Tuesday , February 19 2019
ಕೇಳ್ರಪ್ಪೋ ಕೇಳಿ
Home / Film News / Bollywood / ಸತತ ಸೋಲು ಕಂಡಿರುವ ಶಾರೂಖ್ ಮುಂದಿನ ಹೆಜ್ಜೆ ಹೇಗಿರಬೇಕು…?

ಸತತ ಸೋಲು ಕಂಡಿರುವ ಶಾರೂಖ್ ಮುಂದಿನ ಹೆಜ್ಜೆ ಹೇಗಿರಬೇಕು…?

ಮುಂಬೈ : ಬಾಲಿವುಡ್ ಕಿಂಗ್​ ಖಾನ್​ ಶಾರೂಖ್ ಖಾನ್​ ಈಗ ಸತತ ಸೋಲುಣ್ಣುತ್ತಿದ್ದಾರೆ… ಎರಡು ವರ್ಷದಿಂದ ಶಾರೂಖ್ ಗೆಲುವಿನ ಸಿಹಿಯನ್ನೇ ಅನುಭವಿಸಿಲ್ಲ. ಹೀಗಾಗಿ, ಶಾರೂಖ್​ ಮತ್ತೆ ಗೆಲುವಿನ ಹಳಿಗೆ ಮರಳಬೇಕಾದರೆ ಏನು ಮಾಡಬೇಕೆಂದು ಒಂದಷ್ಟು ಹಿರಿಯರು ಸಲಹೆ ನೀಡಿದ್ದಾರೆ…

ಕಿಂಗ್​ ಖಾನ್ ಶಾರೂಖ್​ ಈಗ ನೊಂದಿದ್ದಾರೆ. ಕಾರಣ, ಸತತ ಸೋಲು… ಕಳೆದ ಎರಡು ವರ್ಷದಿಂದ ಶಾರೂಖ್​ ಗೆಲುವನ್ನೇ ಕಂಡಿಲ್ಲ… ಮಾಡಿದ ಅಷ್ಟೂ ಸಿನೆಮಾಗಳು ಪ್ಲಾಪ್​​​…ಈ ಸತತ ಸೋಲಿನಿಂದ ಕಂಗೆಟ್ಟಿದ್ದ ಶಾರೂಖ್ ಬಹಳ ನಿರೀಕ್ಷೆ ಇಟ್ಟುಕೊಂಡು ಮಾಡಿದ ಚಿತ್ರ ಜಬ್ ಹ್ಯಾರಿ ಮೆಟ್ ಸೇಜಲ್​​…ಅನುಷ್ಕಾ ಶರ್ಮಾ ಮತ್ತು ಶಾರೂಖ್ ಅಭಿನಯದ ಈ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿತ್ತಾದರೂ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಮಾಡಿದ ಸಾಧನೆ ಅಷ್ಟಕಷ್ಟೇ…ಈ ಚಿತ್ರ ಕೂಡಾ ಬಾಕ್ಸ್ ಆಫೀಸ್​ನಲ್ಲಿ ಕುಂಟುತ್ತಾ ಕುಂಟುತ್ತಾ ಸಾಗುತ್ತಿದೆ… ಬಾಲಿವುಡ್ ಬಾದ್​ಶಾನ ಸಿನಿಜೀವನದ ಪಯಣದಲ್ಲಿ ಸೇಜಲ್​ ಚಿತ್ರದ ಸೋಲು ಕೂಡಾ ದೊಡ್ಡ ಮಟ್ಟದ ಆಘಾತವನ್ನೇ ತಂದಿದೆ…

