Thursday , December 14 2017
Home / Sandalwood / ರಕ್ತದಲ್ಲಿ ಸುದೀಪ್ ಹೆಸರು : ಬೇಡ ಇಂತಹ ಅತಿರೇಕವೆಂದು ಅಭಿಮಾನಿಗೆ ಕಿಚ್ಚನ ಕಿವಿಮಾತು

ರಕ್ತದಲ್ಲಿ ಸುದೀಪ್ ಹೆಸರು : ಬೇಡ ಇಂತಹ ಅತಿರೇಕವೆಂದು ಅಭಿಮಾನಿಗೆ ಕಿಚ್ಚನ ಕಿವಿಮಾತು

ಬೆಂಗಳೂರು : ಸಿನೆಮಾ ನಟರನ್ನು ಅಭಿಮಾನಿಗಳು ದೇವರಂತೆ ಕಾಣುತ್ತಾರೆ. ಆದರೆ, ಕೆಲವೊಮ್ಮೆ ಈ ಅಭಿಮಾನ ಅತಿರೇಕಕ್ಕೂ ಹೋಗುವುದಿದೆ. ಇದು ಸ್ಟಾರ್​ಗಳಿಗೂ ಅಡಕತ್ತರಿಯಲ್ಲಿ ಸಿಲುಕಿಸಿತು, ಆದರೆ, ಕಿಚ್ಚ ಸುದೀಪ್ ಮಾತ್ರ ಅತಿರೇಕದ ಅಭಿಮಾನ ಬೇಡ ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟಿದ್ದಾರೆ. ಇದಕ್ಕೆ ಕಾರಣ ಅಭಿಮಾನಿಯೊಬ್ಬರು ಮಾಡಿದ ಟ್ವಿಟ್.

ಅರುಣ್ ಎಂಬ ಅಭಿಮಾನಿ, ಕೈಯಲ್ಲಿ ಕಿಚ್ಚ ಎಂದು ಬರೆಸಿಕೊಂಡು ಅದಕ್ಕೆ ಅರಶಿಣದ ಪುಡಿ ಹಾಕಿ ಫೋಟೋ ತೆಗೆದು ಸುದೀಪ್​ಗೆ ಟ್ವಿಟ್ ಮಾಡಿದ್ದರು. ಮತ್ತು ನಾನು ನಿಮ್ಮ ಅಭಿಮಾನಿ. ಇದು ಹೇಗಿದೆ ಅಂತ ಹೇಳಿ ಅಣ್ಣಾ ಎಂದು ಮೆಸೇಜ್ ಮಾಡಿದ್ದರು,

ಈ ಟ್ವಿಟ್​ಗೆ ಪ್ರತಿಕ್ರಿಯೆ ನೀಡಿದ ಸುದೀಪ್​, ನಿಮ್ಮ ಪ್ರೀತಿಗೆ ಋಣಿ. ಆದರೆ, ನಿಮ್ಮನ್ನು ನೀವು ನೋವು ಮಾಡುವ ಬದಲು ಪ್ರೀತಿ ವ್ಯಕ್ತಪಡಿಸಲು ನಾನಾ ದಾರಿಗಳಿವೆ, ದಯವಿಟ್ಟು ಇದನ್ನು ಪುನರಾರ್ವತನೆ ಮಾಡಬೇಡಿ ಎಂದು ಬುದ್ಧಿಮಾತು ಹೇಳಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!