Sunday , July 22 2018
ಕೇಳ್ರಪ್ಪೋ ಕೇಳಿ
Home / Gulf News / ಅಬು ದುಬೈ ಏರ್​ಪೋರ್ಟ್​​ನಲ್ಲಿ ಭಾರತ -ಪಾಕಿಸ್ತಾನ ಗಡಿ…!

ಅಬು ದುಬೈ ಏರ್​ಪೋರ್ಟ್​​ನಲ್ಲಿ ಭಾರತ -ಪಾಕಿಸ್ತಾನ ಗಡಿ…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ಅಬುದುಬೈ : ಭಾರತ ಅಥವಾ ಪಾಕಿಸ್ತಾನದಿಂದ ಬರುವ ಪ್ರಯಾಣಿಕರು ಅಬುದುಬೈಯ ಉಭಯ ದೇಶಗಳ ಗಡಿಯನ್ನು ದಾಟಿಯೇ ಹೋಗಬೇಕು…! ಅರೇ ಏನೋ ಮಿಸ್​ ಹೊಡೀತಿದ್ಯಲ್ಲಾ ಅಂತ ಅನಿಸ್ತಿದೆಯಾ…? ಹೇಳ್ತೀವಿ ಕೇಳಿ… ಭಾರತ ಪಾಕಿಸ್ತಾನ ದೇಶ ಈ ವಾರ ಸ್ವಾತಂತ್ರ್ಯ ಸಂಭ್ರಮದಲ್ಲಿತ್ತು. ಹೀಗಾಗಿ, ಇದೇ ಖುಷಿಗೆ ಅಬು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತ ಮತ್ತು ಪಾಕಿಸ್ತಾನದ ಪ್ರಮುಖ ವಾಘಾ ಗಡಿಯ ಪ್ರತಿರೂಪವನ್ನು ನಿರ್ಮಿಸಲಾಗಿದೆ. ಒಂದು ವಾರಗಳ ಕಾಲ ಈ ಪ್ರತಿರೂಪ ಉಭಯ ದೇಶಗಳ ಪ್ರಯಾಣಿಕರನ್ನು ಸ್ವಾಗತಿಸಲಿದೆ.

ಉಭಯ ದೇಶಗಳ ಬೇರೆ ಬೇರೆ ಭಾಗದಿಂದ ಬರುವ ಪ್ರಯಾಣಿಕರು ಈ ವಾಘಾ ಗಡಿಯ ಪ್ರತಿರೂಪವನ್ನು ಕಣ್ತುಂಬಿಕೊಂಡು ಖುಷಿ ಅನುಭವಿಸುತ್ತಿದ್ದಾರೆ. ಅಲ್ಲದೆ, ಈ ಪ್ರತಿರೂಪದ ಎದುರು ಸೆಲ್ಫಿ ತೆಗೆದು ಜನ ಸಂಭ್ರಮಿಸುತ್ತಿದ್ದಾರೆ. ಪಾಕಿಸ್ತಾನ ಆಗಸ್ಟ್​ 14 ರಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರೆ ಭಾರತ ಆಗಸ್ಟ್​ 15 ರಂದು ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ದೇಶಾದ್ಯಂತ ಆಚರಿಸುತ್ತದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!