ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ಅಬು ದುಬೈ : ಅರಬ್ ರಾಷ್ಟ್ರಗಳಲ್ಲಿ ತಾಪಮಾನ ಏರಿಕೆಯಾಗಿದೆ. ರಾಷ್ಟ್ರೀಯ ಹವಾಮಾನ ಮತ್ತು ಭೂಗರ್ಭ ಇಲಾಖೆ(ಎನ್ಸಿಎಂಎಸ್) ಕೂಡಾ ಈ ಮುನ್ಸೂಚನೆ ನೀಡಿದೆ. ಶನಿವಾರ ಇಲ್ಲಿ ಅತೀ ಹೆಚ್ಚು ತಾಪಮಾನ ದಾಖಲೆಯಾಗಲಿದ್ದು, ಕೆಲವು ಸಂದರ್ಭದಲ್ಲಿ ಸ್ವಲ್ಪ ಮೋಡ ಅಥವಾ ಮಂಜು ಕಾಣಿಸಿಕೊಳ್ಳಲಿದೆ ಎಂದು ಎನ್ಸಿಎಂಎಸ್ ತಿಳಿಸಿದೆ.
ಇನ್ನು, ಪೂರ್ವ ಮತ್ತು ದಕ್ಷಿಣ ಪ್ರದೇಶದಲ್ಲಿ ಸ್ವಲ್ಪ ಮೋಡದ ವಾತಾವರಣ ಇರಲಿದ್ದು, ಮಧ್ಯಾಹ್ನದ ಬಳಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಸಂಜೆ ಮತ್ತು ಕರಾವಳಿ, ಒಳನಾಡು ಭಾಗದಲ್ಲಿ ಭಾನುವಾರ ಬೆಳಗ್ಗೆ ತೇವಯುಕ್ತ ಗಾಳಿ ಬೀಸುವ ಸಾಧ್ಯತೆ ಇದೆ. ಆದರೆ, ಅಲ್ಲಲ್ಲಿ ಬಿಸಿಲಿನ ತಾಪಮಾನ ಹೆಚ್ಚಿರಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.