Friday , September 21 2018
ಕೇಳ್ರಪ್ಪೋ ಕೇಳಿ
Home / Sudina Special / ಡೆಡ್ಲಿ ಬ್ಲೂವೇಲ್ ಗೇಮ್ ಗೆ ಬಾಲಕಿಯರಿಬ್ಬರು ಬಲಿ : ಇಲ್ಲಿದೆ ಭಯಾನಕ ವೀಡಿಯೋ

ಡೆಡ್ಲಿ ಬ್ಲೂವೇಲ್ ಗೇಮ್ ಗೆ ಬಾಲಕಿಯರಿಬ್ಬರು ಬಲಿ : ಇಲ್ಲಿದೆ ಭಯಾನಕ ವೀಡಿಯೋ

ಮುಂಬೈ : ಬ್ಲೂವೇಲ್ ಚಾಲೆಂಜ್ ಎಂಬ ಡೆಡ್ಲಿಗೇಮ್ ಗೆ ಇತ್ತೀಚೆಗೆ ಮುಂಬೈಯಲ್ಲೊಬ್ಬ ಬಾಲಕ ಬಲಿಯಾಗಿದ್ದ. ವಿದೇಶದಲ್ಲಿದ್ದ ಈ ವೀಡಿಯೋ ಗೇಮ್ ಈಗ ಭಾರತಕ್ಕೂ ಕಾಲಿಟ್ಟು ಮಕ್ಕಳ ಜೀವ ಹಿಂಡುತ್ತಿದೆ. ಈ ನಡುವೆ, ಬಹುಮಹಡಿ ಕಟ್ಟಡದಿಂದ ಬಾಲಕಿಯರಿಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ವೀಡಿಯೋ ವೈರಲ್ ಆಗುತ್ತಿದೆ.

ಈ ಬಾಲಕಿಯರು ಕೂಡಾ ಬ್ಲೂವೆಲ್ ಗೇಮ್ ಗೇ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದು ಭಾರತದಲ್ಲಿ ಆದ ಘಟನೆ ಅಲ್ಲ. ಆದರೂ ಇತ್ತೀಚೆಗೆ ಇಂತಹ ಮಾರಕ ಗೇಮ್ ಭಾರತಕ್ಕೂ ಕಾಲಿಟ್ಟಿದ್ದು ಭೀತಿ ಮೂಡಿಸಿದೆ. ಈ ಬಗ್ಗೆ ಹೆತ್ತವರು ಕೂಡಾ ಮಕ್ಕಳ ಮೇಲೆ ನಿಗಾ ಇಡಬೇಕಾಗಿದೆ.

2013ರಲ್ಲಿ ಮೊದಲು ರಷ್ಯಾದಲ್ಲಿ ಈ ಡೆಡ್ಲಿ ಇಂಟರ್ ನೆಟ್ ಗೇಮ್ ಶುರುವಾಗಿತ್ತು. 50ದಿನಗಳ ಅವಧಿಯ ಗೇಮ್ ಇದಾಗಿದ್ದು, ಆಟಗಾರರಿಗೆ ಕಷ್ಟ ಕಷ್ಟದ ಸವಾಲುಗಳನ್ನು ನೀಡಲಾಗುತ್ತದೆ. ಈ ಆಟದ ಕಡೆಯ ಚಾಲೆಂಜ್ ಆಟಗಾರ ಆತ್ಮಹತ್ಯೆ ಮಾಡಿಕೊಳ್ಳುವುದು ಎನ್ನಲಾಗಿದೆ.

 

About sudina

Check Also

ಆಟೋ ಚಾಲಕರೂ ಹೆಲ್ಮೆಟ್ ಹಾಕೋಬೇಕಾ…? : ಹಾಕಿಲ್ಲಂತ ಫೈನ್ ಹಾಕಿದ್ದಾರೆ ಪುತ್ತೂರು ಪೊಲೀಸ್ರು…!

ಪುತ್ತೂರು : ಇದೊಂದು ಅಚ್ಚರಿಯ ಘಟನೆ. ತಕ್ಷಣಕ್ಕೆ ನಂಬುವುದಕ್ಕೂ ಅಸಾಧ್ಯ. ಆದರೆ, ಈ ಘಟನೆ ನಡೆದಿರೋದಂತೂ ಸತ್ಯ. ಟೂವೀಲರ್ ಚಾಲಕರಿಗೆ …

Leave a Reply

Your email address will not be published. Required fields are marked *

error: Content is protected !!