Tuesday , February 19 2019
ಕೇಳ್ರಪ್ಪೋ ಕೇಳಿ
Home / News NOW / ಇಂದಿರಾ ಕ್ಯಾಂಟೀನ್​ಗೆ ಚಾಲನೆ : 101 ಕ್ಯಾಂಟೀನ್​ಗಳ ಕಾರ್ಯಾರಂಭ

ಇಂದಿರಾ ಕ್ಯಾಂಟೀನ್​ಗೆ ಚಾಲನೆ : 101 ಕ್ಯಾಂಟೀನ್​ಗಳ ಕಾರ್ಯಾರಂಭ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಇಂದಿರಾ ಕ್ಯಾಂಟೀನ್​ ಲೋಕಾರ್ಪಣೆಯಾಗಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್​ ಗಾಂಧಿ ಜಯನಗರದ ಕನಕನಪಾಳ್ಯದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು. ಜೊತೆಗೆ, ಕ್ಯಾಂಟೀನ್ ಸಿಬ್ಬಂದಿಯಿಂದ ರಾಹುಲ್ ಮಾಹಿತಿ ಪಡೆದರು. ಈ ಕ್ಯಾಂಟೀನ್‌ ಗಳಲ್ಲಿ 5 ರೂಪಾಯಿಗೆ ಗೆ ತಿಂಡಿ, 10 ರೂಪಾಯಿಗೆ ಊಟ ಸಿಗಲಿದೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್​, ಲೋಕಸಭೆ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಎಲ್. ವೇಣುಗೋಪಾಲ್, ಬಿಬಿಎಂಪಿ ಮೇಯರ್ ಜಿ ಪದ್ಮಾವತಿ ಸೇರಿದಂತೆ ಹಲವು ಉಪಸ್ಥಿತರಿದ್ದರು.

ಈ ವರ್ಷದ ಬಜೆಟ್​ನಲ್ಲಿ ಮುಖ್ಯಮಂತ್ರಿಗಳು ಇಂದಿರಾ ಕ್ಯಾಂಟೀನ್ ಘೋಷಿಸಿದ್ದರು. ಮೊದಲ ಹಂತದಲ್ಲಿ 101 ಕ್ಯಾಂಟೀನ್‌ ಗಳು ಕಾರ್ಯಾಚರಿಸಲಿವೆ. 198 ವಾರ್ಡ್​ಗಳಲ್ಲೂ ಈ ಕ್ಯಾಂಟೀನ್ ಆರಂಭಿಸಲು ನಿರ್ಧರಿಸಲಾಗಿದ್ದು, ಬಾಕಿ ಉಳಿದ ಕ್ಯಾಂಟೀನ್ ಅಕ್ಟೋಬರ್ 2ಕ್ಕೆ ಉದ್ಘಾಟನೆಯಾಗಲಿದೆ.

 

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!