Tuesday , February 19 2019
ಕೇಳ್ರಪ್ಪೋ ಕೇಳಿ
Home / Sandalwood / ಲಾಂಗ್​ ಗ್ಯಾಪ್​ನ ಬಳಿಕ ಕನ್ನಡಕ್ಕೆ ಛಾಯಾಸಿಂಗ್​…

ಲಾಂಗ್​ ಗ್ಯಾಪ್​ನ ಬಳಿಕ ಕನ್ನಡಕ್ಕೆ ಛಾಯಾಸಿಂಗ್​…

ಬೆಂಗಳೂರು : ನಟಿ ಛಾಯಾಸಿಂಗ್ ಮತ್ತೆ ಸ್ಯಾಂಡಲ್​ವುಡ್​ಗೆ ಮರಳಿದ್ದಾರೆ. ಬರೋಬ್ಬರಿ 9 ವರ್ಷಗಳ ಬಳಿಕ ಕನ್ನಡದ ಚಿತ್ರವೊಂದಲ್ಲಿ ಛಾಯಾ ಬಣ್ಣ ಹಚ್ಚುತ್ತಿದ್ದಾರೆ. ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಮಫ್ತಿ ಚಿತ್ರದಲ್ಲಿ ಛಾಯಾ ಅಭಿನಯಿಸಿದ್ದು, ಕನ್ನಡಕ್ಕೆ ಮತ್ತೆ ರೀ ಎಂಟ್ರಿ ಪಡೆದಿದ್ದಾರೆ.

ಮಫ್ತಿ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಅವರು ಕೂಡಾ ಡಿಫ್ರೆಂಟ್​ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಛಾಯಾ ಈ ಹಿಂದೆ 2008ರಲ್ಲಿ ಕನ್ನಡದ ಚಿತ್ರವೊಂದರಲ್ಲಿ ನಟಿಸಿದ್ದರು. ಆ ಬಳಿಕ ಕಿರುತೆರೆಯಲ್ಲಿ ಒಂದಷ್ಟು ಕಾಲ ಸಕ್ರಿಯರಾಗಿದ್ದ ಛಾಯಾ ಮದುವೆಯ ಬಳಿಕ ಸಂಪೂರ್ಣ ಕನ್ನಡ ಚಿತ್ರರಂಗದಿಂದ ದೂರವೇ ಉಳಿದು ಹೋಗಿದ್ದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!