Sunday , November 18 2018
ಕೇಳ್ರಪ್ಪೋ ಕೇಳಿ
Home / Gulf News / ಹಕ್ಕಿ ಜ್ವರ : ಯುಎಇಗೆ ಫಿಲಿಪೀನ್ಸ್​​​​​ನಿಂದ ಆಮದಾಗುತ್ತಿದ್ದ ಕೋಳಿಗೆ ಬ್ರೇಕ್​…!

ಹಕ್ಕಿ ಜ್ವರ : ಯುಎಇಗೆ ಫಿಲಿಪೀನ್ಸ್​​​​​ನಿಂದ ಆಮದಾಗುತ್ತಿದ್ದ ಕೋಳಿಗೆ ಬ್ರೇಕ್​…!

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್​ ಬ್ಯುರೋ

ದುಬೈ : ಫಿಲಿಪೀನ್ಸ್​ನಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದೆ. ಇಲ್ಲಿ ಮೊದಲ ಹಕ್ಕಿಜ್ವರದ ಪ್ರಕರಣ ದಾಖಲಾಗಿದ್ದು, ಇದರ ನೇರ ಪರಿಣಾಮ ಕೋಳಿ ರಫ್ತಿನ ಮೇಲಾಗಿದೆ. ಯಾವಾಗ ಫಿಲಿಪೀನ್ಸ್​ನಲ್ಲಿ ಹಕ್ಕಿಜ್ವರದ ಭೀತಿ ಎದುರಾಯಿತೋ ತಕ್ಷಣ ಎಚ್ಚೆತ್ತುಕೊಂಡ ಸಂಯುಕ್ತ ಅರಬ್​ ರಾಷ್ಟ್ರಗಳು ಫಿಲಿಪೀನ್ಸ್​ನಿಂದ ಆಮದಾಗುತ್ತಿದ್ದ ಕೋಳಿಗೆ ಬ್ರೇಕ್​ ಹಾಕಿದೆ.

ಅರಬ್​ ರಾಷ್ಟ್ರದ ಜನರ ಆರೋಗ್ಯದ ದೃಷ್ಟಿಯಿಂದ ಪರಿಸರ ಇಲಾಖೆ ಈ ಕ್ರಮ ಕೈಗೊಂಡಿದೆ. ವರ್ಲ್ಡ್​ ಆಗ್ರನೈಷೇಷನ್​​ ಫಾರ್ ಅನಿಮಲ್ ಹೆಲ್ತ್​ನ ಅಧಿಸೂಚನೆಯ ಹಿನ್ನೆಲೆಯಲ್ಲಿ ಅರಬ್​ ರಾಷ್ಟ್ರಗಳು ಈ ಮುನ್ನೆಚ್ಚರಿಕೆ ಕೈಗೊಂಡಿದೆ.

ಈ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಫಿಲಿಪೀನ್ಸ್​​​ ಸುಮಾರು 2 ಲಕ್ಷದಷ್ಟು ಕೋಳಿ, ಬಾತುಕೋಲಿ ಮತ್ತು ಗವುಜುಗವನ್ನು ಕೊಂದಿದೆ. ಹಕ್ಕಿಜ್ವರ ಇನ್ನಷ್ಟು ವ್ಯಾಪಿಸಬಾರದು ಎಂಬ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!