Monday , July 23 2018
ಕೇಳ್ರಪ್ಪೋ ಕೇಳಿ
Home / Film News / Bollywood / ಆಲಿಯಾ ಭಟ್​​–- ಸಿದ್ಧಾರ್ಥ್​ ಮಲ್ಹೋತ್ರಾ ದೂರ ದೂರ…!

ಆಲಿಯಾ ಭಟ್​​–- ಸಿದ್ಧಾರ್ಥ್​ ಮಲ್ಹೋತ್ರಾ ದೂರ ದೂರ…!

ಮುಂಬೈ : ಬಾಲಿವುಡ್​ನಲ್ಲಿ ಪ್ರೀತಿ, ಪ್ರೇಮ ಮತ್ತು ಬ್ರೇಕ್​ ಅಪ್​ ಏನೂ ಹೊಸದಲ್ಲ. ನಟ ನಟಿಯರ ಆಫ್​ ಬಾಯಿಲ್ಡ್​ ಪ್ರೀತಿ ಬಳಿಕ ಕೊನೆಯಾಗುವುದು ಬ್ರೇಕ್​ ಅಪ್​ನಲ್ಲೇ… ಹಲವಾರು ವರ್ಷದಿಂದ ನಡೆದುಕೊಂಡು ಬರುವುದು ಇದೇ… ಹಾಗಂತ, ಎಲ್ಲರ ಸಂಬಂಧವೂ ಬ್ರೇಕ್​ ಅಪ್​ನಲ್ಲೇ ಕೊನೆಯಾಗುತ್ತದೆ ಎಂದಲ್ಲ. ಪ್ರೀತಿಯನ್ನು ಕೊನೆಯವರೆಗೂ ತಪಸ್ಸಿನಂತೆ ಕಾಪಾಡಿಕೊಂಡು ಬಂದ ದಂಪತಿಗಳೂ ಬಣ್ಣದ ಲೋಕದಲ್ಲಿ ಇದ್ದಾರೆ. ಆದರೆ, ಬ್ರೇಕ್​ ಅಪ್​ ಕತೆಗಳಿಗಿಂತ ಇವರ ಸಂಖ್ಯೆ ತುಂಬಾ ಕಡಿಮೆ…

ಈಗ ಇದೇ ಬ್ರೇಕ್​ ಅಪ್​ ಕತೆಗೆ ಹೊಸದೊಂದು ಜೋಡಿಯ ಹೆಸರು ಸೇರ್ಪಡೆಯಾಗಿದೆ… ಆ ಜೋಡಿಯೇ ಆಲಿಯಾ ಭಟ್ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ…

ಅಲಿಯಾ ಭಟ್ ಮತ್ತು ಸಿದ್ಧಾರ್ಥ್​​ ಮಲ್ಹೋತ್ರಾ ತುಂಬಾ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದರು. ಬಹುತೇಕ ಎರಡು ವರ್ಷದಿಂದ ಇವರಿಬ್ಬರು ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದಾರೆ. ಆದರೆ, ಇವರಿಬ್ಬರು ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳದೇ ಇದ್ದರೂ ಈ ಪ್ರೀತಿಯ ವಿಚಾರ ಗುಟ್ಟಾಗಿಯೇನು ಉಳಿದಿರಲಿಲ್ಲ ಎಂಬುದು ಕೂಡಾ ಸತ್ಯ. ರಜಾ ದಿನಗಳಲ್ಲಿ ಮತ್ತು ಮನೆಯಲ್ಲಿ ಇವರಿಬ್ಬರು ಜೊತೆಯಾಗಿ ಕಳೆಯುತ್ತಿದ್ದರು ಎಂಬ ಸುದ್ದಿ ಈಗಾಗಲೇ ದೊಡ್ಡ ಮಟ್ಟದಲ್ಲೇ ಬಂದಿವೆ. ಮತ್ತು ಗಾಸಿಪ್ ಕಾಲಂಗಳಲ್ಲಿ ಇವರಿಬ್ಬರು ಸದಾ ಆಹಾರವಾಗುತ್ತಲೇ ಇದ್ದಿದ್ದೂ ಇದೆ… ಕೆಲವು ಸಮಾರಂಭದಲ್ಲೂ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡು ಡೇಟಿಂಗ್ ಸುದ್ದಿಗೆ ಇನ್ನಷ್ಟು ಎಣ್ಣೆ, ತುಪ್ಪ ಸುರಿಯುತ್ತಿದ್ದರು…

