Wednesday , December 12 2018
ಕೇಳ್ರಪ್ಪೋ ಕೇಳಿ
Home / Sandalwood / ಚೂರಿ ಇರಿದರೂ ರಕ್ಷಿಸಲು ಯಾರೂ ಬರಲಿಲ್ಲ : ಗುರುರಾಜ್

ಚೂರಿ ಇರಿದರೂ ರಕ್ಷಿಸಲು ಯಾರೂ ಬರಲಿಲ್ಲ : ಗುರುರಾಜ್

ಬೆಂಗಳೂರು : ಜಗ್ಗೇಶ್​ ಪುತ್ರ ಗುರುರಾಜ್ ಮೇಲೆ ದುಷ್ಕರ್ಮಿ ಚಾಕುವಿನಿಂದ ಇರಿದಾಗಲೂ ಯಾರೂ ರಕ್ಷಣೆಗೆ ಬರಲಿಲ್ಲವಂತೆ. ಅಲ್ಲಿದ್ದವರು ಬರೀ ಮೊಬೈಲ್​ನಲ್ಲಿ ಶೂಟಿಂಗ್ ಮಾಡುವುದರಲ್ಲೇ ತಲ್ಲೀನರಾಗಿದ್ದರಂತೆ. ಹೀಗಂತ, ಸ್ವತಃ ಗುರುರಾಜ್ ಅವರೇ ಈ ವಿಷಯ ಹೇಳಿದ್ದಾರೆ.

ಒಂದು ಕಡೆ ಗುರುರಾಜ್​  ನೋವಿನಿಂದ ನರಳುತ್ತಿದ್ದರೆ, ಕಾರಿನಲ್ಲಿ ಕುಳಿತು ಇದನ್ನೆಲ್ಲಾ ನೋಡುತ್ತಿದ್ದ ಗುರುರಾಜ್ ಮಗ ಭಯದಿಂದ ಅಳುತ್ತಿದ್ದ… ಈ ಪರಿಸ್ಥಿತಿಯಿಂದ ಗುರು ಕೂಡಾ ಕಂಗಾಲಾಗಿದ್ದರು… ತಕ್ಷಣ ಪತ್ನಿಗೆ ಕರೆ ಮಾಡಿ ನಡೆದ ವಿಷಯವನ್ನು ಗುರು ತಿಳಿಸಿದರು… ಹೆಂಡತಿ ಭಯದಿಂದ ಮಾವ ಜಗ್ಗೇಶ್​ಗೆ ಕರೆ ಮಾಡಿ ವಿಷಯ ತಿಳಿಸಿದರು… ಮಗನ ಮೇಲಾದ ದಾಳಿಯಿಂದ ಕಂಗಾಲಾದ ಜಗ್ಗೇಶ್​ ಪತ್ನಿ ಪರಿಮಳಾ ಜೊತೆ ಸೇರಿ ತಮ್ಮ ಕಾರಿನಲ್ಲಿ ಸ್ಥಳಕ್ಕೆ ಬಂದು ಮೊದಲು ಪುತ್ರನನ್ನು ಆರ್​.ಟಿ.ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು…

ಮಗನನ್ನು ಆಸ್ಪತ್ರೆಗೆ ಸೇರಿಸಿದ ಜಗ್ಗೇಶ್ ಬಳಿಕ ತಕ್ಷಣ ಆರ್​.ಟಿ.ನಗರ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ… ದೂರು ಸ್ವೀಕರಿಸಿದ ಪೊಲೀಸರು ಕೊಲೆ ಯತ್ನ ಕೇಸ್ ದಾಖಲಿಸಿಕೊಂಡು ಪಾತಕಿಯ ಶೋಧಕ್ಕೂ ಇಳಿದಿದ್ದರು…

ನಮ್ಮ ಜನ ಅಷ್ಟೊಂದು ಹೃದಯಶೂನ್ಯರಾದರಾ…? ಗುರು ಚೂರಿ ಇರಿತಕ್ಕೊಳಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲು ಜಗ್ಗೇಶ್ ತನ್ನ ಕಾರಿನಲ್ಲಿ ಬರಬೇಕಾಗಿತ್ತು…! ಅಂದರೆ ಕನಿಷ್ಟ ಅಂದರೂ ಅರ್ಧಗಂಟೆಗಳಷ್ಟು ಕಾಲ ಗುರು ನೋವಿನಿಂದ ನರಳಿರಬಹುದು… ಸಹಾಯಕ್ಕೆ ನಿರೀಕ್ಷಿಸಿರಬಹುದು… ಆದರೆ, ಗುರು ನೋವು ಯಾರ ಹೃದಯವನ್ನೂ ಕರಗಿಸಲೇಇಲ್ಲ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!