Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / Tollywood / ಒಂದೇ ದಿನ ಜೂನಿಯರ್​ ಎನ್​ಟಿಆರ್​-ಮಹೇಶ್ ಬಾಬು ಚಿತ್ರ ತೆರೆಗೆ…?

ಒಂದೇ ದಿನ ಜೂನಿಯರ್​ ಎನ್​ಟಿಆರ್​-ಮಹೇಶ್ ಬಾಬು ಚಿತ್ರ ತೆರೆಗೆ…?

ಹೈದರಾಬಾದ್​ : ಟಾಲಿವುಡ್​ ಬಾಕ್ಸ್ ಆಫೀಸ್​ ಸ್ಟಾರ್​ ವಾರ್​​ಗೆ ಸಜ್ಜಾಗಿದೆ… ಜೂನಿಯರ್​ ಎನ್​ಟಿಆರ್ ಮತ್ತು ಮಹೇಶ್​ ಬಾಬು ಚಿತ್ರ ಒಂದೇ ದಿನ ರಿಲೀಸ್​ ಆಗುತ್ತದೆ ಎಂಬ ಸುದ್ದಿ ಈಗ ಟಾಲಿವುಡ್​ ಅಂಗಳದಲ್ಲಿ ಕಿಚ್ಚು ಹಚ್ಚಿದೆ…

ಜೂನಿಯರ್​ ಎನ್​ಟಿಆರ್​ ಸದ್ಯ ಜೈ ಲವ ಕುಶ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಹೇಶ್​ ಬಾಬು ಸ್ಪೈಡರ್ ಮೂಲಕ ಗಮನ ಸೆಳೆದಿದ್ದಾರೆ… ಈ ಎರಡೂ ಚಿತ್ರಗಳು ಸೆಪ್ಟೆಂಬರ್​ನಲ್ಲಿ ಒಂದೇ ದಿನ ತೆರೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ… ಒಂದೊಮ್ಮೆ ಹೀಗಾದರೆ, ಸೆಪ್ಟೆಂಬರ್​ನಲ್ಲಿ ಟಾಲಿವುಡ್ ಬಾಕ್ಸ್​ ಆಫೀಸ್​ ಇನ್ನಷ್ಟು ರಂಗೇರಲಿದೆ…

ಮಹೇಶ್ ಬಾಬು ಅಭಿನಯದ ಸ್ಪೈಡರ್​ ಚಿತ್ರ ಸೆಪ್ಟೆಂಬರ್​ 27ಕ್ಕೆ ಬಿಡುಗಡೆಯಾಗಲಿದೆ… ಸದ್ಯದ ಮಾಹಿತಿ ಪ್ರಕಾರ, ಜೂನಿಯರ್​ ಟೈಗರ್​ ಅಭಿನಯದ ಜೈ ಲವ ಕುಶ ಕೂಡಾ ಇದೇ ದಿನ ಸಿಲ್ವರ್​ ಸ್ಕ್ರೀನ್​ಗೆ ಲಗ್ಗೆ ಇಡುತ್ತಿದೆಯಂತೆ…

ಜೈ ಲವ ಕುಶ ಬಾಬ್ಬಿ ಡೈರೆಕ್ಷನ್​ನ ಸಿನೆಮಾ… ಜೂನಿಯರ್ ಎನ್​ಟಿಆರ್​ ರದ್ದು ಇಲ್ಲಿ ತ್ರಿಬಲ್​ ರೋಲ್​​.. ಮೂರು ಡಿಫ್ರೆಂಟ್ ಶೇಡ್​ನಲ್ಲಿ ತಾರಕ್​ ಇಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಸ್ಟಿಲ್​, ಟ್ರೇಲರ್​ಗಳು ಈಗಾಗಲೇ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದೆ… ಜೂನಿಯರ್ ಎನ್​ಟಿಆರ್ ಕೂಡಾ ಈ ಚಿತ್ರದ ಮೇಲೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೂನಿಯರ್​ ಎನ್​ಟಿಆರ್​ಗೆ ಇಲ್ಲಿ ಮೂವರು ನಾಯಕಿಯರು. ರಾಶಿ ಖನ್ನಾ, ಥಾಮಸ್​ ಮತ್ತು ನಿವೇತ ಇಲ್ಲಿ ನಾಯಕಿಯರ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಇನ್ನೊಂದ್ಕಡೆ, ಮಹೇಶ್ ಬಾಬು ಸ್ಪೈಡರ್​ ಆಗಿ ತೆರೆಗೆ ಬರುತ್ತಿದ್ದಾರೆ. ಈ ಚಿತ್ರದ ನಿರ್ದೇಶಕ ಸೂಪರ್​ ಹಿಟ್​ ಚಿತ್ರಗಳ ಸರದಾರ ಎ.ಆರ್.ಮುರುಗದಾಸ್​… ಸ್ಪೈಡರ್ ಚಿತ್ರವೂ ಈಗಾಗಲೇ ಸಖತ್​ ಕ್ರೇಜ್​ ಸೃಷ್ಟಿಸಿದೆ. ಅದೂ ಅಲ್ಲದೆ, ಈ ಚಿತ್ರದ ಮೂಲಕ ಮಹೇಶ್ ಬಾಬು ತಮಿಳು ಫಿಲಂ ಇಂಡಸ್ಟ್ರಿಗೂ ಕಾಲಿಡುತ್ತಿದ್ದು, ಸ್ವತಃ ತಾವೇ ತಮಿಳು ಅವತರಣಿಕೆಗೂ ಮಹೇಶ್​ ಡಬ್​ ಮಾಡಿದ್ದಾರೆ…

ಸ್ಪೈಡರ್​ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಟಾಲಿವುಡ್ ಪ್ರಿನ್ಸ್​ ಇಲ್ಲಿ ಡಿಫ್ರೆಂಟ್​ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದು ಇದೊಂದು ಆಕ್ಷನ್ ಥ್ರಿಲ್ಲರ್ ಫಿಲಂ ಆಗಿದೆ. ಮೊನ್ನೆಯಷ್ಟೇ ಸ್ಪೈಡರ್​ನ ಟೀಸರ್ ರಿಲೀಸ್ ಆಗಿದ್ದು, ಪವರ್ ಫುಲ್​ ವಿಲನ್​ನ ಪರಿಚಯವನ್ನು ಪ್ರೇಕ್ಷಕರಿಗೆ ಚಿತ್ರತಂಡ ಮಾಡಿಸಿದೆ…

ಈಗಾಗಲೇ ಎರಡೂ ಚಿತ್ರಗಳೂ ಜನರದಲ್ಲಿ ಸಖತ್ ನಿರೀಕ್ಷೆ ಮೂಡಿಸಿವೆ. ಈ ಇಬ್ಬರು ನಾಯಕರಿಗೂ ಅವರದ್ದೇ ಆದ ದೊಡ್ಡ ಅಭಿಮಾನಿ ಬಳಗವಿದೆ. ಹೀಗಾಗಿ, ಈ ಅಭಿಮಾನಿಗಳಲ್ಲೂ ಈ ಚಿತ್ರಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ… ಸದ್ಯದ ಸುದ್ದಿಯನ್ನೇ ನಂಬೋದಾದರೆ ಒಂದೇ ದಿನ ಬೆಳ್ಳಿ ಪರದೆಯಲ್ಲಿ ಈ ಚಿತ್ರಗಳು ಮಿಂಚಲಿವೆ… ಹೀಗಾಗಿ, ಕುತೂಹಲವೂ ಇಮ್ಮಡಿಯಾಗಿದೆ…

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!