ಆದರೆ, ಇಂತಹ ಜೋಡಿಯ ಬಗ್ಗೆ ಈಗ ದೊಡ್ಡದೊಂದು ಸುದ್ದಿ ಬಂದಿದೆ. ಬಲ್ಲ ಮತ್ತು ನಂಬಲಾರ್ಹ ಮೂಲಗಳ ಪ್ರಕಾರ ಆಲಿಯಾ ಮತ್ತು ಸಿದ್ಧಾರ್ಥ್ ಸಂಬಂಧ ಹಳಸಿದೆಯಂತೆ… ಅಲ್ಲದೆ, ಅಧಿಕೃತವಾಗಿಯೇ ತಮ್ಮಿಬ್ಬರ ಸಂಬಂಧವನ್ನು ಇವರು ಮುರಿದುಕೊಂಡಿದ್ದಾರಂತೆ… ಇವರಿಬ್ಬರು ಈ ಹಿಂದೆಯೂ ಜಗಳ ಮಾಡಿಕೊಳ್ಳುತ್ತಿದ್ದರು. ಪ್ರೀತಿ ಎಂದ ಮೇಲೆ ಜಗಳ ಸಾಮಾನ್ಯ. ಪ್ರೀತಿ ಇದ್ದಲ್ಲೆ ಜಗಳ ಇರುತ್ತದೆ ಎಂಬ ಮಾತು ಕೂಡಾ ತುಂಬಾ ಹಳೆಯದ್ದೇ… ಆದರೆ, ಈ ಬಾರಿ ಮಾತ್ರ ಈ ಜಗಳ ಸರಿಯಾಗುವ ಲಕ್ಷಣ ಕಾಣುತ್ತಿಲ್ಲವಂತೆ… ಮನಸ್ಸು ಕೆಡಿಸಿಕೊಂಡಿರುವ ಈ ಜೋಡಿ ಇನ್ನೆಂದೂ ಜೊತೆಯಾಗಲಾರೆವು ಎಂದು ಹೇಳಿಕೊಂಡಿದ್ದಾಗಿ ಇವರಿಬ್ಬರ ಆಪ್ತರು ಸ್ಪಷ್ಟಪಡಿಸಿದ್ದಾರೆ… ಸದ್ಯಕ್ಕೆ ಒಬ್ಬರನ್ನೊಬ್ಬರು ಇವರು ಸಂದಿಸಿಯೇ ಇಲ್ಲ… ಮಾತು ಕೂಡಾ ಬಿಟ್ಟಿದ್ದಾರೆ.. ಹೀಗಾಗಿ, ಇವರಿಬ್ಬರು ಸ್ನೇಹಿತರಾಗಿ ಮುಂದುವರಿಯುವ ಸಾಧ್ಯತೆಯೂ ತುಂಬಾ ಕ್ಷೀಣ…

ಇದರ ಜೊತೆಗೆ ಇಲ್ಲಿ ಬೇರೆಯದ್ದೇ ಕೆಲ ಪ್ರೇಮಕತೆಗಳು ತೆರೆದುಕೊಳ್ಳುತ್ತಿವೆ. ಸಿದ್ಧಾರ್ಥ್​​ ತನ್ನ ಎ ಜಂಟಲ್​ಮ್ಯಾನ್ ಚಿತ್ರದ ಕೋಸ್ಟಾರ್​​​ ಜಾಕ್ಲೀನ್​ ಫರ್ನಾಂಡೀಸ್ ಜೊತೆ ತುಂಬಾ ಕ್ಲೋಸ್ ಆಗಿದ್ದಾರಂತೆ. ಇನ್ನೊಂದ್ಕಡೆ, ಆಲಿಯಾ ಕೂಡಾ ತನ್ನ ಸೀನಿಯರ್​ ಆಕ್ಟರ್​ ಜೊತೆ ತುಂಬಾ ಸಲುಗೆಯಿಂದ ಇದ್ದಾರಂತೆ. ಇದು ಇವರಿಬ್ಬರನ್ನು ದೂರ ಮಾಡಿದೆ ಎನ್ನುತ್ತದೆ ಕೆಲವೊಂದು ಸುದ್ದಿಗಳು… ಆದರೆ, ಈ ಜೋಡಿ ದೂರ ಆಗುವುದಕ್ಕೆ ನಿಜವಾದ ಕಾರಣ ಏನು ಎಂಬುದು ಮಾತ್ರ ಗೊತ್ತಾಗಿಲ್ಲ… ಅದಕ್ಕೆ ಸ್ವತಃ ಇವರೇ ಉತ್ತರಿಸಬೇಕಾಗಿದೆ. ಇಲ್ಲದಿದ್ದರೆ ಇನ್ನಷ್ಟು ಗಾಸಿಪ್​ಗೆ ಇವರಿಬ್ಬರು ವಸ್ತುವಾಗುವ ಅಪಾಯವೂ ಇವರಿಗಿದೆ…

 

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!