Sunday , October 21 2018
ಕೇಳ್ರಪ್ಪೋ ಕೇಳಿ
Home / Sandalwood / ಪ್ರಿಯಾಮಣಿ ಮದುವೆಯಲ್ಲಿ ಮನೆಯವರಷ್ಟೇ ಭಾಗಿ.. : ಖಾಸಗಿತನವನ್ನು ಗೌರವಿಸಿ : ಪ್ರಿಯಾ ಮನವಿ

ಪ್ರಿಯಾಮಣಿ ಮದುವೆಯಲ್ಲಿ ಮನೆಯವರಷ್ಟೇ ಭಾಗಿ.. : ಖಾಸಗಿತನವನ್ನು ಗೌರವಿಸಿ : ಪ್ರಿಯಾ ಮನವಿ

ಬೆಂಗಳೂರು : ಯಾರದಾದರೂ ಮನೆಯಲ್ಲಿ ಮದುವೆ ಇದ್ದರೆ ಆಹ್ವಾನ ಪತ್ರಿಕೆ ನೀಡುವಾಗ ಮನೆ ಮಂದಿಯನ್ನೆಲ್ಲಾ ಆಹ್ವಾನ ನೀಡುವುದು ಸಾಮಾನ್ಯ. ಆದರೆ, ಬಹುಭಾಷಾ ನಟಿ ಪ್ರಿಯಾಮಣಿ ಮಾತ್ರ ಕೊಂಚ ಡಿಫ್ರೆಂಟ್. ಇದೇ ತಿಂಗಳ 23ಕ್ಕೆ ವಿವಾಹವಾಗಲಿರವ ಪ್ರಿಯಾಮಣಿ, ಮದುವೆ ಒಂದು ಖಾಸಗಿ ಕಾರ್ಯಕ್ರಮ. ಹಾಗಾಗಿ, ನಮ್ಮ ಮನೆಯವರು ಮತ್ತು ಸ್ನೇಹಿತರಿಗಷ್ಟೇ ಆಹ್ವಾನ. ಇದು ಬಿಟ್ಟು ಯಾರನ್ನೂ ಮದುವೆಗೆ ಕರೆಯುವುದಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆಯೇ ಸುದಿನ ಪ್ರಿಯಾಮಣಿ ಸರಳ ವಿವಾಹದ ಬಗ್ಗೆ ವರದಿ ಮಾಡಿತ್ತು (read also : ಆಗಸ್ಟ್​​ 23ಕ್ಕೆ ಪ್ರಿಯಾಮಣಿ ವಿವಾಹ…?: ಸರಳ ಮದುವೆಗೆ ನಿರ್ಧಾರ…? ) ಪ್ರಿಯಾಮಣಿ ಮತ್ತು ಅವರ ಸಂಗಾತಿಯಾಗುವ ಮುಸ್ತಫಾ ತುಂಬಾ ಸರಳವಾಗಿ ಮದುವೆಯಾಗಲು ನಿರ್ಧರಿಸಿದ್ದರು. ರಿಜಿಸ್ಟಾರ್ ಕಚೇರಿಯಲ್ಲಿ ಮದುವೆ ಮಾಡಿಕೊಳ್ಳಲು ಇವರಿಬ್ಬರು ನಿರ್ಧಾರ ಮಾಡಿಕೊಂಡಿದ್ದಾರೆ. ಇದಕ್ಕೆ ಮನೆಯವರು ಮತ್ತು ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿದೆ.

ಹೀಗಾಗಿಯೇ, ಪ್ರಿಯಾಮಣಿ ಡಿಫ್ರೆಂಟ್ ಅಂತ ಹೇಳೋದು. ಸಾರ್ವಜನಿಕರಿಗೆ ಯಾರಿಗೂ ಮದುವೆಗೆ ಆಹ್ವಾನ ಇಲ್ಲ. ಮದುವೆ ಬಳಿಕ ನಾವೇ ಫೋಟೋವನ್ನು ಮಾಧ್ಯಮದವರ ಜೊತೆ ಹಂಚಿಕೊಳ್ಳುತ್ತೇವೆ ಎಂದು ಹೇಳಿರುವ ಪ್ರಿಯಾಮಣಿ, ಎಲ್ಲರೂ ನಮ್ಮನ್ನು ಪ್ರೀತಿಯಿಂದ ಹರಸುವಂತೆ ಕೇಳಿಕೊಂಡಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!