ಕಳೆದ ಎರಡು ವರ್ಷದಿಂದ ಶಾರೂಖ್ ಚಿತ್ರಗಳ ಸಾಧನೆ ಅಷ್ಟಕಷ್ಟೇ… ದಿಲ್​ವಾಲೆ ಮತ್ತು ರಾಯಿಸ್​​ ಚಿತ್ರ ಕೂಡಾ ದೊಡ್ಡ ಮಟ್ಟದ ಸಾಧನೆಯನ್ನು ಮಾಡಿಲ್ಲ. ಆದರೆ, ಈ ಚಿತ್ರಗಳು 130 ಕೋಟಿ ಗಡಿ ಮುಟ್ಟಿದ್ದವು ಎಂಬುದಷ್ಟೇ ಖುಷಿ… ಆದರೆ, ಈ ಸಾಧನೆ ಮಾಡುವಾಗಲೂ ಈ ಎರಡು ಚಿತ್ರಗಳು ಕುಟುಂತಾ ಕುಟುಂತಾ ಸಾಗಿದ್ದವು… ಇದಾದ ಬಳಿಕ ಫ್ಯಾನ್​​ ಚಿತ್ರ 100 ಕೋಟಿ ಕ್ಲಬ್​ ಸೇರುವುದಕ್ಕೂ ವಿಫಲವಾಗಿತ್ತು… ಈ ಚಿತ್ರ ಟಿಪಿಕಟ್​ ಎಂಟಟೈನರ್​ ಅಲ್ಲ ಎಂಬ ಕಾರಣಕ್ಕೆ ಸೋತಿತ್ತು ಎಂಬುದು ವಿರ್ಮಶಾಕಾರರ ಮಾತು… ಆದರೆ, ಜಬ್​ ಹ್ಯಾಟಿ ಮೆಟ್​ ಸೇಜಲ್​ ಚಿತ್ರ ಹಾಗಲ್ಲ. ಇದೊಂದು ರೊಮ್ಯಾಂಟಿಕ್ ಚಿತ್ರ. ಎರಡು ಸೂಪರ್​ಹಿಟ್​ ಚಿತ್ರಗಳಲ್ಲಿ ಶಾರೂಖ್ ಜೊತೆಯಾಗಿದ್ದ ಅನುಷ್ಕಾ ಇಲ್ಲಿ ನಾಯಕಿಯಾಗಿದ್ದರು… ಆದರೂ ಈ ಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಸೋತಿದೆ…

ಈ ಸತತ ಸೋಲಿನಿಂದ ಹೊರಬರಲು ಶಾರೂಖ್​ ಏನು ಮಾಡಬೇಕು… ಇದಕ್ಕೆ ಬಿ ಟೌನ್​ನ ಹಿರಿಯರು ಮತ್ತು ತಜ್ಞರು ಸಲಹಾ ರೂಪದಲ್ಲಿ ಶಾರೂಖ್​ಗೆ ಒಂದಷ್ಟು ಮಾತು ಹೇಳಿದ್ದಾರೆ. ಶಾರೂಖ್​​ ಖಾನ್​ ಇನ್ನು ತನ್ನ ವಯಸ್ಸಿಗೆ ಸೂಟ್ ಆಗುವಂತಹ ಪಾತ್ರ ಮಾಡಬೇಕು ಎನ್ನುವುದು ಚಿತ್ರ ವಿತರಕ ಹರ್ವೀರ್ ಸಿಂಗ್ ಮಾತು… ಇನ್ನೋರ್ವ ವಿತರಕ ರಾಜೇಶ್​ ತದಾನಿ ಮಾತು ಕೂಡಾ ಬಹುತೇಕ ಇದೇ… ಶಾರೂಖ್​ ಸರಿಯಾದ ಪಾತ್ರವನ್ನೇ ಆಯ್ಕೆ ಮಾಡಿಕೊಳ್ಳಬೇಕು. ಯುವ ನಟಿಯರೊಂದಿಗೆ ಇವರು ರೊಮ್ಯಾಂಟಿಕ್ ಚಿತ್ರದಲ್ಲಿ ನಟಿಸಬಾರದು ಎಂಬುದು ರಾಜೇಶ್ ಅವರ ಮಾತು…

ಇನ್ನು, ಕೆಲವರು ಶಾರೂಖ್​​ ಡಾನ್​, ಡಾನ್​ ತ್ರಿ ತರ ಆಕ್ಷನ್​ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಂತೆ. ಚಕ್​ ದೇ ಇಂಡಿಯಾ ತರಹದ ಚಿತ್ರಗಳಲ್ಲೂ ಶಾರೂಖ್ ನಟಿಸಲಿ ಎಂಬುದು ಕೆಲವರ ಕಿವಿಮಾತು. ಕೆಲವರ ಪ್ರಕಾರ ಶಾರೂಖ್​ ಅಮೀರ್ ಖಾನ್​ರಂತೆ ಸಖತ್ ಚ್ಯೂಸಿ ಆಗಿರಬೇಕಂತೆ…

