Monday , September 24 2018
ಕೇಳ್ರಪ್ಪೋ ಕೇಳಿ
Home / Gulf News / ಜೆಡ್ಡಾದ 6 ಐತಿಹಾಸಿಕ ಕಟ್ಟಡಕ್ಕೆ ಬೆಂಕಿ…! : 3 ಕಟ್ಟಡಗಳು ನೆಲಸಮ

ಜೆಡ್ಡಾದ 6 ಐತಿಹಾಸಿಕ ಕಟ್ಟಡಕ್ಕೆ ಬೆಂಕಿ…! : 3 ಕಟ್ಟಡಗಳು ನೆಲಸಮ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ಮನಮಾ : ಜೆಡ್ಡಾ ಹಳೇ ಪಟ್ಟಣದ ಅಲ್​ ಬಲಾದ್​​ನಲ್ಲಿದ್ದ ಆರು ಐತಿಹಾಸಿಕ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಈ ದುರಂತದಲ್ಲಿ ಮೂರು ಹಳೇ ಕಟ್ಟಡಗಳು ಸಂಪೂರ್ಣ ನೆಲಸಮವಾಗಿವೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಸದ್ಯದ ಮಾಹಿತಿ ಪ್ರಕಾರ ಈ ದುರಂತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಜೆಡ್ಡಾದ ದಿನ ಪತ್ರಿಕೆ ಅರಬ್​ ನ್ಯೂಸ್​​ ಮತ್ತು ಕೆಲವೊಂದು ಟ್ವಿಟರ್​ ಬಳಕೆದಾರರು ಈ ದುರಂತದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.


ನಾಲ್ಕು ಮಹಡಿಯ ಕಟ್ಟಡದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಈ ಬೆಂಕಿ ಇತರ ಕಟ್ಟಡಕ್ಕೂ ವ್ಯಾಪಿಸಿದೆ ಎಂದು ಹೇಳಲಾಗುತ್ತಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದವು. ಆದರೆ, ಅಷ್ಟರಲ್ಲಾಗಲೇ ಮೂರು ಕಟ್ಟಡಗಳು ಧರಾಶಯಿಯಾಗಿತ್ತು. ಇನ್ನು, ಇಲ್ಲಿನ ಹಾಗೂ ಸುತ್ತಮುತ್ತಲಿನ ಸುಮಾರು 60 ಜನರನ್ನು ತಕ್ಷಣ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!