Monday , January 22 2018
Home / News NOW / ಮೆಲ್ಕಾರ್​ : ಮೊಸರು ಕುಡಿಕೆ ಉತ್ಸವ
Buy Bitcoin at CEX.IO

ಮೆಲ್ಕಾರ್​ : ಮೊಸರು ಕುಡಿಕೆ ಉತ್ಸವ

ಬಂಟ್ವಾಳ : ಯುವ ಸಂಗಮ ಮೆಲ್ಕಾರ್ನ ಮೊಸರು ಕುಡಿಕೆ ಉತ್ಸವವು ದುರ್ಗಾಪರಮೇಶ್ವರಿ ಭಜನಾ ಮಂದಿರದ ನಂದಗೋಕುಲ ವೇದಿಕೆಯಲ್ಲಿ ಲಯನ್ ಜಯಂತ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ವೆಂಕಟ್ರಾಯ ಪ್ರಭು ಪೊರ್ಲಿಪಾಡಿ ಭಾಗವಹಿಸಿದ್ದರು.

ಎಸ್​ಎಸ್​ಎಲ್​ಸಿಯಲ್ಲಿ ಶೇಕಡಾ 96ರಷ್ಟು ಅಂಕ ಪಡೆದ ಅದಿತಿ ಆಚಾರ್ಯ ಅವರನ್ನು ಯುವ ಸಂಗಮದ ವತಿಯಿಂದ ಲಯನ್ ಜಯಂತ ಶೆಟ್ಟಿ ಹಾಗೂ ವೆಂಕಟ್ರಾಯ ಪ್ರಭು ಗೌರವಿಸಿದರು. ಹಾಗೂ ಇತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಜೊತೆಗೆ, ಅನಾರೋಗ್ಯ ಪೀಡಿತರಿಗೂ ಸಹಾಯ ಧನ ನೀಡಲಾಯಿತು. ವಿವಿಧ ಆಟೋಟ ಸ್ಪರ್ದೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಯುವ ಸಂಗಮದ ಗೌರವಾಧ್ಯಕ್ಷರಾದ ಎಂ.ಎನ್ ಕುಮಾರ್ , ಅಧ್ಯಕ್ಷರಾದ ವಿಠಲ ಶೆಣೈ , ಕಾರ್ಯದರ್ಶಿ ಕರುಣಾಕರ , ಕೋಶಾಧಿಕಾರಿ ಪ್ರಕಾಶ್ ಶೆಣೈ , ಸಲಹೆಗಾರರಾದ ಕೃಷ್ಣ ನಾಯಕ್ ಉಪಸ್ಥಿತರಿದ್ದರು. ಹರೀಶ ಶೆಣೈ ಸ್ವಾಗತಿಸಿ ಶ್ರೀನಿವಾಸ ಗುರು ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು.

CEX.IO Bitcoin Exchange

About sudina

Check Also

ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ

ತ್ರಿಪುರ : ಭಾರತ ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳರು ಬಿಎಸ್​ಎಫ್​​ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ. ಇವತ್ತು ಮುಂಜಾನೆ 2 …

Leave a Reply

Your email address will not be published. Required fields are marked *

error: Content is protected !!