ್​ಗೆ ಬಾಯಿ ಹಾಕಿ ತನ್ನ ನೀರಡಿಕೆಯನ್ನು ನೀಗಿಸಿಕೊಂಡಿತ್ತು ಈ ವ್ಯಾಘ್ರ.

ಈ ಹೆಣ್ಣುಲಿಗೆ ಸುಮಾರು ಏಳು ವರ್ಷ. ಇದರ ಹೆಸರು ಚಾನೆಲ್ ಅಂತ. ಬ್ರೇಕ್​ ಟೈಮ್​ನಲ್ಲಿ ತನ್ನದೇ ಸರ್ಕಸ್​​ ತಂಡದ ಪುರುಷ ಸದಸ್ಯರ ಬಾತ್​ರೂಮ್​ಗೆ ಹೋಗುವುದು ಚಾನೆಲ್​ನ ಅಭ್ಯಾಸವಂತೆ. ಆದರೆ, ಪಾಪ ಈ ಹುಲಿ ನೀರು ಕುಡಿಯುತ್ತಿದ್ದರೆ ಯುವಕನೊಬ್ಬ ಬಂದು ಅದಕ್ಕೆ ತೊಂದರೆ ಕೊಡುವ ದೃಶ್ಯವೂ ಇಲ್ಲಿ ಸೆರೆ ಆಗಿದೆ. ಬಹುಶಃ ಈತನೂ ಕೂಡಾ ಸರ್ಕಸ್​ ಕಂಪೆನಿಯ ಸದಸ್ಯನೇ ಇರಬೇಕು… ಇಲ್ಲದಿದ್ದರೆ ಹುಲಿಯೊಂದಿಗೆ ಈ ರೀತಿ ಆಟ ಆಡುವುದಕ್ಕೂ ಸಾಧ್ಯ ಇರಲಿಲ್ಲ ಬಿಡಿ.

About sudina

Check Also

ವಿಶ್ವದ ಕಡೆಯ ಗಂಡು ಖಡ್ಗಮೃಗ ಕೊನೆಯುಸಿರು…!

ನೈರೋಬಿ : ವಿಶ್ವದ ಕಡೆಯ ಬಿಳಿ ಗಂಡು ಖಡ್ಗಮೃಗ ಇನ್ನು ನೆನಪು ಮಾತ್ರ…! ಕೀನ್ಯಾದಲ್ಲಿ ಈ ಖಡ್ಗಮೃಗ ಕೊನೆಯುಸಿರೆಳೆದಿದೆ. ಸದ್ಯ …

Leave a Reply

Your email address will not be published. Required fields are marked *

error: Content is protected !!