Saturday , September 22 2018
ಕೇಳ್ರಪ್ಪೋ ಕೇಳಿ
Home / News NOW / ವಿಧಾನಪರಿಷತ್ ಸದಸ್ಯೆಯೊಂದಿಗೆ ಕಾಂಗ್ರೆಸ್ ನಾಯಕನ ಆಕ್ಷೇಪಾರ್ಹ ನಡವಳಿಕೆ…? : ವೈರಲ್ ಆಗಿದೆ ವೀಡಿಯೋ

ವಿಧಾನಪರಿಷತ್ ಸದಸ್ಯೆಯೊಂದಿಗೆ ಕಾಂಗ್ರೆಸ್ ನಾಯಕನ ಆಕ್ಷೇಪಾರ್ಹ ನಡವಳಿಕೆ…? : ವೈರಲ್ ಆಗಿದೆ ವೀಡಿಯೋ

ಕೊಡಗು ಪ್ರತಿನಿಧಿ ವರದಿ

ಮಡಿಕೇರಿ : ಆಗಸ್ಟ್​ 15 ರಂದು ಸ್ವಾತಂತ್ಯ ದಿನಾಚರಣೆ ಸಂದರ್ಭದಲ್ಲಿ ನಡೆದಿರುವ ಘಟನೆಯ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೇದಿಕೆಯಲ್ಲಿದ್ದ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್​ ಪಕ್ಕದಲ್ಲೇ ಕುಳಿತಿದ್ದ ವಿಧಾನಪರಿಷತ್ ಸದಸ್ಯೆಯೊಬ್ಬರ ಕೈ ಹಿಡಿಯುತ್ತಾರೆ. ಆಗ ತಕ್ಷಣ ಎಚ್ಚೆತ್ತ ಆ ಸದಸ್ಯೆ ರಮೇಶ್​ ಅವರ ಕೈಯನ್ನು ಪಕ್ಕಕ್ಕೆ ಇಡುವ ದೃಶ್ಯ ವೀಡಿಯೋದಲ್ಲಿ ಸೆರೆ ಆಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ವೇದಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಮ್​ ಕೂಡಾ ಇದ್ದರು. ಈ ವೀಡಿಯೋದಲ್ಲಿ ಇಬ್ಬರೂ ನಗುತ್ತಲೇ ಇರುವುದು ಕೂಡಾ ದಾಖಲಾಗಿದೆ. ಆದರೂ, ಎಲ್ಲರೂ ಸ್ವಾತಂತ್ರ್ಯೋತ್ಸವ ಸಡಗರದಲ್ಲಿ ಇದ್ದಾಗ ರಮೇಶ್​ ಅವರು ತೋರಿದ ವರ್ತನೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೇಸರವಾಗಿದೆ : ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಸದಸ್ಯೆ ಟಿ.ಪಿ,ರಮೇಶ್​ ವರ್ತನೆಯಿಂದ ಬೇಸರವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ವರ್ತನೆ ಸರಿಯಲ್ಲ. ಹೆಣ್ಣು ಮಕ್ಕಳಿಗೆ ಪ್ರತಿಯೊಬ್ಬರೂ ಗೌರವಕೊಡಬೇಕು ಎಂದು ಹೇಳಿದ್ದಾರೆ.

ದುರುದ್ದೇಶ ಇರಲಿಲ್ಲ : ಇನ್ನೊಂದೆಡೆ, ಬೇರೆ ಯಾವುದೇ ಉದ್ದೇಶ ಇಟ್ಟುಕೊಂಡು ನಾನು ಅವರ ಕೈ ಮುಟ್ಟಿಲ್ಲ. ತಂಗಿ ಎಂಬ ಭಾವನೆಯಿಂದ ಕೈ ಮುಟ್ಟಿದ್ದೆ ಎಂದು ಟಿ.ಪಿ.ರಮೇಶ್​ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಪಷ್ಟನೆ : ನಮಗೂ ಈ ವೀಡಿಯೋ ದೊರೆತಿದೆ. ಆದರೆ, ಸುದ್ದಿಯನ್ನು ಪ್ರಕಟಿಸುವ ದೃಷ್ಟಿಯಿಂದ ವೀಡಿಯೋವನ್ನು ಪ್ರಕಟಿಸದೆ ಆ ವೀಡಿಯೋದ ಸ್ಕ್ರೀನ್​ಶಾಟ್​ ಬಳಸಲಾಗಿದೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!