Friday , October 19 2018
ಕೇಳ್ರಪ್ಪೋ ಕೇಳಿ
Home / Mumbai Mail / ಮುಂಬೈ ಪೇಜಾವರ ಮಠದಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ

ಮುಂಬೈ ಪೇಜಾವರ ಮಠದಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ

ಮುಂಬೈ : ಸಂತಾಕ್ರೂಜ್ ಪೂರ್ವ ಪ್ರಭಾತ್​ ಕಾಲೋನಿಯಲ್ಲಿರುವ ಪೇಜಾವರ ಶಾಖಾ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಮತ್ತು ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರ ಮಾರ್ಗದರ್ಶನದಲ್ಲಿ ಜನ್ಮಾಷ್ಟಮಿ ಮತ್ತು ವಿಟ್ಲ ಪಿಂಡಿ ಉತ್ಸವವನ್ನು ಇಲ್ಲಿ ನೆರವೇರಿಸಲಾಯಿತು. ಭಕ್ತರೆಲ್ಲಾ ಸಂಭ್ರಮದಿಂದಲೇ ಮುರಳಿಲೋಲನ ಉತ್ಸವದಲ್ಲಿ ಪಾಲ್ಗೊಂಡರು.

ಬೆಳಗ್ಗಿನಿಂದಲೇ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ಕೂಡಾ ಸಾಮಾನ್ಯವಾಗಿತ್ತು. ಸಂಜೆ ಮಠದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!