Thursday , April 19 2018
Home / Sandalwood / ಮೊದಲ ಮಗುವಿನ ನಿರೀಕ್ಷೆಯಲ್ಲಿ ಗಾಯಕಿ ಸುನಿಧಿ ಚೌವ್ಹಾಣ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಗಾಯಕಿ ಸುನಿಧಿ ಚೌವ್ಹಾಣ್

ಮುಂಬೈ : ಕನ್ನಡ ಸೇರಿದಂತೆ ಹಲವು ಸುಮಧುರ ಚಿತ್ರಗೀತೆಗಳಿಗೆ ಧ್ವನಿಯಾಗಿದ್ದ ಖ್ಯಾತ ಗಾಯಕಿ ಸುನಿಧಿ ಚೌವ್ಹಾಣ್ ಈಗ ತಾಯ್ತನದ ಖುಷಿಯಲ್ಲಿದ್ದಾರೆ. ಮೊದಲ ಮಗುವಿನ ಖುಷಿಯಲ್ಲಿ ಸುನಿಧಿ ಇದ್ದಾರೆ. ಕಳೆದ ಎರಡು ದಶಕಗಳಿಂದ ತನ್ನ ಸುಶ್ರಾವ್ಯ ಕಂಠದಿಂದ ಅದೆಷ್ಟೋ ಮನಸ್ಸು ಗೆದ್ದಿರುವ ಸುನಿಧಿ ಈಗ ತನ್ನ ಮನೆಯಲ್ಲು ಪುಟ್ಟ ಮಗುವಿನ ಹೆಜ್ಜೆಗಾಗಿ ಕಾಯುತ್ತಿದ್ದಾರೆ. ಸುನಿಧಿ ಈಗ ಐದು ತಿಂಗಳ ಗರ್ಭಿಣಿ.

2012ರ ಏಪ್ರಿಲ್​ 15 ರಂದು ಸುನಿಧಿ ಸಂಗೀತ ನಿರ್ದೇಶಕ ಹಿತೇಶ್​ ಸೋನಿಕ್ ಅವರನ್ನು ವರಿಸಿದ್ದರು. ಇದೀಗ ಈ ದಂಪತಿಯಲ್ಲಿ ಖುಷಿ ಮನೆ ಮಾಡಿದೆ. ಇದಕ್ಕೂ ಮೊದಲು ಸುನಿಧಿ 2002ರಲ್ಲಿ ನಿರ್ದೇಶಕ ಬಾಬ್ಬಿ ಖಾನ್​ರನ್ನು ವರಿಸಿದ್ದರು. ಆದರೆ, ಆಗ ಸುನಿಧಿಗೆ ಕೇವಲ 18 ವರ್ಷ. ಇದಾದ ಒಂದೇ ವರ್ಷದಲ್ಲಿ ಸುನಿಧಿ ಗಂಡನಿಂದ ದೂರವಾಗಿದ್ದರು. ರಿಯಾಲಿಟಿ ಶೋವೊಂದರಲ್ಲಿ ಹಿತೇಶ್​ರನ್ನು ಮೊದಲು ಸುನಿಧಿ ಭೇಟಿಯಾಗಿದ್ದರು. ಬಳಿಕ ಈ ಸಂಬಂಧ ಪ್ರೀತಿಗೆ ತಿರುಗಿ ಇವರಿಬ್ಬರು ಮದುವೆಯೂ ಆಗಿದ್ದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!