Wednesday , March 27 2019
ಕೇಳ್ರಪ್ಪೋ ಕೇಳಿ
Home / News NOW / ಪಾಣೆಮಂಗಳೂರು ಚಾತುರ್ಮಾಸ- ರತ್ನತ್ರಯ ಆರಾಧನೆ ಮತ್ತು ಮಂಗಲ ಪ್ರವಚನ

ಪಾಣೆಮಂಗಳೂರು ಚಾತುರ್ಮಾಸ- ರತ್ನತ್ರಯ ಆರಾಧನೆ ಮತ್ತು ಮಂಗಲ ಪ್ರವಚನ

ಬಂಟ್ವಾಳ : 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಪಾಣೆಮಂಗಳೂರು ಶ್ರೀಅನಂತ ನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ ಭವ್ಯ ಮಂಗಲ ವರ್ಷಾಯೋಗ – ಚಾತುರ್ಮಾಸವನ್ನು ಆಚರಿಸುತ್ತಿದ್ದಾರೆ. ಆ ಪ್ರಯುಕ್ತ ಇತ್ತೀಚೆಗೆ ಮುನಿಶ್ರೀಗಳ ಸಾನ್ನಿಧ್ಯದಲ್ಲಿ “ರತ್ನತ್ರಯ ಆರಾಧನೆ”ಯನ್ನು ಕಾರ್ಕಳ ಶ್ರೀ ನೇಮಿರಾಜ ಆರಿಗರವರ ನೇತೃತ್ವದ ಕರ್ನಾಟಕ ಜೈನ ಸ್ವಯಂ ಸೇವಕರ ತಂಡ ಮತ್ತು ಸ್ವಸಹಾಯ ಸಂಘಗಳು, ಇವರ ಪ್ರಾಯೋಜಕತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಲವರು ಪಾಲ್ಗೊಂಡಿದ್ದರು.

ಬೆಳಗ್ಗೆ ಶ್ರೀಗಳ ಆಹಾರ ಚರ್ಯೆಯಲ್ಲಿ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು. ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಸಾಮೂಹಿಕ ರತ್ನತ್ರಯ ಆರಾಧನೆಯ ವಿಧಿ- ವಿಧಾನಗಳನ್ನು ಮತ್ತು ಪ್ರತೀ ಪೂಜೆಗಳ ಫಲಗಳನ್ನು ವಿವರವಾಗಿ ತಿಳಿಸಿದರು. ಮಧ್ಯಾಹ್ನ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಧರ್ಮ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು.

“ಬದುಕು ಹಾಗೂ ಬದುಕಲು ಬಿಡು” ಎಂದು ಸಾರಿದ ಮಹಾವೀರರ ವಾಣಿಯನ್ನು ಜೀವನದಲ್ಲಿ ಆಚರಣೆಗೆ ತಂದಲ್ಲಿ ಮೋಕ್ಷ ಮಾರ್ಗ ಸಾಧ್ಯ, ಅಲ್ಲದೇ ಎಲ್ಲಾ ಧರ್ಮಗಳು ಜೀವನದಲ್ಲಿ ಉತ್ತಮ ಬದುಕನ್ನು ಸಾಗಿಸಲು ಮಾರ್ಗದರ್ಶನ ನೀಡಿದರೆ, ಜೈನ ಧರ್ಮ ಉತ್ತಮ ಸಮಾಧಿ ಪಡೆಯಲು ಮಾರ್ಗದರ್ಶನ ನೀಡುತ್ತದೆ ಎಂದು ಮುನಿ ಶ್ರೀ ವೀರ ಸಾಗರ ಮಹಾರಾಜರು ತಮ್ಮ ಮಂಗಲ ಪ್ರವಚನದಲ್ಲಿ ತಿಳಿಸಿದರು.
ಮಂಗಲ ಪ್ರವಚನದ ನಂತರ ಧರ್ಮ ಸಭೆಯಲ್ಲಿ “ಶಂಕಾ-ಸಮಾಧಾನ”ಕಾರ್ಯಕ್ರಮ ನಡೆಯಿತು. ಅನೇಕ ಶ್ರಾವಕರಧಾರ್ಮಿಕ ಪ್ರಶ್ನೆಗಳಿಗೆ ಮುನಿ ಮಹಾರಾಜರು ಉತ್ತರಿಸಿದರು.

ಸಾಮೂಹಿಕ ಆರಾಧನೆ ಕಾರ್ಯಕ್ರಮದಲ್ಲಿ ಮಂಗಳೂರು, ಮೂಡುಬಿದಿರೆ,ವೇಣೂರು, ಧರ್ಮಸ್ಥಳ, ಕಾರ್ಕಳ, ಹಾಸನ ಮುಂತಾದ ಕಡೆಗಳಿಂದ ಅನೇಕ ಶ್ರಾವಕರು ಪಾಲ್ಗೊಂಡಿದ್ದರು.

ಇಂದು ಮಂಗಳವಾರ, ಉಡುಪಿ ಜೈನ್ ಮಿಲನ್ ಮತ್ತು ಉಡುಪಿಯ ಸಮಸ್ತ ಜೈನ ಸಮಾಜ ಬಾಂಧವರ ಪ್ರಾಯೋಜಕತ್ವದಲ್ಲಿ ಸಾಮೂಹಿಕ “ಕಲ್ಯಾಣ ಮಂದಿರ ಆರಾಧನೆ ” ನಡೆಯಲಿದೆ. ಈ ಆರಾಧನೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಬಂಧುಗಳು ಭಾಗವಹಿಸಿ ಪುಣ್ಯಭಾಗಿಗಳಾಗಬೇಕೆಂದು ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಸುದರ್ಶನ್ ಜೈನ್ ವಿನಂತಿಸಿದ್ದಾರೆ.

ಚಾತುರ್ಮಾಸ ಸಮಿತಿಯ ರತ್ನಾಕರ್ ಜೈನ್ ಮಂಗಳೂರು, ಸುದರ್ಶನ್ ಜೈನ್, ಸಂಪತ್ ಕುಮಾರ್ ಶೆಟ್ಟಿ, ಧರಣೇಂದ್ರ ಇಂದ್ರ, ಸುಭಾಶ್ಚಂದ್ರ ಜೈನ್, ಭುವನೇಂದ್ರ ಇಂದ್ರ, ಹರ್ಷರಾಜ್ ಬಲ್ಲಾಳ್, ದೀಪಕ್ ಇಂದ್ರ, ಕೆ. ಪ್ರವೀಣ್ ಕುಮಾರ್, ಆದಿರಾಜ್ ಜೈನ್, ಭರತ್ ರಾಜ್ ಮುಂತಾದವರು ಉಪಸ್ಥಿತರಿದ್ದರು.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!