Monday , September 24 2018
ಕೇಳ್ರಪ್ಪೋ ಕೇಳಿ
Home / Sandalwood / ಚೌತಿಗೆ ಬರುತ್ತಿದ್ದಾನೆ ಸಾಹೇಬ, ಮುಗುಳುನಗೆ, ಭರ್ಜರಿ ರಿಲೀಸ್ ಡೇಟ್ ಮುಂದಕ್ಕೆ

ಚೌತಿಗೆ ಬರುತ್ತಿದ್ದಾನೆ ಸಾಹೇಬ, ಮುಗುಳುನಗೆ, ಭರ್ಜರಿ ರಿಲೀಸ್ ಡೇಟ್ ಮುಂದಕ್ಕೆ

ಬೆಂಗಳೂರು : ಕ್ರೇಜಿಸ್ಟಾರ್ ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಅಭಿನಯದ ಸಾಹೇಬ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಗೌರಿ ಗಣೇಶ ಹಬ್ಬದಂದು ಮನೋರಂಜನ್ ಚಿತ್ರ ತೆರೆಗೆ ಬರುತ್ತಿದೆ. ಈ ಮೂಲಕ ಆಗಸ್ಟ್ 25 ರಂದು ಅಧಿಕೃತವಾಗಿ ಮನೋರಂಜನ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಭರತ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ಇನ್ನು, ಸಾನ್ವಿ ಶ್ರೀವಾತ್ಸವ್ ಮನೋರಂಜನ್‍ಗೆ ನಾಯಕಿಯಾಗಿದ್ದಾರೆ.

ಇತ್ತ, ಗೌರಿ ಗಣೇಶ ಹಬ್ಬಕ್ಕೆ ರಿಲೀಸ್ ಆಗುತ್ತದೆ ಎನ್ನಲಾಗುತ್ತಿದ್ದ ಎರಡು ಚಿತ್ರಗಳ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಯೋಗರಾಜ್ ಭಟ್ ನಿರ್ದೇಶನದ ಮುಗುಳುನಗೆ ಮತ್ತು ಧ್ರುವ ಸರ್ಜಾ ಅಭಿನಯದ ಭರ್ಜರಿ ಚಿತ್ರ ಚೌತಿ ವೇಳೆಗೆ ರಿಲೀಸ್ ಆಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಈ ಎರಡೂ ಚಿತ್ರಗಳ ಬಿಡುಗಡೆ ದಿನಾಂಕ ಈಗ ಮುಂದಕ್ಕೆ ಹೋಗಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!