Tuesday , August 21 2018
ಕೇಳ್ರಪ್ಪೋ ಕೇಳಿ
Home / Film News / Tollywood / ಚಲಿಸುತ್ತಿದ್ದ ಕಾರಿನಲ್ಲಿ ಮತ್ತೋರ್ವ ನಟಿಯ ಅತ್ಯಾಚಾರಕ್ಕೆ ಯತ್ನ…! : ನಿರ್ದೇಶಕ, ನಟನ ವಿರುದ್ಧ ದೂರು…!

ಚಲಿಸುತ್ತಿದ್ದ ಕಾರಿನಲ್ಲಿ ಮತ್ತೋರ್ವ ನಟಿಯ ಅತ್ಯಾಚಾರಕ್ಕೆ ಯತ್ನ…! : ನಿರ್ದೇಶಕ, ನಟನ ವಿರುದ್ಧ ದೂರು…!

ಹೈದರಾಬಾದ್​ : ಶೂಟಿಂಗ್​ನಿಂದ ಮರಳುತ್ತಿದ್ದ ನಟಿಯನ್ನು ಕಾರಿನಲ್ಲಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಹಸಿರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ದಿಲೀಪ್​ ಬಂಧನವೂ ಆಗಿದೆ. ಇದೀಗ ಇಂತಹದ್ದೇ ಮತ್ತೊಂದು ಪ್ರಕರಣ ನಡೆದಿದೆ. ತೆಲುಗು ನಟಿಯೊಬ್ಬರು ತನ್ನ ಮೇಲೆ ನಿರ್ದೇಶಕ ಛಲಪತಿ ಮತ್ತು ನಟ ಸೃಜನ್​ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮೂಲಕ ಸಿನಿಲೋಕ ಮತ್ತೆ ದಿಗ್ಭ್ರಾಂತವಾಗಿದೆ…

ತೆಲುಗುನ ಉದಯೋನ್ಮುಖ ನಟಿಯೊಬ್ಬರು ಈ ದೂರು ನೀಡಿದ್ದಾರೆ. ವಿಜಯವಾಡದ ಪಟಮಲ್ಲಾ ಪೊಲೀಸ್​ ಠಾಣೆಯಲ್ಲಿ ಈ ನಟಿ ದೂರು ನೀಡಿದ್ದು, ಕಾರಿನಲ್ಲಿ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದೆ ಎಂದು ದೂರಿದ್ದಾರೆ.

ಅಂದು ಏನಾಯ್ತು…? : ನಿರ್ದೇಶಕ ಛಲಪತಿ ಮತ್ತು ನಟ ಸೃಜನ್​​ ಭೀಮಾವರಂನಲ್ಲಿ ನಡೆಯುತ್ತಿದ್ದ ಶೂಟಿಂಗ್​ಗೆ ಕರೆದುಕೊಂಡು ಹೋಗುತ್ತೇನೆ ಎಂದು ಕಾರಿನಲ್ಲಿ ಕುಳಿತುಕೊಳ್ಳಿಸಿ ಬಳಿಕ ದಾರಿ ಮಧ್ಯೆ ಅತ್ಯಾಚಾರಕ್ಕೆ ಯತ್ನ ನಡೆಸಿದ್ದಾರೆ. ಆಗಸ್ಟ್​ 13 ರಂದು ಭೀಮಾವರಂನಲ್ಲಿ ನಡೆಯುತ್ತಿದ್ದ ಶೂಟಿಂಗ್​ಗೆ ನಾನು ರೈಲಿನಲ್ಲಿ ಹೋಗಲು ನಿರ್ಧರಿಸಿದ್ದೆ. ಆದರೆ, ಇವರಿಬ್ಬರು ಕಾರಿನಲ್ಲಿ ಹೋಗುವ ಎಂದು ಹೇಳಿದ್ದರು. ವಿಜಯವಾಡದಲ್ಲಿ ನಾನು ಕಾರು ಏರಿದ ಕೆಲವೇ ಹೊತ್ತಿನಲ್ಲಿ ನನ್ನ ಮೈಮುಟ್ಟಿ ಮಾತನಾಡುವುದಕ್ಕೆ ಇವರು ಆರಂಭಿಸಿದ್ದರು. ಬಳಿಕ ಅಶ್ಲೀಲವಾಗಿ ವರ್ತಿಸಲು ಆರಂಭಿಸಿದ ಇಬ್ಬರೂ ನಾನು ತಪ್ಪಿಸಿಕೊಂಡು ಹೋಗದಂತೆ ಕಾರನ್ನು ಜೋರಾಗಿ ಚಲಾಯಿಸುತ್ತಿದ್ದರು. ಅದೃಷ್ಟವಶಾತ್​ ಕಾರು ಒಂದು ಲಾರಿಗೆ ಡಿಕ್ಕಿಯಾಗಿ ನಾನು ತಪ್ಪಿಸಿಕೊಂಡೆ. ಬಳಿಕ ಅಲ್ಲಿಂದ ನನ್ನ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಅವರು ಬಂದು ನನ್ನನ್ನು ರಕ್ಷಿಸಿದರು.

ಹೀಗೆಂದು ಆ ನಟಿ ಹೇಳಿಕೊಂಡಿದ್ದಾರೆ. ಅಲ್ಲದೆ, ಇಬ್ಬರೂ ಪೊಲೀಸರಿಗೆ ದೂರು ನೀಡದಂತೆ ಬೆದರಿಸಿದ್ದಾರೆ ಎಂದೂ ಈಕೆ ಆರೋಪಿಸಿದ್ದಾರೆ. ತಮ್ಮ ವರ್ತನೆಗೆ ಇವರಿಬ್ಬರು ಕ್ಷಮೆ ಕೇಳಿದ್ದಾರೆ. ಆದರೆ, ಅದರ ಜೊತೆ ಜೊತೆಗೇ ಪೊಲೀಸರಿಗೆ ದೂರು ನೀಡಿದರೆ ನಿನ್ನ ಸಿನಿ ಕೆರಿಯರ್ ಅನ್ನೇ ಹಾಳು ಮಾಡುವುದಾಗಿ ಇವರಿಬ್ಬರು ಬೆದರಿಸಿದ್ದಾರೆ ಎಂದು ಈ ನಟಿ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ನಿರ್ದೇಶಖ ಛಲಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನಟ ಸೃಜನ್​ಗಾಗಿ ಶೋಧ ಮುಂದುವರಿದಿದೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!