Saturday , February 16 2019
ಕೇಳ್ರಪ್ಪೋ ಕೇಳಿ
Home / News NOW / ಆಟಿಡೊಂಜಿ ಕೂಟ : ವಿವಿಧ ಆಟೋಟ ಸ್ಪರ್ಧೆ, ಬಗೆಬಗೆ ಭೋಜನಗಳ ಸವಿ

ಆಟಿಡೊಂಜಿ ಕೂಟ : ವಿವಿಧ ಆಟೋಟ ಸ್ಪರ್ಧೆ, ಬಗೆಬಗೆ ಭೋಜನಗಳ ಸವಿ

ಬಂಟ್ವಾಳ : ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮತ್ತು ಮಹಿಳಾ ಸಂಘ ಅರ್ಕುಳ ಮೇರಮಜಲು ಇದರ ಆಶ್ರಯದಲ್ಲಿ ಆಟಿಡೊಂಜಿ ಕೂಟ ಹಾಗೂ ಕುಸೇಲ್ದ ಪಂಥೊದ ಗೊಬ್ಬುಲು ನಡೆಯಿತು. ಅರ್ಕುಳ ದಿ| ಜಾನಕಿ ಸೇಸಪ್ಪ ಪೂಜಾರಿ ಇವರ ಬಂಗ್ಲೆ ಮನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಸದಾನಂದ ಆಳ್ವ ಕಂಪ ಇವರು ಉದ್ಘಾಟಿಸಿದರು.

ಬಿಲ್ಲವ ಸಂಘದ ಧ್ವಜರೋಹಣವನ್ನು ಶ್ರೀ ರಾಮದಾಸ್ ಕೋಟ್ಯಾನ್ ಮಜಿಲಗುತ್ತು ನೆರವೇರಿಸಿದರು. ಬಳಿಕ ವಿವಿಧ ಗ್ರಾಮೀಣ ಕ್ರೀಡೆಗಳು ನಡೆದವರು. ಇದರಲ್ಲಿ ನೂರಾರು ಜನ ಭಾಗವಹಿಸಿದ್ದರು. ಇನ್ನು, ಮನೆ ಮನೆಯಿಂದ ತಯಾರಿಸಿದ ಸುಮಾರು 38 ವಿವಿಧ ಬಗೆಯ ಖಾದ್ಯಗಳು ಹಾಗೂ ವಿಶೇಷವಾಗಿ ಕಟ್ಟದ ಕೋರಿ(ಕೋಳಿ ಅಂಕದ ಕೋಳಿ)ಯ ವಿವಿಧ ಖಾದ್ಯಗಳನ್ನು ಬಡಿಸಲಾಯಿತು.

ವೇದಿಕೆಯಲ್ಲಿ ಅತಿಥಿಗಳಾದ ಬಿಲ್ಲವ ಸಂಘದ ಮುಖಂಡ ಶಿವಪ್ಪ ಸುವರ್ಣ ಮೇರಮಜಲು, ರಾಘವ ಅಂಚನ್ , ಗಣೇಶ್ ತೋಟ , ಸಂತೋಷ್ ತುಪ್ಪೆಕಲ್ಲು , ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶ್ರೀ ಟಿ.ರಘುನಾಥ ಪೂಜಾರಿ ಅರ್ಕುಳ ಉಪಸ್ಥಿತರಿದ್ದರು.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!