Wednesday , March 20 2019
ಕೇಳ್ರಪ್ಪೋ ಕೇಳಿ
Home / Sandalwood / ರವಿಚಂದ್ರನ್​ ಕೃಷ್ಣಾವತಾರ : ಆಗಸ್ಟ್​ 28ರಿಂದ ಶೂಟಿಂಗ್ ಶುರು

ರವಿಚಂದ್ರನ್​ ಕೃಷ್ಣಾವತಾರ : ಆಗಸ್ಟ್​ 28ರಿಂದ ಶೂಟಿಂಗ್ ಶುರು

ಬೆಂಗಳೂರು : ಕ್ರೇಜಿಸ್ಟಾರ್ ರವಿಚಂದ್ರನ್ ಕುರುಕ್ಷೇತ್ರ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬುದು ಹಳೇ ಸುದ್ದಿ. ದರ್ಶನ್ ಅಭಿನಯದ 50ನೇ ಚಿತ್ರದಲ್ಲಿ ರವಿಚಂದ್ರನ್​ಗೆ ಕೃಷ್ಣನ ಪಾತ್ರ. ಬಹುತಾರಾಗಣದ ಈ ಕುರುಕ್ಷೇತ್ರ ಮಹಾಭಾರತದ ಕತೆಯಾಧರಿಸಿದ ಚಿತ್ರ… ಕೃಷ್ಣನ ಪಾತ್ರಕ್ಕಾಗಿ ಕ್ರೇಜಿಸ್ಟಾರ್ ತುಂಬಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇಷ್ಟು ದಿನ ಲವರ್​ ಬಾಯ್​ ಪಾತ್ರವನ್ನೇ ಮಾಡುತ್ತಿದ್ದ ರವಿ ಇದೇ ಮೊದಲ ಬಾರಿಗೆ ಪೌರಾಣಿಕ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೀಗಾಗಿ, ರವಿಗೂ ಇದು ಹೊಸ ಅನುಭವ… ಕೃಷ್ಣನ ಪಾತ್ರ ನಿರ್ವಹಣೆಗೆ ರವಿ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ… ಕಳೆದ ಶಿವರಾತ್ರಿಯಂದು ಪ್ರಮುಖ  ಉದ್ದೇಶವನ್ನಿಟ್ಟುಕೊಂಡು ರವಿ ಮಾಂಸಾಹಾರ ತ್ಯಜಿಸಿದ್ದರು. ಆಗಿನ್ನೂ ಕೃಷ್ಣನ ಪಾತ್ರ ನಿರ್ವಹಿಸುವ ಸುಳಿವು ರವಿಗೆ ಇರಲಿಲ್ಲ. ಆದರೆ, ಈಗ ತ್ಯಜಿಸಿರುವ ಮಾಂಸಾಹಾರವನ್ನು ಕೃಷ್ಣ ಪಾತ್ರ ನಿರ್ವಹಣೆ ಮುಗಿಯುವವರೆಗೂ ಮುಂದುವರಿಸಲು ನಿರ್ಧರಿಸಿದ್ದಾರೆ ರವಿಚಂದ್ರನ್​…  ಅಲ್ಲಿಂದ ಇಲ್ಲಿ ತನಕ ರವಿ ಮಾಂಸಾಹಾರವನ್ನೇ ಮುಟ್ಟಿಲ್ಲ…

ಕೃಷ್ಣನ ಪಾತ್ರ ಅಂದರೆ ಅದು ಬರೀ ಪಾತ್ರವಲ್ಲ. ಕೃಷ್ಣ ಜನರ ಮನಸ್ಸಿನಲ್ಲಿ ಭಕ್ತಿಯ ರೂಪದಲ್ಲಿ ಸ್ಥಾನ ಪಡೆದಿರುವ ದೇವರು… ಹಲವರ ಇಷ್ಟ ದೈವ ಕೃಷ್ಣ. ಹೀಗಾಗಿ, ಶೃದ್ಧೆ ಭಕ್ತಿಯಿಂದಲೇ ಕೃಷ್ಣನ ಪಾತ್ರ ನಿರ್ವಹಿಸಬೇಕಾಗಿದೆ… ಇದೇ ಕಾರಣದಿಂದ ದೈವಭಕ್ತರಾದ ರವಿಚಂದ್ರನ್ ಅವರು ಕೂಡಾ ಭಕ್ತಿಯಿಂದಲೇ ಈ ಪಾತ್ರವನ್ನು ನಿರ್ವಹಿಸುವ ಮನಸ್ಸು ಮಾಡಿದ್ದಾರೆ…

