Friday , October 19 2018
ಕೇಳ್ರಪ್ಪೋ ಕೇಳಿ
Home / Film News / Tollywood / ತೆಲುಗು ಬಿಗ್​ಬಾಸ್​ನಲ್ಲಿ ಕನ್ನಡದ ಅನುರಣನ : ಕನ್ನಡದಲ್ಲಿ ಮಾತನಾಡಿದ ಜೂನಿಯರ್​ ಎನ್​ಟಿಆರ್​

ತೆಲುಗು ಬಿಗ್​ಬಾಸ್​ನಲ್ಲಿ ಕನ್ನಡದ ಅನುರಣನ : ಕನ್ನಡದಲ್ಲಿ ಮಾತನಾಡಿದ ಜೂನಿಯರ್​ ಎನ್​ಟಿಆರ್​

ಹೈದರಾಬಾದ್​ : ತೆಲುಗಿನ ಖ್ಯಾತ ರಿಯಾಲಿಟಿ ಶೋ ಬಿಗ್​ಬಾಸ್​ನಲ್ಲಿ ಕನ್ನಡ ಅನುರಣನಗೊಂಡಿದೆ. ಟಾಲಿವುಡ್​ ಸ್ಟಾರ್​ ಜೂನಿಯರ್ ಎನ್​ಟಿಆರ್ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ. ತಾರಕ ರಾಮ್​ ರಾವ್ ಬಾಯಲ್ಲಿ ಕನ್ನಡ ನಲಿದಾಡಿದ್ದನ್ನು ನೋಡಿದಾಗ ಕನ್ನಡಿಗರೂ ಪುಳಕಗೊಂಡಿದ್ದಾರೆ.

ಅಚ್ಚಕನ್ನಡದ ಸ್ವಚ್ಛ ಮಾತಿಗೆ ಜೂನಿಯರ್ ಎನ್​ಟಿಆರ್ ಖ್ಯಾತಿ. ಇದೀಗ ಇದೇ ಜೂನಿಯರ್​ ಎನ್​ಟಿಆರ್​ ಬಿಗ್​ಬಾಸ್​ ಶೋನಲ್ಲಿ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ… ಕಳೆದ ತಿಂಗಳಿನಿಂದ ತೆಲುಗಿನಲ್ಲಿ ಬಿಗ್​ಬಾಸ್​ ರಿಯಾಲಿಟಿ ಶೋ ನಡೆಯುತ್ತಿದೆ. ಈ ಶೋನಲ್ಲಿ ಕರ್ನಾಟಕ ಮೂಲದ ಸ್ಪರ್ಧಿಯೊಬ್ಬರಿದ್ದಾರೆ. ಈ ಸ್ಪರ್ಧಿಯೊಂದಿಗೆ ಜೂನಿಯರ್ ಎನ್​ಟಿಆರ್ ಕನ್ನಡದಲ್ಲೇ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ…

ಆಂಧ್ರ ಪ್ರದೇಶದಲ್ಲಿ ಮಿಂಚುತ್ತಿದ್ದರುವವರು ತಾರಕ ರಾಮ ರಾವ್​​​​​​ ಜೂನಿಯರ್​ ಎನ್​ಟಿಆರ್​ ಎಂದೇ ಖ್ಯಾತಿ… ಆದರೆ, ಅವಿಭಜಿತ ಆಂಧ್ರಪ್ರದೇಶದಲ್ಲಿ ಮಿಂಚುತ್ತಿರುವ ಈ ಹುಡುಗ ನಮ್ಮ ಕನ್ನಡದ ಕುವರ… ಖಂಡಿತಾ ಇದು ನಿಜ… ತಾರಕ ಅವರ ತಾಯಿಯ ಊರು ಕುಂದಾಪುರ… ಇದನ್ನೇ ಬಿಗ್​ಬಾಸ್​ ಶೋನಲ್ಲಿ ಜೂನಿಯರ್​ ಎನ್​ಟಿಆರ್ ಹೇಳಿದ್ದು…

ಹಾಗಂತ, ಇದೇ ಮೊದಲ ಬಾರಿಗೆ ಜೂನಿಯರ್ ಎನ್​ಟಿಆರ್​​ ಕನ್ನಡದ ಬಗ್ಗೆ ಈ ಅಭಿಮಾನವನ್ನು ತೋರಿದ್ದಲ್ಲ. ಹಲವು ಸಂದರ್ಭದಲ್ಲಿ ಇವರು ತಾನು ಕನ್ನಡಿಗ ಎಂದು ಎದೆತಟ್ಟಿ ಹೇಳಿದ್ದರು… ವಿವಿಧ ಸಮಾರಂಭಗಳಲ್ಲಿ ತಾರಕ್​ರಾಮ್​ ತನ್ನ ಕನ್ನಡ ಪ್ರೀತಿ ತೋರಿದ್ದರು… ಟಾಲಿವುಡ್​​​ನಲ್ಲಿ ಇವರಿಗೆ ಜೂನಿಯರ್​ ಟೈಗರ್ ಎಂಬ ಹೆಸರೂ ಇದೆ. ತೆಲುಗು ಫಿಲಂ ಇಂಡಸ್ಟ್ರಿಯ ಪ್ರತಿಷ್ಠಿತ ಎನ್‌ಟಿ ರಾಮರಾವ್‌ ಕುಟುಂಬದ ಕುಡಿ ತಾರಕ್​​​. ಸದ್ಯ ಟಾಲಿವುಡ್​ನಲ್ಲಿರುವ ಬೇಡಿಕೆಯ ನಟರಲ್ಲಿ ಇವರು ಕೂಡಾ ಒಬ್ಬರು…

