Saturday , February 16 2019
ಕೇಳ್ರಪ್ಪೋ ಕೇಳಿ
Home / News NOW / ಕೆಂಪುಕೋಟೆಯಲ್ಲಿ ಹಾರಿದ ತಿರಂಗ

ಕೆಂಪುಕೋಟೆಯಲ್ಲಿ ಹಾರಿದ ತಿರಂಗ

ನವದೆಹಲಿ : 71ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ದೇಶಾದ್ಯಂತ ಮೇರೆ ಮೇರಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿ ದೇಶದ ಜನರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಹೇಳಿದ್ದಾರೆ.

ಧ್ವಜಾರೋಹಣ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸ್ವರಾಜ್ಯದ ಕನಸು ನನಸಾಗಬೇಕು, ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ, ವರ್ಣಬೇಧ ನೀತಿ ಮರೆಯಾಗಬೇಕು ಎಂದು ಹೇಳಿದರು. ಅಲ್ಲದೆ, ಎಲ್ಲರೂ ಹೊಸ ಭಾರತ ಕಟ್ಟುವತ್ತ ಗಮನ ಹರಿಸಬೇಕು ಎಂದು ಸಂದೇಶ ನೀಡಿದರು.

ಇದೇ ವೇಳೆ, ನೋಟ್ ಬ್ಯಾನ್ ಕ್ರಮವನ್ನು ಸಮರ್ಥಿಸಿಕೊಂಡ ಪ್ರಧಾನಿ, ದೇಶದ ಕಪ್ಪು ಹಣ ಹೊರಗೆ ತರಲು ಈ ಕ್ರಮ ಸಹಕಾರಿಯಾಗಿದೆ ಎಂದರು. ಇನ್ನು, ಗೋರಖ್​ಪುರ ಆಸ್ಪತ್ರೆಯಲ್ಲಿ ಅಸುನೀಗಿದ ಕಂದಮ್ಮಗಳ ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಪ್ರಧಾನಿ, ಮುಗ್ಧ ಮಕ್ಕಳ ಕುಟುಂಬದೊಂದಿಗಡೆ ಇಡೀ ದೇಶವೇ ನಿಲ್ಲುತ್ತದೆ ಎಂಬ ಧೈರ್ಯ ತುಂಬಿದರು.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!