Monday , June 25 2018
ಕೇಳ್ರಪ್ಪೋ ಕೇಳಿ
Home / News NOW / ಭಾಸ್ಕರ್​ ಶೆಟ್ಟಿ ಮರ್ಡರ್​ ಕೇಸ್​ನಲ್ಲಿ ಟ್ವಿಸ್ಟ್​ : ಡೆತ್​ ಸರ್ಟಿಫಿಕೇಟ್ ರದ್ದು ಮಾಡಲು ಪತ್ನಿ ಮನವಿ…!

ಭಾಸ್ಕರ್​ ಶೆಟ್ಟಿ ಮರ್ಡರ್​ ಕೇಸ್​ನಲ್ಲಿ ಟ್ವಿಸ್ಟ್​ : ಡೆತ್​ ಸರ್ಟಿಫಿಕೇಟ್ ರದ್ದು ಮಾಡಲು ಪತ್ನಿ ಮನವಿ…!

ಉಡುಪಿ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ. ಭಾಸ್ಕರ್ ಶೆಟ್ಟಿ ಡೆತ್​ ಸರ್ಟಿಫಿಕೇಟ್​ಗೆ ಹತ್ಯೆ ಕೇಸ್​ನಲ್ಲಿ ಜೈಲಿನಲ್ಲಿರುವ ಅವರ ಪತ್ನಿ ರಾಜೇಶ್ವರಿ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಈ ಮರಣ ಪ್ರಮಾಣ ಪತ್ರವನ್ನು ರದ್ದು ಮಾಡಬೇಕೆಂದು ರಾಜ್ಯ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

ಈ ಅರ್ಜಿ ನ್ಯಾಯಮೂರ್ತಿ ಎ.ಎಸ್.ಬೋಪಯ್ಯ ಅವರ ಏಕಸದಸ್ಯ ಪೀಠದ ಮುಂದೆ ಬಂದಿದ್ದು, ವಿಚಾರಣೆ ನಡೆಸಿದ ನ್ಯಾಯಪೀಠ, ಕಂದಾಯ ಇಲಾಖೆ, ವಕೀಲರು, ಭಾಸ್ಕರ್​ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ, ಮಣಿಪಾಲ ಪೊಲೀಸರು, ಕಾರ್ಕಳ ತಹಸೀಲ್ದಾರ್​​​​ ಮತ್ತು ಜನನ ಮತ್ತು ಮರಣ  ನೋಂದಣಿ ಕಚೇರಿಗೆ ನೊಟೀಸ್​​​​ ಜಾರಿ ಮಾಡಿದೆ ಎನ್ನಲಾಗಿದೆ.

ಸದ್ಯದ ವರೆಗೆ ನಾಪತ್ತೆ ಪ್ರಕರಣ ದಾಖಲಾಗಿದೆ. ಭಾಸ್ಕರ್​ ಶೆಟ್ಟಿ ಅವರ ಮೃತದೇಹದ ಅವಶೇಷಗಳು ಇನ್ನೂ ಸಿಕ್ಕಿಲ್ಲ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಮರಣ ಪ್ರಮಾಣ ಪತ್ರ ನೀಡಲಾಗಿದೆ ಎಂದು ದೂರುದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಭಾಸ್ಕರ್ ಶೆಟ್ಟಿ ಅವರ ಆಸ್ತಿ ಕಬಳಿಸುವ ಸಲುವಾಗಿಯೇ ಈ ಮರಣಪ್ರಮಾಣ ಪತ್ರ ಸಿದ್ಧ ಮಾಡಲಾಗಿದೆ ಎಂದು ರಾಜೇಶ್ವರಿ ಶೆಟ್ಟಿ ದೂರಿದ್ದಾರೆ.

ರಾಜೇಶ್ವರಿ ಶೆಟ್ಟಿ ಅವರೇ ಭಾಸ್ಕರ್ ಶೆಟ್ಟಿ ಅವರನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಶ್ವರಿ ಶೆಟ್ಟಿ ಪುತ್ರ ನವನೀತ್ ಶೆಟ್ಟಿ, ಜ್ಯೋತಿಷಿ ನಿರಂಜನ್ ಭಟ್ ಇನ್ನೂ ಬಂಧನದಲ್ಲಿದ್ದಾರೆ.

About sudina

Check Also

ಬಂಟ್ವಾಳ : ತಾಲೂಕಿನ ವಿವಿಧ ಸುದ್ದಿಗಳ ಒಂದು ನೋಟ

ರೈಲಿನಡಿಗೆ ಬಿದ್ದು ಸಾವು : ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮೆಮಾರ್ …

Leave a Reply

Your email address will not be published. Required fields are marked *

error: Content is protected !!