Thursday , October 18 2018
ಕೇಳ್ರಪ್ಪೋ ಕೇಳಿ
Home / Film News / Kollywood / ಅಯ್ಯೋ  ದುರ್ವಿಧಿ…! : ಮರಣಶಯ್ಯೆಯಲ್ಲಿ ಖ್ಯಾತ ಕಾಮಿಡಿ ನಟ

ಅಯ್ಯೋ  ದುರ್ವಿಧಿ…! : ಮರಣಶಯ್ಯೆಯಲ್ಲಿ ಖ್ಯಾತ ಕಾಮಿಡಿ ನಟ

ಚೆನ್ನೈ : ಕಾಲಿವುಡ್​ನ ಖ್ಯಾತ ಹಾಸ್ಯ ನಟ ಅಲ್ವ ವಾಸು ತೀವ್ರ ಅಸ್ವಸ್ಥರಾಗಿದ್ದು ಮರಣಶಯ್ಯೆಯಲ್ಲಿದ್ದಾರೆ. ಇದುವರೆಗೆ ಸುಮಾರು 900ಕ್ಕೂ ಅಧಿಕ ತಮಿಳು ಚಿತ್ರಗಳಲ್ಲಿ ಹಾಸ್ಯ ಮತ್ತು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಾಸು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಮಧುರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಸು ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು, ಇವರು ಗುಣಮುಖವಾಗುವ ಸಾಧ್ಯತೆಯೇ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅಲ್ವ ವಾಸು ಅವರ ಪತ್ನಿ ಅಮುದಾ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದು, ವೈದ್ಯರೇ ಇವರ ಭರವಸೆಯನ್ನು ಕಳೆದುಕೊಂಡು ಹೋಗಿದ್ದು, ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ ಎಂದು ಅಮುದಾ ಬಹಳ ದುಃಖದಿಂದಲೇ ಈ ವಿಷಯ ತಿಳಿಸಿದ್ದಾರೆ.

ವಾಸು ಖ್ಯಾತ ನಟ, ನಿರ್ದೇಶಕ ದಿವಂಗತ ಮಣಿವನ್ನಣ್​​ ಅವರೊಂದಿಗೆ ಸಹಾಯಕರಾಗಿ ಕೆಲಸ ಆರಂಭಿಸಿದ್ದರು. ಬಳಿಕ ನಟನಾಗಿ ಇವರು ಸಾಕಷ್ಟು ಹೆಸರು ಮಾಡಿದ್ದರು.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!