Monday , June 25 2018
ಕೇಳ್ರಪ್ಪೋ ಕೇಳಿ
Home / Film News / Tollywood / 5 ವರ್ಷದ ಬಳಿಕ ಪ್ರಭಾಸ್​​ರನ್ನು ಮತ್ತೆ ಸ್ವಾಗತಿಸಿದ 5 ಕೋಟಿ ಮೌಲ್ಯದ ಸೆಟ್​​…!

5 ವರ್ಷದ ಬಳಿಕ ಪ್ರಭಾಸ್​​ರನ್ನು ಮತ್ತೆ ಸ್ವಾಗತಿಸಿದ 5 ಕೋಟಿ ಮೌಲ್ಯದ ಸೆಟ್​​…!

ಹೈದರಾಬಾದ್​ : ಬಾಹುಬಲಿ ಸರಣಿಯಂತಹ ಸೂಪರ್​ ಹಿಟ್ ಚಿತ್ರಗಳಲ್ಲಿ ನಟಿಸಿದ ಐದು ವರ್ಷಗಳ ಬಳಿಕ ಪ್ರಭಾಸ್​​​​ ಮತ್ತೊಂದು ಚಿತ್ರದ ಸೆಟ್​ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಪ್ರಭಾಸ್​ ಸಾಹೋ ಚಿತ್ರದ ಶೂಟಿಂಗ್​​​ನಲ್ಲಿ ಈಗ ಪಾಲ್ಗೊಂಡಿದ್ದಾರೆ. ತೆಲುಗು ಸಿನೆಮಾದ ಡಾರ್ಲಿಂಗ್​ಗೆ ಈಗ ಐದು ವರ್ಷಗಳ ಬಳಿಕ ಐದು ಕೋಟಿ ಮೌಲ್ಯದ ಸೆಟ್​ ಸ್ವಾಗತ ನೀಡಿದೆ…

ಸದ್ಯದ ಮಾಹಿತಿ ಪ್ರಕಾರ ಸಾಹೋ ಚಿತ್ರಕ್ಕಾಗಿ ಬಹುಕೋಟಿ ಮೌಲ್ಯದ ಸೆಟ್​ ನಿರ್ಮಿಸಲಾಗಿದೆ. ಇವತ್ತು ಶೂಟಿಂಗ್​ಗೆ ಬಂದ ಪ್ರಭಾಸ್​ರನ್ನು ಯೂನಿಟ್​ನ ಸದಸ್ಯರು ತುಂಬಾ ಪ್ರೀತಿಯಿಂದಲೇ ಸ್ವಾಗತಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಡಿಫ್ರೆಂಟ್ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಬಾಲಿವುಡ್ ನಟಿ ಶೃದ್ಧಾ ಕಪೂರ್ ಪ್ರಭಾಸ್​ಗೆ ಈ ಚಿತ್ರದಲ್ಲಿ ಜೋಡಿಯಾಗಲಿದ್ದಾರೆ.

ಇಲ್ಲಿನ ಶೂಟಿಂಗ್ ಮುಗಿದ ಮೇಲೆ ಚಿತ್ರತಂಡ ಮುಂಬೈಗೆ ಹಾರಲಿದೆ. ಮುಂದಿನ ತಿಂಗಳಿನಿಂದ ಮುಂಬೈಯಲ್ಲಿ ಈ ಚಿತ್ರದ ಶೂಟಿಂಗ್ ನಡೆಯಲಿದೆ. ಅಲ್ಲಿ ಶೃದ್ಧಾ ಕಪೂರ್ ಇವರಿಗೆ ಜೊತೆಯಾಗಲಿದ್ದಾರೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!