Wednesday , March 27 2019
ಕೇಳ್ರಪ್ಪೋ ಕೇಳಿ
Home / Film News / Tollywood / ಅಭಿಮಾನಿಗೆ ಹೊಡೆದು ಮತ್ತೆ ವಿವಾದಕ್ಕೆ ಗುರಿಯಾದ ಬಾಲಕೃಷ್ಣ

ಅಭಿಮಾನಿಗೆ ಹೊಡೆದು ಮತ್ತೆ ವಿವಾದಕ್ಕೆ ಗುರಿಯಾದ ಬಾಲಕೃಷ್ಣ

ಹೈದರಾಬಾದ್​ : ಟಾಲಿವುಡ್​ನ ಖ್ಯಾತ ನಟ ಬಾಲಕೃಷ್ಣ ಒಂದಲ್ಲ ಒಂದು ವಿವಾದಕ್ಕೆ ಸದಾ ಗುರಿಯಾಗುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ ತನ್ನ ಸಹಾಯಕನಿಗೆ ಥಳಿಸಿದ ಆರೋಪದಲ್ಲಿ ಬಾಲಯ್ಯ ವಿರೋಧಕ್ಕೆ ಗುರಿಯಾಗಿದ್ದರು. ಇದೀಗ ಇಂತಹದ್ದೇ ಮತ್ತೊಂದು ಸುದ್ದಿಗೆ ಇವರು ವಸ್ತುವಾಗಿದ್ದಾರೆ.

ಕರ್ನೂಲ್​ ಜಿಲ್ಲೆಯ ನಂದ್ಯಾಲ್​ನಲ್ಲಿ ನಡೆಯುತ್ತಿರುವ ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ಆಡಳಿತರೂಢ ತೆಲುಗು ದೇಶಂ ಪಕ್ಷದ ಶಾಸಕ ಬಾಲಕೃಷ್ಣ ಅಭಿಮಾನಿಗೆ ಕೆನ್ನೆಗೆ ಹೊಡೆದಿದ್ದಾರೆ. ನಿನ್ನೆ ಈ ಘಟನೆ ನಡೆದಿದ್ದು, ಇಂದು ವೈರಲ್ ಆಗಿದೆ.

ಡಿಟಿಪಿ ಅಭ್ಯರ್ಥಿ ಭೂಮಾ ಬೃಹ್ಮಾನಂದ ರೆಡ್ಡಿ ಪರ ಪ್ರಚಾರಕ್ಕೆ ಬಾಲಕೃಷ್ಣ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಹಾರ ಹಾಕುವುದಕ್ಕೆ ಮುಗಿಬಿದ್ದಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ಬಾಲಯ್ಯ ಅಭಿಮಾನಿಗೆ ಹೊಡೆದಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!