Monday , October 22 2018
ಕೇಳ್ರಪ್ಪೋ ಕೇಳಿ
Home / Film News / Kollywood / ಶೃತಿ ಹಾಸನ್​ ಕಿಡ್ನ್ಯಾಪ್​ಗೆ ನಡೆದಿತ್ತು ಯತ್ನ..! : ಈ ಸಂಚು ರೂಪಿಸಿದ್ದವರು ಯಾರು ಗೊತ್ತಾ…?

ಶೃತಿ ಹಾಸನ್​ ಕಿಡ್ನ್ಯಾಪ್​ಗೆ ನಡೆದಿತ್ತು ಯತ್ನ..! : ಈ ಸಂಚು ರೂಪಿಸಿದ್ದವರು ಯಾರು ಗೊತ್ತಾ…?

ಚೆನ್ನೈ : ಸೂಪರ್​ಸ್ಟಾರ್ ಕಮಲ್​ ಹಾಸನ್​ ಬರೀ ನಟರಲ್ಲ. ಅವರೊಬ್ಬ ಚಿತ್ರ ಸಾಹಿತಿಯೂ ಹೌದು.. ಹೀಗೆ ಚಿತ್ರಕತೆ ಬರೆಯುವ ಕಮಲ್​ ತಮ್ಮ ಜೀವನದ ನಿಜ ಘಟನೆಯನ್ನೂ ಸಿನೆಮಾದಲ್ಲಿ ಅಳವಡಿಸಿ ಗೆದ್ದವರು. ಇದಕ್ಕೆ ಸಾಕ್ಷಿ 1994ರಲ್ಲಿ ರಿಲೀಸ್ ಆಗಿದ್ದ ಮಹಾನದಿ ಎಂಬ ಸಿನೆಮಾ. ಇದು ರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರ. ಇದಕ್ಕೆ ಸ್ವತಃ ಕಮಲ್​ ಹಾಸನ್ ಅವರ ಬದುಕೇ ಸ್ಫೂರ್ತಿ…

ಪ್ರಗತಿಪರ ಚಿಂತಕನ ಮಗಳೊಬ್ಬಳನ್ನು ಅಪಹರಿಸಿ ಶ್ರೀಮಂತ ಉದ್ಯಮಿಯೊಬ್ಬ ವೇಶ್ಯಾಗ್ರಹಕ್ಕೆ ಮಾರಾಟ ಮಾಡುವುದು. ನಾಯಕ ಬಂದು ಈಕೆಯನ್ನು ರಕ್ಷಿಸುವುದು ಹಾಗೂ ಆಕೆಗೆ ಸಂಕಷ್ಟ ತಂದವರ ವಿರುದ್ಧ ಸೇಡು ತೀರಿಸುವುದೇ ಚಿತ್ರದ ಕತೆ..

ಈ ಚಿತ್ರದ ಬಗ್ಗೆ ಇತ್ತೀಚೆಗೆ ಮಾತನಾಡಿರುವ ಕಮಲ್ ಹಾಸನ್​,ಹಣಕ್ಕಾಗಿ ತನ್ನ ಮಗಳು ಶೃತಿ ಹಾಸನ್​​ರ ಕಿಡ್ನ್ಯಾಪ್ ಯತ್ನ ಕೂಡಾ ನಡೆದಿತ್ತು. ಇದಾದ ಬಳಿಕ ಈಕೆಯ ರಕ್ಷಣೆಯೂ ನಡೆದಿತ್ತು. ನಮ್ಮ ಮನೆಯ ಕೆಲಸದಾಳುವೇ ಈ ಷಡ್ಯಂತ್ರ ರೂಪಿಸಿದ್ದವರಿಗೆ ಸಹಾಯ ಮಾಡಿದ್ದ. ಬಳಿಕ ನನಗೆ ಈ ಸತ್ಯ ಗೊತ್ತಾಯ್ತು. ನನ್ನ ಮಗಳ ರಕ್ಷಣೆಗೆ ಇವರ ಕೊಲೆ ಮಾಡುವುದಕ್ಕೂ ನಾನು ಸಿದ್ಧನಾಗಿದ್ದೆ. ಆದರೆ, ಆ ಕ್ಷಣಕ್ಕೆ ನನಗೆ ಒಂದು ಒಳ್ಳೆಯ ಚಿಂತನೆ ತಲೆಗೆ ಬಂದಿತ್ತು. ಅದೇನೆಂದರೆ, ಕೋಪದ ಕೈಗೆ ಬುದ್ಧಿಕೊಟ್ಟು ಏನೇನೋ ಮಾಡುವುದಕ್ಕಿಂತ, ಇದನ್ನೇ ಒಂದು ಸ್ಕ್ರಿಪ್ಟ್​ ತರ ಮಾಡಿ ಚಿತ್ರ ಮಾಡುವ ಯೋಚನೆ ಅದು. ಆದರೆ, ಈ ಯೋಚನೆಯನ್ನು ತಳ್ಳಿ ಹಾಕಿಕೊಂಡೇ ಬಂದೆ. ಬಳಿಕ ಒಂದು ಸಲ ಕುಳಿತು ಈ ಚಿತ್ರಕತೆಯನ್ನು ಸಂಪೂರ್ಣ ಮಾಡಿದೆ ಎಂದು ಹೇಳಿದ್ದಾರೆ ಕಮಲ್​.

ಇಷ್ಟು ದಿನ ಮುಚ್ಚಿಟ್ಟಿದ್ದೇಕೆ..? : ಇನ್ನು, ಈ ವಿಷಯ ಇಷ್ಟು ದಿನ ಮುಚ್ಚಿಟ್ಟಿದ್ದೇಕೆ ಎಂಬುದಕ್ಕೂ ಕಮಲ್ ಉತ್ತರ ಕೊಟ್ಟಿದ್ದಾರೆ. ನನ್ನ ಮಕ್ಕಳಾದ ಶೃತಿ ಮತ್ತು ಅಕ್ಷರಾ ಬೆಳೆದು ದೊಡ್ಡವರಾಗಿದ್ದಾರೆ. ಸರಿ ತಪ್ಪುಗಳ ಅರ್ಥ ಅವರಿಗಾಗುತ್ತದೆ. ಹೀಗಾಗಿ, ಈಗ ನಾನು ಈ ವಿಷಯವನ್ನು ಬಹಿರಂಗಪಡಿಸುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!