Saturday , January 19 2019
ಕೇಳ್ರಪ್ಪೋ ಕೇಳಿ
Home / Film News / Kollywood / ಕಮಲ್ ಹಾಸನ್​ ಮಾನಸಿಕ ರೋಗಿ : ತಮಿಳುನಾಡಿನ ಸಚಿವ ಹೇಳಿಕೆ

ಕಮಲ್ ಹಾಸನ್​ ಮಾನಸಿಕ ರೋಗಿ : ತಮಿಳುನಾಡಿನ ಸಚಿವ ಹೇಳಿಕೆ

ಚೆನ್ನೈ : ತಮಿಳುನಾಡಿನ ಆಡಳಿತರೂಢ ಎಐಎಡಿಎಂಕೆಯನ್ನು ಸದಾ ಟೀಕಿಸುತ್ತಲೇ ಬರುತ್ತಿರುವ ಖ್ಯಾತ ನಟ ಕಮಲ್​ ಹಾಸನ್​ ವಿರುದ್ಧ ಸರ್ಕಾರ ತಿರುಗಿ ಬಿದ್ದಿದೆ. ಮುಖ್ಯಮಂತ್ರಿ ಪಳನಿಸ್ವಾಮಿ ಸಂಪುಟದ ಕಂದಾಯ ಸಚಿವ ಆರ್​ ಬಿ ಉದಯ ಕುಮಾರ್​, ಕಮಲ್ ಹಾಸನ್​ ಒಬ್ಬ ಮಾನಸಿಕ ರೋಗಿ ಎಂದು ಗುಡುಗಿದ್ದಾರೆ.

ಭ್ರಷ್ಟಾಚಾರದ ಆರೋಪ ಇರುವ ಮುಖ್ಯಮಂತ್ರಿ ಪಳನಿಸ್ವಾಮಿ ರಾಜೀನಾಮೆಗೆ ಯಾಕೆ ಒತ್ತಾಯ ಕೇಳಿ ಬರುತ್ತಿಲ್ಲ ಎಂದು ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ತಾವು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕಮಲ್ ಗುಡುಗಿದ್ದರು. ಅದೂ ಅಲ್ಲದೆ, ಕಳೆದ ಕೆಲವು ದಿನಗಳಿಂದ ನಾನಾ ವಿಚಾರದಲ್ಲಿ ಕಮಲ್​ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದರು. ಇವೆಲ್ಲಾ ಆಡಳಿತರೂಢ ಎಐಎಡಿಎಂಕೆ ನಾಯಕರನ್ನು ಕಂಗೆಡಿಸಿತ್ತು.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!