ಆದರೆ, ಈ ಕೃಷ್ಣನ ಪಾತ್ರ ನಿರ್ವಹಣೆಯ ವಿಚಾರದಲ್ಲಿ ರವಿಚಂದ್ರನ್ ಮುಂದೆ ಇದೆ ಹಲವು ಸವಾಲು… ನಿಜ. ರವಿಚಂದ್ರನ್​ ಯಾವ ಪಾತ್ರವನ್ನೂ ಕೊಟ್ಟರೂ ನಿಭಾಯಿಸುವ ತಾಕತ್ತು ಇರುವ ನಟ… ಇದರ ಬಗ್ಗೆ ಸಂಶಯವೇ ಇಲ್ಲ… ಆದರೆ, ಕೃಷ್ಣನ ಪಾತ್ರ ರವಿ ಅವರಿಗೂ ಹೊಸ ಅನುಭವ… ಹೀಗಾಗಿ, ಸವಾಲುಗಳು ಇದ್ದದ್ದೇ… ಕೃಷ್ಣ ಅಂದರೆ ನಮ್ಮ ಮನಸ್ಸಿನಲ್ಲಿ ಚೆಲುವಾಂತ ಚೆನ್ನಿಗನ ಚಿತ್ರಣ ಮೂಡುತ್ತದೆ… ತಮ್ಮ ಇಷ್ಟಮೂರ್ತಿಯನ್ನು ಜನ ಕೂಡಾ ತಮ್ಮ ಮನಸ್ಸಿನಲ್ಲಿ ಸುಂದರವಾಗಿಯೇ ಚಿತ್ರಿಸಿಕೊಂಡಿದ್ದಾರೆ… ಹೀಗಾಗಿ, ಬೆಳ್ಳಿಪರದೆಯಲ್ಲೂ ಕೃಷ್ಣನನ್ನು ಅಷ್ಟೇ ಸುಂದರವಾಗಿ ತೋರಿಸುವ ಅಗತ್ಯ ಇದೆ… ಇದೊಂದು ಸವಾಲು ಹೌದು…

ಮುರಾರಿಯ ದೇಹಸಿರಿಯೇ ಸುಂದರ. ನಯ ನಾಜೂಕು.. ಆದರೆ, ಈ ದೇಹಸಿರಿ ಆ ಪಾತ್ರವನ್ನು ನಿರ್ವಹಿಸುವ ರವಿಚಂದ್ರನ್​ ಅವರಿಗೆ ಇಲ್ಲ. ಯಾಕೆಂದರೆ, ತೂಕ ಜಾಸ್ತಿ ಇದೆ, ಹೊಟ್ಟೆ ದೊಡ್ಡದಿದೆ… ಹೀಗಾಗಿ, ರವಿ ಅವರು ಹಲವು ದಿನಗಳಿಂದ ತೂಕ ಇಳಿಸುವತ್ತ ಗಮನ ಹರಿಸುತ್ತಿದ್ದಾರೆ. ಹೀಗೆ ಡಯಟ್​ ಶುರು ಮಾಡಿರುವ ರವಿ ಮಾಂಸಾಹಾರವನ್ನೂ ಬಿಟ್ಟಿರುವುದು ಲಾಭವೇ ಆಗಿದೆ. ಇನ್ನು, ಕಾಫಿ ಕೂಡಾ ಕುಡಿಯುತ್ತಿಲ್ಲ. ಹೀಗೆ ಹಲವು ತಿಂಗಳ ಫಲವಾಗಿ ರವಿಚಂದ್ರನ್​ 8 ಕೇಜಿ ತೂಕವನ್ನೂ ಇಳಿಸಿಕೊಂಡಿದ್ದಾರಂತೆ.

ಇನ್ನು, ಭಾಷೆಯ ಶುದ್ಧತೆ. ಕುರುಕ್ಷೇತ್ರ ಚಿತ್ರದಲ್ಲಿ ಬಳಕೆಯಾಗುವುದು ಆಡು ಮಾತಿನ ಕನ್ನಡವಲ್ಲ… ಗ್ರಾಂಥಿಕವಾದ ಕನ್ನಡ ಇಲ್ಲಿ ಬೇಕು… ಹೀಗಾಗಿ, ಭಾಷೆಯ ಹಿಡಿತ ಇಲ್ಲಿ ಬೇಕೇಬೇಕು… ಉಚ್ಛಾರವೂ ಶುದ್ಧ ಇರಬೇಕು… ಇದನ್ನಾದರೂ ಹೇಗಾದರೂ ನಿಭಾಯಿಸಬಹುದೇನೋ… ಆದರೆ, ರವಿ ನಿರ್ವಹಿಸುವುದು ಕೃಷ್ಣನ ಪಾತ್ರವನ್ನು… ಇಲ್ಲಿ ಸಂಸ್ಕೃತದ ಶ್ಲೋಕ ಎಲ್ಲಾದರೂ ಒಂದು ಕಡೆ ಬಳಕೆ ಆಗಿಯೇ ಆಗುತ್ತದೆ… ಈ ಶ್ಲೋಕಗಳಿಗೆ ಅದರದ್ದೇ ಆದ ಗಾಂಭೀರ್ಯತೆ ಇರುತ್ತದೆ… ಹೀಗಾಗಿ, ಇವುಗಳ ಅಧ್ಯಾಯನವೂ ಅಗತ್ಯ… ಹೀಗಾಗಿ, ರವಿ ಅವರು ಕೂಡಾ ಮಾನಸಿಕವಾಗಿ ಇದಕ್ಕೆ ಸಜ್ಜಾಗುತ್ತಿದ್ದಾರೆ…

ಇನ್ನು, ಇದೇ ಮೊದಲ ಬಾರಿಗೆ ಮೀಸೆ ಇಲ್ಲದೆ ರವಿ ಅವರನ್ನು ನೋಡುವ ಭಾಗ್ಯವೂ ಬಂದಿದೆ… ರವಿ ಅವರಿಗೂ ಮೀಸೆ ಇಲ್ಲದೆ ತಾನು ಹೇಗೆ ಕಾಣುತ್ತೇನೆ ಎಂಬ ಕುತೂಹಲ ಇದೆ… ಇದೇ ತಿಂಗಳ 28 ರಿಂದ ರವಿಚಂದ್ರನ್ ಭಾಗದ ಶೂಟಿಂಗ್ ನಡೆಯುಲಿದೆ ಎಂದು ಗೊತ್ತಾಗಿದೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!