Wednesday , March 27 2019
ಕೇಳ್ರಪ್ಪೋ ಕೇಳಿ
Home / Sandalwood / ಭರ್ಜರಿಯಾಗಿದೆ ಹೊಸಬರ ‘ರಾಜಹಂಸ’

ಭರ್ಜರಿಯಾಗಿದೆ ಹೊಸಬರ ‘ರಾಜಹಂಸ’

ಬೆಂಗಳೂರು : ರಾಜಹಂಸ ಚಿತ್ರದ ಮೂಲಕ ಹೊಸ ಪ್ರತಿಭೆಗಳು ಪ್ರತಿಭಾ ಪ್ರದರ್ಶನಕ್ಕೆ ಮುಂದಾಗಿವೆ. ವಿಶಿಷ್ಟ ಕಥೆಯೊಂದಿಗೆ ಈ ಚಿತ್ರ ಮಾಡಲಾಗಿದೆ ಎಂದು ಚಿತ್ರ ತಂಡ ಹೇಳುತ್ತಿದೆ. ಗೌರಿಶಿಖರ್ ಈ ಚಿತ್ರದ ನಾಯಕ, ನಾಯಕಿ ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್…

ಇನ್ನು,ನಟರಾದ ಡಾ. ಶ್ರೀಧರ್, ಬಿ.ಸಿ ಪಾಟೀಲ್, ಯಮುನಾ, ರಾಜು ತಾಳಿಕೋಟೆ, ತಬಲಾ ನಾಣಿ, ಬುಲೆಟ್ ಪ್ರಕಾಶ್, ವಿಜಯ್‍ಚಂಡೂರ್ ಹೀಗೆ ಹಲವರು ಈ ಚಿತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರದ ಟೀಸರ್ ಈಗಾಗಲೇ ಗಮನ ಸೆಳೆದಿದೆ. ಈಗ ಚಿತ್ರ ತಂಡ ಟ್ರೇಲರ್ ಮೂಲಕವೂ ಗಮನ ಸೆಳೆಯುತ್ತಿದೆ.

ಆರು ಹಾಡುಗಳು ಈ ಚಿತ್ರದಲ್ಲಿದ್ದು, ಜೋಶ್ವಾ ಶ್ರೀಧರ್​ ಸಂಗೀತ ನೀಡಿದ್ದಾರೆ. ಇನ್ನು, ಕನ್ನಡ ರ್ಯಾಪರ್ ಚಂದನ್ ಶೆಟ್ಟಿ, ರಘು ದೀಕ್ಷಿತ್ ಮುಂತಾದ ಖ್ಯಾತ ನಾಮರು ಹಾಡಿರುವ ಹಾಡುಗಳು ಹೊಸ ಟ್ರೆಂಡ್ ಸೃಷ್ಟಿಸಿವೆ. ಅಲ್ಲದೆ, ಕಾಫಿ ವಿಥ್ ರಾಜಹಂಸ ಮುಖಾಂತರ ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್, ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​, ರೋರಿಂಗ್ ಸ್ಟಾರ್ ಶ್ರೀಮುರಳಿ, ಸಾಹಿತಿ ಚಂದ್ರಶೇಖರ್ ಕಂಬಾರ, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ, ರಂಗಕರ್ಮಿ ಮಾ|| ಹಿರಣ್ಣಯ್ಯ ಮುಂತಾದವರು ನಾಯಕನ ಜೊತೆ ಕಾಫಿಕುಡಿದು ತಂಡಕ್ಕೆ ಶುಭ ಹಾರೈಸಿದ್ದಾರೆ.

ಜನಮನ ಸಿನೆಮಾಸ್​ ನಿರ್ಮಾಣದ ಈ ಚಿತ್ರಕ್ಕೆ ಜಡೇಶ್​ ಕುಮಾರ್ ಹಂಪಿ ಕತೆ, ಚಿತ್ರಕತೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಧನಂಜಯ್ ದಿಡಿಗ ಸಾಹಿತ್ಯ, ಸಂಭಾಷಣೆ ಬರೆದಿದ್ದು, ಆರೂರ್​ ಸುಧಾಕರ್​ ಛಾಯಾಗ್ರಾಹಣ ಮಾಡಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!