Tuesday , February 19 2019
ಕೇಳ್ರಪ್ಪೋ ಕೇಳಿ
Home / Film News / Bollywood / ‘ಸೀರೆಯುಡದ ಪ್ರಿಯಾಂಕಾ ಭಾರತಕ್ಕೇ ಬರುವುದು ಬೇಡ…!’

‘ಸೀರೆಯುಡದ ಪ್ರಿಯಾಂಕಾ ಭಾರತಕ್ಕೇ ಬರುವುದು ಬೇಡ…!’

ಮುಂಬೈ : ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಟೀಶರ್ಟ್ ತೊಟ್ಟು ಭಾರತದ ಧ್ವಜದ ಬಣ್ಣದ ದುಪ್ಪಟ್ಟ ಹಿಡಿದುಕೊಂಡಿದ್ದು ಈಗ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಛೋಪ್ರಾ ಅಮೇರಿಕಾದಿಂದ ಭಾರತಕ್ಕೆ ಬರುವುದೇ ಬೇಡ ಎಂಬ ತನಕ ಮಾತು ಹೋಗಿದೆ.

ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗುವುದು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಹೊಸದೇನು ಅಲ್ಲ. ಹಲವು ಸಂದರ್ಭದಲ್ಲಿ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಸಿಕ್ಕಿ ಚಡಪಡಿಸಿದ್ದಿದೆ. ಈ ನಡುವೆ, ಮತ್ತೊಂದು ಹೊಸ ಆಕ್ಷೇಪ ಪ್ರಿಯಾಂಕಾ ಮೇಲೆ ಕೇಳಿ ಬಂದಿದೆ…

ಸದ್ಯ ಪ್ರಿಯಾಂಕಾ ತನ್ನ ಹಾಲಿವುಡ್ ಪ್ರಾಜೆಕ್ಟ್​ನ ಸಲುವಾಗಿ ಅಮೇರಿಕಾದಲ್ಲಿ ಇದ್ದಾರೆ. ಹೀಗಾಗಿ, ಸ್ವಾತಂತ್ರ್ಯೋತ್ಸವದಂದು ಅಮೇರಿಕಾದಿಂದಲೇ ಚೋಪ್ರಾ ಶುಭ ಹಾರೈಸಿದ್ದರು. ಟೀಶರ್ಟ್​​​​​​​ ಧರಿಸಿ ಕೈಯಲ್ಲಿ ತ್ರಿವರ್ಣ ಧ್ವಜದ ರೀತಿಯ ದುಪ್ಪಟ್ಟ ಹಿಡಿದುಕೊಂಡಿದ್ದ ವೀಡಿಯೋವೊಂದನ್ನು ಪ್ರಿಯಾಂಕಾ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದರು… ಇದು ಈಗ ಟೀಕೆಗೆ ಗುರಿಯಾಗಿದೆ…

Independence Day #Vibes 🇮🇳#MyHeartBelongsToIndia #happyindependencedayindia #jaihind

A post shared by Priyanka Chopra (@priyankachopra) on


ಇನ್ಸ್ಟಾಗ್ರಾಮ್​​​ನಲ್ಲಿ ಕೆಲವರು ಪ್ರಿಯಾಂಕಾರನ್ನು ಟೀಕೆ ಮಾಡಿದ್ದಾರೆ. ಸಾಂಪ್ರದಾಯಿಕ ಧಿರಿಸು ಸೀರೆಯುಟ್ಟು ಪ್ರಿಯಾಂಕಾ ಶುಭಹಾರೈಸಬೇಕಿತ್ತು ಎಂಬ ಟೀಕೆಯೂ ಇದರಲ್ಲಿ ಒಂದು. ಇನ್ನೊಬ್ಬರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಿಯಾಂಕಾ ಅಮೇರಿಕಾದಲ್ಲೇ ಇರಲಿ, ಭಾರತಕ್ಕೆ ಬರುವುದೇ ಬೇಡ ಎಂದೂ ಟೀಕಿಸಿದ್ದಾರೆ…!

ಹಾಗಂತ, ತನ್ನ ಬಟ್ಟೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಾ ಈ ರೀತಿಯ ಟ್ರೋಲ್​ಗೆ ಒಳಗಾಗುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರಿಯಾಂಕಾ ಕಾಲು ಪ್ರದರ್ಶಿಸುವಂತಹ ಬಟ್ಟೆ ಧರಿಸಿದ್ದರು ಎನ್ನುವುದು ಕೂಡಾ ಬಹಳ ಸುದ್ದಿಯಾಗಿತ್ತು… ಈ ವಿಚಾರದಲ್ಲಿ ದೊಡ್ಡ ಮಟ್ಟದಲ್ಲೇ ಪರ ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆದಿದ್ದವು… ಇವಲ್ಲದೆ, ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ರೀತಿಯಲ್ಲಿ ಪ್ರಿಯಾಂಕಾ ಇದೇ ರೀತಿಯ ಚರ್ಚೆಯ ವಸ್ತುವಾಗಿದ್ದರು…


