Sunday , September 23 2018
ಕೇಳ್ರಪ್ಪೋ ಕೇಳಿ
Home / Interval / ಸಲ್ಮಾನ್ – ಅಕ್ಷಯ್ ಕುಮಾರ್ ಸ್ನೇಹ ಮುರಿದಳಂತೆ ಆಕೆ…!

ಸಲ್ಮಾನ್ – ಅಕ್ಷಯ್ ಕುಮಾರ್ ಸ್ನೇಹ ಮುರಿದಳಂತೆ ಆಕೆ…!

ಬಾಲಿವುಡ್‍ನಲ್ಲಿ ಜಗಳ ಹೇಗೆಯೋ ಸ್ನೇಹಗಳೂ ದೊಡ್ಡ ಮಟ್ಟದಲ್ಲೇ ಇದೆ. ಹಲವು ಸ್ಟಾರ್‍ಗಳು ಬೇರ್ಪಡಿಸಲಾರದ ಮಟ್ಟಕ್ಕೆ ಸ್ನೇಹಿತರಾಗಿ ಇರುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ದೊಡ್ಡ ಸ್ನೇಹಿತರು. ಆದರೆ, ಒಂದು ಹಂತದಲ್ಲಿ ಈ ಸ್ನೇಹಿತರು ದೂರವೇ ಆಗಿ ಹೋದರು. ಅದಕ್ಕೆ ಕಾರಣ ರೇಶ್ಮಾ ಶೆಟ್ಟಿ ಎಂಬ ಯುವತಿ…

ಆಗ ಸಲ್ಮಾನ್‍ನ ಚಿತ್ರ ಜೀವನದ ಬಗ್ಗೆ ನೋಡಿಕೊಳ್ಳುತ್ತಿದ್ದು ಇದೇ ರೇಶ್ಮಾ. ಅಂದರೆ ರೇಶ್ಮಾ ಸಲ್ಮಾನ್​ನ ಮ್ಯಾನೇಜರ್ ಆಗಿದ್ದಾಕೆ. ಅದು ಬಾಲಿವುಡ್‍ನ ಇನ್ನೋರ್ವ ನಟ ಸಂಜಯ್ ದತ್ ಕಷ್ಟಪಡುತ್ತಿದ್ದ ಕಾಲ. ಹೀಗಾಗಿ, ಸಲ್ಮಾನ್ ತನ್ನ ಸ್ನೇಹಿತ ಸಂಜಯ್ ದತ್‍ಗೂ ಒಳ್ಳೆಯ ಅವಕಾಶ ಬರುವ ಹಾಗೆ ನೋಡಿಕೋ ಎಂದು ರೇಶ್ಮಾಗೆ ಹೇಳಿದ್ದರು. ರೇಶ್ಮಾ ಕೂಡಾ ಸಂಜಯ್‍ಗೆ ಸಿನೆಮಾಗಳು ಸಿಗಲು ಪ್ರಯತ್ನ ಪಡುತ್ತಿದ್ದಳು. ಆದರೆ, ಅವಕಾಶಗಳು ಸಿಗುತ್ತಿರಲಿಲ್ಲ. ಅಲ್ಲದೆ, ಸಂಜು ಹೆಚ್ಚು ಸಂಭಾವನೆ ಕೇಳುತ್ತಾರೆ ಎಂದು ನಿರ್ಮಾಪಕರ ಬಳಿ ಈಕೆ ಹೇಳುತ್ತಿದ್ದಳು ಎಂಬ ಸುದ್ದಿ ಸಂಜಯ್ ಕಿವಿಗೆ ಬಿದ್ದಿತ್ತು. ಇದರಿಂದ ಸಿಟ್ಟಾದ ಸಂಜಯ್ ದತ್ ರೇಷ್ಮಾಳನ್ನು ದೂರು ಮಾಡಿದ್ದರು. ಇದಾದ ಬಳಿಕ ಸಲ್ಮಾನ್ ಖಾನ್ ಜೊತೆಗೇ ಇದ್ದರೂ ರೇಷ್ಮಾ ಮತ್ತು ಸಲ್ಲೂ ಸಂಬಂಧ ಹಳಸಿತ್ತು. ಸಲ್ಮಾನ್ ಕೂಡಾ ಈಕೆಯನ್ನು ದೂರ ಮಾಡಿದ್ದರು.

ಹೀಗೆ ಸಲ್ಮಾನ್‍ರಿಂದ ದೂರವಾದ ರೇಷ್ಮಾ ಮತ್ತೋರ್ವ ಸ್ಟಾರ್ ನಟರೊಂದಿಗೆ ಸೇರಿಕೊಂಡಿದ್ದಳು. ಆ ನಟ ಬೇರೆ ಯಾರೂ ಅಲ್ಲ. ಸಲ್ಮಾನ್ ಆಪ್ತ ಸ್ನೇಹಿತ ಅಕ್ಷಯ್ ಕುಮಾರ್…! ಇದು ಸಲ್ಮಾನ್‍ಗೆ ಸಿಟ್ಟು ತಂದಿತ್ತು. ನನ್ನ ಗೆಳೆಯನಾಗಿ ಅಕ್ಷಯ್ ನಾನು ದೂರ ಮಾಡಿದಾಕೆಯನ್ನು ಹತ್ತಿರ ಸೇರಿಸಿದ್ದಾನಲ್ಲ ಎಂಬ ಸಿಟ್ಟದು. ಈ ಸಿಟ್ಟು ತಾರಕಕ್ಕೇರಿ ಸಲ್ಮಾನ್ ಮತ್ತು ಅಕ್ಷಯ್ ದೂರವೇ ಆಗಿ ಹೋದರು…! ಹೇಗಿದೆ ಅಲ್ವಾ ಪರಿಸ್ಥಿತಿ…?

About sudina

Check Also

ಟೆರರಿಸ್ಟ್ ಅಂತ ಸುನಿಲ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದ ಅಮೇರಿಕಾ ಪೊಲೀಸ್…!

ಯಾರಿಗಾದರೂ ಅಮೇರಿಕಾ ಪ್ರವಾಸ ಮಾಡೋದು ಅಂದರೆ ಅದೊಂದು ಹೆಮ್ಮೆ… ಇದರಲ್ಲಿ ಬಾಲಿವುಡ್ ಕಲಾವಿದರೂ ಹೊರತಾಗಿಲ್ಲ. ಆದ್ರೆ, ಹೀಗೆ ಅಮೇರಿಕಾಕ್ಕೆ ಹೋದಾಗ …

Leave a Reply

Your email address will not be published. Required fields are marked *

error: Content is protected !!