Wednesday , December 12 2018
ಕೇಳ್ರಪ್ಪೋ ಕೇಳಿ
Home / Sandalwood / ಹಿರಿಯ ನಟ ಸದಾಶಿವ ಬ್ರಹ್ಮಾವರ್ ಸಹಾಯಕ್ಕೆ ನಿಂತ ಶಿವಣ್ಣ, ಕಿಚ್ಚ

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಸಹಾಯಕ್ಕೆ ನಿಂತ ಶಿವಣ್ಣ, ಕಿಚ್ಚ

ಬೆಂಗಳೂರು : ಹಿರಿಯ ಕಲಾವಿದ ಸದಾಶಿವ ಬ್ರಹ್ಮಾವರ್​ ಸ್ಥಿತಿಯ ಬಗ್ಗೆ ಈ ಹಿಂದೆ ಸುದಿನ ವರದಿ ಮಾಡಿತ್ತು (read also : ಅನಾಥವಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ ಈ ಹಿರಿಯ ನಟ…! ). ಜೀವನದ ಸಂಧ್ಯಾಕಾಲದಲ್ಲಿ ಸಾಕಬೇಕಾಗಿದ್ದ ಮಕ್ಕಳೇ ಸದಾಶಿವ ಬ್ರಹ್ಮಾವರ್​ ಅವರನ್ನು ಮನೆಯಿಂದ ಹೊರಗೆ ಹಾಕಿದ್ದರು. ಇವರ ಸ್ಥಿತಿ ಕಂಡು ಹೆತ್ತ ಮಕ್ಕಳ ಹೃದಯ ಕರಗದೇ ಇದ್ದರೂ ಈ ಹಿರಿ ಜೀವದ ಸ್ಥಿತಿಗೆ ಇಡೀ ರಾಜ್ಯವೇ ಮರುಗಿತ್ತು.

ಈಗ ಈ ಹಿರಿಯ ನಟನ ಸಹಾಯಕ್ಕೆ ಚಿತ್ರರಂಗದ ಹಲವರು ನಿಂತಿದ್ದಾರೆ. ಕಿಚ್ಚ ಸುದೀಪ್​ ಬ್ರಹ್ಮಾವರ್ ಅವರ ಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದು, ಇವರಿಗೆ ಸಹಾಯ ಮಾಡುವಂತೆ ತನ್ನ ಅಭಿಮಾನಿ ಸಂಘದವರಿಗೆ ಸೂಚನೆ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.  ಅದೂ ಅಲ್ಲದೆ, ಬ್ರಹ್ಮಾವರ್ ಅವರ ಮುಂದಿನ ಜವಾಬ್ದಾರಿಯನ್ನೂ ತಾನೇ ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ.

ಇನ್ನೊಂದ್ಕಡೆ, ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​​​​​​​​ ಅವರು ಕೂಡಾ ಸದಾಶಿವ ಬ್ರಹ್ಮಾವರ್ ಸ್ಥಿತಿಗೆ ಮರುಗಿದ್ದು ಸಹಾಯಕ್ಕೆ ಧಾವಿಸಿದ್ದಾರೆ. ಯಾಕೆಂದರೆ, ವರನಟ ರಾಜ್​ಕುಮಾರ್​ ಕುಟುಂಬದ ನಿರ್ಮಾಣದ ಬಹುತೇಕ ಚಿತ್ರಗಳಲ್ಲಿ ಸದಾಶಿವ ಬ್ರಹ್ಮಾವರ್ ನಟಿಸುತ್ತಿದ್ದರು. ಅಲ್ಲದೆ, ಶಿವರಾಜ್​ಕುಮಾರ್​, ರಾಘವೇಂದ್ರ  ರಾಜ್​ಕುಮಾರ್ ಮತ್ತು ಪುನೀತ್​ ರಾಜ್​ಕುಮಾರ್​ ಚಿತ್ರದಲ್ಲೂ ಇವರು ಅಭಿನಯಿಸಿದ್ದರು.

ಬಿಗ್​ಬಾಸ್​ ಗೆದ್ದಿದ್ದ ಪ್ರಥಮ್ ಕೂಡಾ ಸದಾಶಿವ ಬ್ರಹ್ಮಾವರ್ ಅವರಿಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ, ಹೆತ್ತ ತಂದೆಯನ್ನು ಮಕ್ಕಳೇ ದೂರ ಮಾಡಿದರೂ ಚಿತ್ರರಂಗ ಮತ್ತು ಕರುನಾಡ ಜನ ಸದಾಶಿವ ಬ್ರಹ್ಮಾವರ ಅವರ ಸ್ಥಿತಿಗೆ ಮರುಗಿದೆ… ಅಲ್ಲದೆ, ಸಹಾಯಕ್ಕೆ ಧಾವಿಸಿದೆ… ಈ ಮೂಲಕವಾದರೂ ಈ ಹಿರಿ ಜೀವದ ಸಂಧ್ಯಾಕಾಲ ಇನ್ನಷ್ಟು ಸುಖಕರವಾಗಲಿ ಎಂಬುದಷ್ಟೇ ನಮ್ಮ ಹಾರೈಕೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!