Friday , October 19 2018
ಕೇಳ್ರಪ್ಪೋ ಕೇಳಿ
Home / Film News / Tollywood / ಆಂಧ್ರ ಪ್ರದೇಶಕ್ಕೆ ಮತ್ತೋರ್ವ ನಟಿಯ ಎಂಟ್ರಿ…?

ಆಂಧ್ರ ಪ್ರದೇಶಕ್ಕೆ ಮತ್ತೋರ್ವ ನಟಿಯ ಎಂಟ್ರಿ…?

ಹೈದರಾಬಾದ್ : ಚಿತ್ರ ನಟ ನಟಿಯರು ರಾಜಕೀಯ ಕ್ಷೇತ್ರಕ್ಕೆ ಬರುವುದು ದೊಡ್ಡ ವಿಷಯವಲ್ಲ. ಹಲವು ನಾಯಕರು ಹಲವು ರಾಜ್ಯದಲ್ಲಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ರಾಜಕೀಯಕ್ಕೆ ಸೇರುವ ವಿಚಾರದಲ್ಲಿ ನಟಿ ಅಂಜಲಿ ಹೆಸರು ಕೂಡಾ ಕೇಳಿ ಬರುತ್ತಿದೆ.

ಇತ್ತೀಚೆಗೆ ಅಂಜಲಿ ಸಂಸತ್​​ಗೆ ಭೇಟಿ ನೀಡಿದ್ದು, ಈ ಸುದ್ದಿಗೆ ಇನ್ನಷ್ಟು ರೆಕ್ಕೆಪುಕ್ಕ ತಂದಿದೆ. ಅದೂ ಅಲ್ಲದೆ, ಅಂಜಲಿ ಕೂಡಾ ತನಗೆ ರಾಜಕೀಯದಲ್ಲಿ ಆಸಕ್ತಿ ಇದೆ ಎಂದು ಹೇಳಿಕೊಂಡಿದ್ದಾರೆ.

ಕಾಲಿವುಡ್, ಟಾಲಿವುಡ್​ನಲ್ಲಿ ಅಂಜಲಿ ಸಕ್ರಿಯ ನಟಿ. ಮಲತಾಯಿಯೊಂದಿಗಿನ ಜಗಳ ಮತ್ತು ಸಹನಟ ಜೈ ಜೊತೆಗಿನ ಪ್ರೇಮಸಂಬಂಧದಿಂದ ಇವರು ಸುದ್ದಿಯಾಗಿದ್ದವರು. ಸದ್ಯದ ಮಾಹಿತಿ ಪ್ರಕಾರ ಇವರು ಶೀಘ್ರ ವೈಎಸ್​ಆರ್​ ಕಾಂಗ್ರೆಸ್​​​ಗೆ ಸೇರುವ ಸಾಧ್ಯತೆ ಇದೆ. ಆದರೆ, ಸದ್ಯಕ್ಕೆ ಅಂಜಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!