Sunday , May 20 2018
Home / Earth / cc tvಯಲ್ಲಿ ಸೆರೆಸಿಕ್ಕ ಸಿಂಹಗಳು ; ಹಳ್ಳಿಯೊಂದರಲ್ಲಿ ರಾತ್ರಿಯಿಡೀ ಓಡಾಟ..!

cc tvಯಲ್ಲಿ ಸೆರೆಸಿಕ್ಕ ಸಿಂಹಗಳು ; ಹಳ್ಳಿಯೊಂದರಲ್ಲಿ ರಾತ್ರಿಯಿಡೀ ಓಡಾಟ..!

ವಡೋದರ : ಗುಜರಾತ್​ನ ಗಿರ್ ವನ್ಯಧಾಮ ಸಿಂಹಗಳಿಗೆ ಬಹಳ ಪ್ರಸಿದ್ಧ. ಆದರೆ ಅರಣ್ಯ ನಾಶದಿಂದಾಗಿ ಈಗ ಇಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ಸಿಗದಂತಹ ಸ್ಥಿತಿ ಇದೆ. ಜನರು ಸೌದೆಗೆಂದು ಕಾಡುಗಳನ್ನು ಕಡಿಯುತ್ತಿದ್ದಾರೆ. ಗುಡ್ಡಕ್ಕೆ ಬೆಂಕಿಯಿಟ್ಟು ಗಿಡಗಳನ್ನು ಹಾಳು ಮಾಡುತ್ತಿದ್ದಾರೆ. ಹೀಗಾಗಿ ಕಾಡುಪ್ರಾಣಿಗಳು ನಾಡಿಗೆ ಬರುವುದು ಹೆಚ್ಚಾಗಿದೆ. ಗಿರ್ ಅರಣ್ಯಧಾಮದ ತಪ್ಪಲಲ್ಲೇ ವಾಸಿಸುವ ಹಲವಾರು ಕುಟುಂಬಗಳು ದಿನನಿತ್ಯವೂ ಕಾಡುಪ್ರಾಣಿಗಳ ಯಾವಾಗ ದಾಳಇ ಮಾಡುತ್ತವೆಯೋ ಎಂಬ ಆತಂಕದಲ್ಲೇ ಬದುಕಬೇಕಾಗಿದೆ. ಯಾಕೆಂದರೆ ಪ್ರತಿನಿತ್ಯವೂ ಒಂದಿಲ್ಲೊಂದು ಪ್ರಾಣಿಯಾದರೂ ಗ್ರಾಮಕ್ಕೆ ಬಂದೇ ಬರುತ್ತದೆ. ಈ ಕಾರಣದಿಂದಾಗಿ ಜನ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ.

ನಡುರಾತ್ರಿ ಸಿಂಹಗಳ ವಾಕಿಂಗ್..! : ನಿನ್ನೆ ರಾತ್ರಿ 12 ಸಿಂಹಗಳು ಇಲ್ಲಿನ ಅಮ್ರೇಲಿ ಜಿಲ್ಲೆಯ ರಾಂಪುರ ಗ್ರಾಮದಲ್ಲಿ ರಾತ್ರಿಯಿಡೀ ಓಡಾಡಿವೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆದರೆ ಅದೃಷ್ಟವಶಾತ್ ಈ ಸಿಂಹಗಳು ಯಾವುದೇ ಹಾನಿ ಮಾಡದೆ ಮತ್ತೆ ಗಿರ್ ವನ್ಯಧಾಮಕ್ಕೆ ವಾಪಸಾಗಿವೆ. ಈ ಸಿಂಹಗಳು ಜಾನುವಾರುಗಳನ್ನು ಹುಡುಕಿಕೊಂಡು ಗ್ರಾಮಕ್ಕೆ ಬಂದಿವೆ ಅಂತ ಹೇಳುತ್ತಾರೆ. ಇಲ್ಲಿನ ಅರಣ್ಯಾಧಿಕಾರಿಗಳು. ಏಷ್ಯಿಯಾಟಿಕ್ ಸಿಂಹಗಳಿಗೆ 1,400 ಚ. ಕಿ.ಮೀ ವ್ಯಾಪ್ತಿಯ ಗಿರ್ ವನ್ಯಧಾಮವೊಂದೇ ಆವಾಸ ಸ್ಥಾನವಾಗಿದೆ. ಏಷ್ಯಿಯಾಟಿಕ್ ಸಿಂಹಗಳು ಆಫ್ರಿಕಾ ಸಿಂಹಗಳಿಗಿಂತ ಭಿನ್ನವಾಗಿವೆ. ನಮ್ಮ ದೇಶದಲ್ಲಿ ಕಂಡುಬರುವುದು ಏಷಿಯಾಟಿಕ್ ಸಿಂಹ ಮಾತ್ರ. ಈ ಸಿಂಹಗಳು ಗ್ರೀಕ್, ರೋಮ್, ಪಶ್ಚಿ ಏಷ್ಯಾದ ಕೆಲ ಭಾಗಗಳಲ್ಲಿ ಮಾತ್ರ ಕಾಣಸಿಗುತ್ತಿದ್ದವು. ಆದರೆ ಈಗ ಗುಜರಾತ್​​ನ ಗಿರ್ ಅರಣ್ಯದಲ್ಲಿ ಮಾತ್ರವೇ ಕಾಣಬಹುದು.

About sudina

Check Also

ವಿಶ್ವದ ಅತೀ ದೊಡ್ಡ ಬೆಕ್ಕುಗಳನ್ನು ನೋಡಿದ್ದೀರಾ…?

ಫಾರ್ಮಿಂಗ್ಟನ್ ಹಿಲ್ಸ್ (ಓಕ್ಲ್ಯಾಂಡ್) : ಮಿಚಿಗನ್​ನಲ್ಲಿ ವಿಶ್ವದ ಅತೀ ದೊಡ್ಡ ಸಾಕು ಬೆಕ್ಕುಗಳಿವೆ. ಇಲ್ಲಿನ ಡೆಟ್ರಾಯಿಟ್​ನ ಒಂದೇ ಮನೆಯಲ್ಲಿ ದಾಖಲೆ …

Leave a Reply

Your email address will not be published. Required fields are marked *

error: Content is protected !!