ತಾರಕ್ ಅವರ ತಾಯಿಯ ಹೆಸರು ಶಾಲಿನಿ. ಇವರ ಹುಟ್ಟೂರು ಕುಂದಾಪುರ. ಎನ್​ಟಿಆರ್ ಕುಟುಂಬದಂತೆ ಇವರದ್ದೂ ದೊಡ್ಡ ಕುಟುಂಬ… ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ಹೆಣ್ಣು ಮಗಳು ಇವರು. ಇವರು ಬಾಲ್ಯದಲ್ಲಿರುವಾಗಲೇ ಹೈದರಾಬಾದ್​ಗೆ ಹೋಗಿ ಇವರ ಕುಟುಂಬ ನೆಲೆಸಿತ್ತು. ಆದರೆ, ಕನ್ನಡದ ಮೇಲಿನ ಪ್ರೀತಿ ಇವರಿಗೆ ಎಳ್ಳಷ್ಟು ಕಡಿಮೆ ಆಗಿರಲಿಲ್ಲ.

ತಾರಕ್​​ ಹರಿಕೃಷ್ಣ ಮತ್ತು ಶಾಲಿನಿ ದಂಪತಿ ಪುತ್ರ. ಎನ್​ಟಿಆರ್ ಇವರಿಗೆ ತಾತ ಆಗಬೇಕು… ತಾಯಿಯೊಂದಿಗೆ ತಾರಕ್​ ಚಿಕ್ಕಂದಿನಿಂದಲೂ ತಾರಕ್​ ಕುಂದಾಪುರಕ್ಕೆ ಬಂದು ಹೋಗುತ್ತಿದ್ದಾರೆ. ಶಾಲಿನಿ ಅವರು ಕೂಡಾ ಮನೆಯಲ್ಲಿ ಕನ್ನಡ ಮಾತನಾಡುತ್ತಾರೆ. ಹೀಗಾಗಿ, ತಾಯಿಯಿಂದ ತಾರಕ್​ಗೆ ಬಂದ ದೊಡ್ಡ ಕೊಡುಗೆಯಲ್ಲಿ ಕನ್ನಡವೂ ಒಂದು… ಹಾಗೆ ನೋಡಿದರೆ ಹರಿಕೃಷ್ಣ ಅವರ ಎರಡನೇ ಹೆಂಡತಿ ಶಾಲಿನಿ… ಹೀಗಾಗಿ, ಬಹುವರ್ಷಗಳ ಕಾಲ ಇವರು ಸುದ್ದಿಗೆ ಬರದೆ ಎಲೆಮರೆಯಲ್ಲೇ ಇದ್ದವರು… ಯಾವಾಗ ತಾರಕ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿದರೋ ಆಗಲೇ ಇವರು ಬಹಿರಂಗವಾಗಿ ಕಾಣಿಸಿಕೊಳ್ಳಲು ಶುರು ಮಾಡಿದ್ದು… ಶಾಲಿನಿ ಅವರು ಮೊದಲು ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು ಬಹುಶಃ ತಾರಕ್​ ಅಭಿನಯದ ಯಮದೊಂಗ’ ಚಿತ್ರದ ಆಡಿಯೋ ರಿಲೀಸ್​ ಫಂಕ್ಷನ್​ನಲ್ಲಿ… ಬಳಿಕ ಶಾಲಿನಿ ಮಗನೊಂದಿಗೆ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದರು…

ಹಾಗಂತ, ಜೂನಿಯರ್ ಎನ್​ಟಿಆರ್ ಆರಂಭದ ದಿನಗಳು ತುಂಬಾ ಚೆನ್ನಾಗಿತ್ತು ಎಂದಲ್ಲ. ಬಹಳ ಕಷ್ಟಪಟ್ಟು ಅವರು ಸಿನಿಲೋಕದಲ್ಲಿ ಮಿಂಚಿದ್ದರು. ಕೌಟುಂಬಿಕ ವಿಚಾರಗೂ ತಾರಕ್​ ಅವರಿಗೆ ನೋವು ತರಿಸಿದ್ದೂ ಇದೆ. ಆದರೆ, ಇದೆಲ್ಲಾ ಈಗ ಕಳೆದು ಹೋದ ದಿನಗಳು… ಈಗ ಅಂತಹ ನೋವಿಲ್ಲ. ಕುಟುಂಬದಲ್ಲೂ ದೊಡ್ಡಮಟ್ಟದ ಸಮಸ್ಯೆಗಳೇನೂ ಇಲ್ಲ… ಹೀಗಾಗಿ, ಜೂನಿಯರ್ ಎನ್​ಟಿಆರ್​ ಈಗಲೂ ಟಾಲಿವುಡ್​ನಲ್ಲಿ ಟೈಗರ್​… ಇಂತಹ ಹುಡುಗ ಕನ್ನಡದ ಕಂದ ಎಂಬುದನ್ನು ನಮಗೂ ಹೆಮ್ಮೆ, ಅವರಿಗೂ ಒಂಥರಾ ಖುಷಿ…

ಬರೀ ಬಿಗ್​ಬಾಸ್​ನಲ್ಲಿ ಜೂನಿಯರ್ ಎನ್​ಟಿಆರ್ ಮಾತ್ರ ಕನ್ನಡ ಮಾತನಾಡಿಲ್ಲ. ಈ ಹಿಂದೆ ಹಿಂದಿ ಬಿಗ್​ಬಾಸ್​ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್​ ತುಳುವಿನಲ್ಲಿ ಮಾತನಾಡಿ ಗಮನ ಸೆಳೆದಿದ್ದರು.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!