ಇದು ಪ್ರಿಯಾಂಕಾ ಕತೆ. ಇನ್ನೊಂದ್ಕಡೆ, ಬಾಲಿವುಡ್​ನ ಮತ್ತೋರ್ವ ಬೆಡಗಿ ಐಶ್ವರ್ಯ ಬಚ್ಚನ್​ ಕೂಡಾ ತನ್ನ ಡ್ರೆಸ್​ನಿಂದಲೇ ಕಿರಿಕಿರಿ ಅನುಭವಿಸಿದ್ದಾರೆ… ಮೆಲ್ಬೋರ್ನ್​ನಲ್ಲಿ ನಡೆದ ಭಾರತ ಸಿನಿಮೋತ್ಸವದಲ್ಲಿ ಪಾಲ್ಗೊಂಡಿದ್ದ ಐಶ್ವರ್ಯ ತ್ರಿವರ್ಣ ಧ್ವಜ ಹಾರಿಸಿದ್ದರು. ಮೆಲ್ಬೋರ್ನ್​ನಲ್ಲಿ ಭಾರತದ ಧ್ವಜ ಹಾರಿಸಿದ ಮೊದಲ ನಟಿ ಎಂಬ ಖ್ಯಾತಿಗೂ ಇವರು ಪಾತ್ರವಾಗಿದ್ದರು. ಆದರೆ, ಅಂದು ಐಸ್​ ಧರಿಸಿದ್ದ ಡ್ರೆಸ್​ ಅವರಿಗೆ ಕೊಂಚ ಕಿರಿಕಿರಿಯುಂಟು ಮಾಡಿತ್ತಂತೆ…

ಅಂದು ಮಗಳೊಂದಿಗೆ ಬಂದಿದ್ದ ಐಶ್​ ಡೀಪ್​​ ನೆಕ್​ನ ಡ್ರೆಸ್​ ಧರಿಸಿದ್ದರು. ಹೀಗಾಗಿ, ಐಶ್​​​​​ ಅಭಿಮಾನಿಗಳೊಂದಿಗೆ, ಅತಿಥಿಗಳೊಂದಿಗೆ ಮಾತನಾಡುವಾಗ ತಮ್ಮ ಮೈ ಮುಚ್ಚಿಕೊಳ್ಳುವತ್ತ ಜಾಸ್ತಿ ಗಮನ ಹರಿಸುತ್ತಿದ್ದರು. ಅಂದಿನ ವೀಡಿಯೋ ಮತ್ತು ಫೋಟೋಗಳಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ… ಈ ಡೀಪ್​ನೆಕ್​ ಡ್ರೆಸ್​ನಿಂದ ಮುಕ್ತವಾಗಿ ಕ್ಯಾಮೆರಾಕ್ಕೆ ಪೋಸ್​ ಕೊಡುವುದಕ್ಕೂ ಐಶ್​ಗೆ ಸಾಧ್ಯವಾಗಿರಲಿಲ್ಲ. ಸದಾ ಇವರ ಗಮನ ಡ್ರೆಸ್​ನ ಮೇಲೆಯೇ ಇತ್ತು… ಇದು ಕೂಡಾ ಈಗ ಸಾಮಾಜಿಕ ಜಾಲತಾಣದಲ್ಲಿ ಬಗೆಬಗೆ ಚರ್ಚೆಗೆ ವಸ್ತುವಾಗಿದೆ…

ಆದರೆ, ತನ್ನ ಬಟ್ಟೆಯ ಬಗ್ಗೆ ತುಂಬಾ ಕಾಳಜಿ ವಹಿಸುವ ಐಶ್ವರ್ಯರಿಗೆ ಯಾಕೆ ಹೀಗೆ ಆಯ್ತು…? ಯಾವ ಬಟ್ಟೆ ತೊಟ್ಟರು ಸೌಂದರ್ಯದ ಖನಿಯಂತೆ ಕಾಣುವ ಈ ರೂಪವತಿ ಇಲ್ಲೇಕೆ ಇಷ್ಟು ಕಿರಿಕಿರಿ ಅನುಭವಿಸಿದರು ಎಂಬುದು ಮಾತ್ರ ಗೊತ್ತಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಹಲವು ಚರ್ಚೆಗಳಲ್ಲಿ ಐಶ್​ ಡ್ರೆಸ್​ ವಿಷಯದ ಚರ್ಚೆ ಕೂಡಾ ಶುರುವಾಗಿದ್ದಂತೂ ಸತ್ಯ..

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!