Monday , June 25 2018
ಕೇಳ್ರಪ್ಪೋ ಕೇಳಿ
Home / News NOW / ಬಂಡಾರಿಬೆಟ್ಟುವಿನಲ್ಲಿ 66ನೇ ವರ್ಷದ ಮೊಸರು ಕುಡಿಕೆ ಸಂಭ್ರಮ

ಬಂಡಾರಿಬೆಟ್ಟುವಿನಲ್ಲಿ 66ನೇ ವರ್ಷದ ಮೊಸರು ಕುಡಿಕೆ ಸಂಭ್ರಮ

ಬಂಟ್ವಾಳ : ಬಂಟ್ವಾಳ ತಾಲೂಕಿನ ಬಂಡಾರಿಬೆಟ್ಟು ಬಳಿಯ ಶ್ರೀ ಕೃಷ್ಣ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಸಮಿತಿಯ ವತಿಯಿಂದ ಆಗಸ್ಟ್ 15ರಂದು ಎಸ್‍ವಿಎಸ್ ಶಾಲಾ ಪ್ರೌಢ ಶಾಲಾ ಮೈದಾನದಲ್ಲಿ 66ನೇ ವರ್ಷದ ಮೊಸರು ಸಮಾರಂಭ ನಡೆಯಲಿದೆ. ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ.ಸಿ.ರೋಡು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ಭಂಡಾರಿ ಕೊಳತ್ತಬೆಟ್ಟು, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾದ ಅಧ್ಯಕ್ಷ ಸದಾಶಿವ ಬಂಗೇರ, ಗಣೇಶ್ ಟಯರ್ ಮಾಲಕ ವಿಶ್ವನಾಥ, ವಕೀಲೆ ಆಶಾ ಪ್ರಸಾದ್ ರೈ ಭಾಗವಹಿಸಲಿದ್ದಾರೆ.

ಬೆಳಿಗ್ಗೆ ಶ್ರೀ ಕೃಷ್ಣ ಮಂದಿರದಿಂದ ಶ್ರೀ ಕೃಷ್ಣನ ಪ್ರತಿಬಿಂಬದ ಶೋಭಾ ಯಾತ್ರೆ ಆರಂಭಗೊಂಡು ಶ್ರೀ ತಿರುಮಲ ವೆಂಕಟರಮಣ ದೇವಳ, ಬಡ್ಡಕಟ್ಟೆ ನಿತ್ಯಾನಂದ ಮಂದಿರಕ್ಕೆ ತೆರಳಿ ಬಂಟ್ವಾಳ ತುಂಬೆ ಬೈಪಾಸ್ ಮಾರ್ಗವಾಗಿ ಶಾಲಾ ಮೈದಾನಕ್ಕೆ ತಲುಪಲಿದೆ. ಮಧ್ಯಾಹ್ನ ಮಡಿಕೆ ಒಡೆಯುವುದು, ಮಲ್ಲಕಂಬಕ್ಕೆ ಹತ್ತುವುದು, ಸಣ್ಣವರ ಓಟ, ಮಕ್ಕಳಿಗೆ ಪ್ರೈಜ್ ಕತ್ತರಿಸುವುದು, ಹಗ್ಗಜಗ್ಗಾಟ, ಮ್ಯೂಸಿಕಲ್ ಚೆಯರ್, ಲಿಂಬೆ ಚಮಚ, ಗೋಣಿ ಚೀಲ ಓಟ, ಪುಟ್‍ಬಾಲ್, ಶಾಟ್‍ಪುಟ್, ರಿಂಗಿನ ಆಟ, ಕಾಡ್ರ್ಸ್ ಪ್ಲೇ, ತೆಂಗಿನಕಾಯಿ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆ ಹೀಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ರಾತ್ರಿ 7.30ಕ್ಕೆ ತೆಲಿಕೆದ ಕಲಾವಿದೆರ್ ಕೊಯಿಲ ಇವರಿಂದ ನಿಕ್ಲು ಎನ್ನಿಲೆಕ್ಕತ್ತ್ ಎಂಬ ಹಾಸ್ಯಮಯ ನಾಟಕ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಲಕ್ಷ್ಮಣ್ ಮತ್ತು ಕಾರ್ಯದರ್ಶಿ ನಿತಿನ್ ಬಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About sudina

Check Also

ಬಂಟ್ವಾಳ : ತಾಲೂಕಿನ ವಿವಿಧ ಸುದ್ದಿಗಳ ಒಂದು ನೋಟ

ರೈಲಿನಡಿಗೆ ಬಿದ್ದು ಸಾವು : ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮೆಮಾರ್ …

Leave a Reply

Your email address will not be published. Required fields are marked *

error: Content is protected !!