ಹೌದು, ವಯಸ್ಸಿಗೆ ತಕ್ಕಂತೆ ಪಾತ್ರಗಳ ಆಯ್ಕೆ ಮಾಡಿಕೊಂಡರೆ ಸಿನಿಲೋಕದಲ್ಲಿ ತುಂಬಾ ವರ್ಷ ನಿಲ್ಲುವುದಕ್ಕೆ ಸಾಧ್ಯ… ಬಿಗ್​ ಬಿ ಅಮಿತಾಭ್ ಅವರನ್ನು ನೋಡಿ. ಅವರು ಇನ್ನು ಎರಡು ವರ್ಷ ಫುಲ್​ ಬ್ಯುಸಿ. ಈ ವಯಸ್ಸಿನಲ್ಲೂ ಅಮಿತಾಭ್​ ಕೈಯಲ್ಲಿ ಅಷ್ಟು ಪ್ರಾಜೆಕ್ಟ್​​ಗಳಿವೆ.. ಅಮೀರ್ ಖಾನ್ ಕೂಡಾ ಅಷ್ಟೇ. ಅವರು ಟಿಪಿಕಲ್ ಹೀರೋ ರೋಲ್​ ಗಾಗಿಯೇ ಕಾಯುತ್ತಿಲ್ಲ. ಪಾತ್ರ ಮತ್ತು ಕಾನ್ಸೆಪ್ಟ್​​ಗೆ ಅನುಗುಣವಾಗಿ ಅಮೀರ್ ಚಿತ್ರ ಮಾಡುತ್ತಿದ್ದಾರೆ. ಇದು ಕೂಡಾ ಇವರ ಗೆಲುವಿಗೆ ಒಂದು ಕಾರಣ ಇರಬಹುದು…

ಶಾರೂಖ್ ಮುಂದಿನ ಚಿತ್ರದಲ್ಲಿ ಕುಬ್ಜನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೆ ಇದು ಅಷ್ಟೇನು ಸೆಳೆತಕ್ಕೆ ಒಳಗಾಗುವಂತಹ ಪಾತ್ರ ಎಂದು ಹೇಳೋದಕ್ಕೆ ಸಾಧ್ಯ ಇಲ್ಲ. ಈ ಪರ ವಿರೋಧದ ಮಾತಿನ ನಡುವೆಯೂ ಶಾರೂಖ್ ನಿವೃತ್ತಿ ಹೊಂದಲಿ, ಮಗ ಆರ್ಯನ್​ನನ್ನು ಚಿತ್ರರಂಗಕ್ಕೆ ಪರಿಚಯಿಸಿ ತಾನು ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿ ಎಂದು ಹೇಳಿದವರೂ ಇದ್ದಾರೆ…!

ಆದರೆ, ಯಾರು ಏನು ಹೇಳಿದರೂ ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಶಾರೂಖ್​ಗೆ ಇದೆ.  ಅದೂ ಅಲ್ಲದೆ, ಸತತ ಸೋಲು ಕಂಡವರು ಮತ್ತೆ ಗೆಲುವೇ ಕಾಣಲಾರರು ಎಂದೇನಿಲ್ಲ. ಸಿನಿಲೋಕದಲ್ಲಿ ಸೋಲು ಗೆಲುವು ಸಾಮಾನ್ಯ. ಇಷ್ಟು ವರ್ಷದಿಂದ ಬಣ್ಣದ ಲೋಕದಲ್ಲಿರುವ ಶಾರೂಖ್ ಇಂತಹ ಸಿಹಿ ಮತ್ತು ಕಹಿ ಎದುರಿಸಲು ಮಾನಸಿಕವಾಗಿ ಸಜ್ಜಾಗಿಯೂ ಇರುತ್ತಾರೆ… ಹಾಗಾಗಿ, ಶಾರೂಖ್​ ಅವರ ಸಿನಿಜೀವನ ಮತ್ತೆ ಗೆಲುವಿನ ಹಳಿಗೆ ಮರಳಲಿ, ಶಾರೂಖ್ ಮತ್ತೆ ಕಿಂಗ್​ ಖಾನ್ ಆಗಿಲಿ ಎಂಬುದೇ ಅವರ ಅಭಿಮಾನಿಗಳ ಹಾರೈಕೆ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!