Wednesday , March 27 2019
ಕೇಳ್ರಪ್ಪೋ ಕೇಳಿ
Home / Interval / ರಜನಿಕಾಂತ್ ಮೊದಲ ಚಿತ್ರಕ್ಕೆ ಈಗ 43 ವರ್ಷ

ರಜನಿಕಾಂತ್ ಮೊದಲ ಚಿತ್ರಕ್ಕೆ ಈಗ 43 ವರ್ಷ

ಶಿವಾಜಿರಾವ್​ ಗಾಯಕ್​ವಾಡ್​​… ಅಂದಿನ ಬೆಂಗಳೂರಿನ ಪ್ರಮುಖ ಸಂಚಾರ ಸಾರಿಗೆ ಬಿಟಿಎಸ್​​ ಬಸ್​ನ ಕಂಡೆಕ್ಟರ್​… ಆದರೆ, ಚಿಕ್ಕಂದಿನಿಂದಲೇ ನಟನೆಯ ಬಗ್ಗೆ ಆಸಕ್ತಿ ಇದ್ದ ಶಿವಾಜಿರಾವ್​ ತನ್ನ ಸ್ಟೈಲ್​ಗಳಿಂದಲೇ ಬಸ್​ನಲ್ಲಿ ಗಮನ ಸೆಳೆಯುತ್ತಿದ್ದರು… ಸಿಗರೇಟನ್ನು ಮೇಲಕ್ಕೆ ಚಿಮ್ಮಿಸಿ ಬಾಯಿಗೆ ಹಾಕುವುದು ಸೇರಿದಂತೆ ಹಲವು ಸ್ಟೈಲ್​ಗಳಿಗೆ ಅಂದು ಈ ಕಂಡೆಕ್ಟರ್​ ಫೇಮಸ್​​..

ಕಂಡೆಕ್ಟರ್ ಆಗಿದ್ದರೂ ಬಣ್ಣದ ಲೋಕದ ಮೇಲಿನ ಪ್ರೀತಿ ಶಿವಾಜಿರಾವ್​ಗೆ ಕಡಿಮೆ ಆಗಿರಲಿಲ್ಲ. ಹೀಗಾಗಿ, ಗೆಳೆಯ ಆಸೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದವರು ಅದೇ ಬಸ್​​ನಲ್ಲಿ ಡ್ರೈವರ್ ಆಗಿದ್ದ ರಾಜ್​ಬಹದ್ದೂರ್​​.. ಹೀಗೆ ಗೆಳೆಯನ ಸಹಾಯದಿಂದ ಚೆನ್ನೈ ತಲುಪಿದ ಶಿವಾಜಿರಾವ್ ಒಂದಷ್ಟು ದಿನ ಕಷ್ಟದ ಬಳಿಕ ಕೊನೆಗೆ ಸಂದಿಸಿದ್ದು ತಮಿಳು ಚಿತ್ರರಂಗದ ಮೇರು ನಿರ್ದೇಶಕ ಕೆ. ಬಾಲಚಂದರ್​ ಅವರನ್ನು…

ಬಾಲಚಂದರ್​ ಚಿತ್ರರಂಗದ ದಂತಕತೆ. ಇವರನ್ನು ತನ್ನ ಸ್ಟೈಲ್ ಮೂಲಕವೇ ಗಮನ ಸೆಳೆದ ಶಿವಾಜಿ ಒಂದು ಚಿತ್ರದಲ್ಲಿ ಛಾನ್ಸ್​ ಕೂಡಾ ಪಡೆದರು. ಇಲ್ಲಿ ಶಿವಾಜಿಯ ಹೆಸರು ರಜನಿಕಾಂತ್ ಎಂದೂ ಬದಲಾಯಿತು… ಹೊಸ ನಾಮಕಾರಣದೊಂದಿಗೆ ಈ ರಜನಿಕಾಂತ್ ನಟಿಸಿದ ಮೊದಲ ಚಿತ್ರ ಅಪೂರ್ವ ರಾಗಂಗಳ್​​..

ತಮಿಳು ಚಿತ್ರರಂಗದ ಮತ್ತೋರ್ವ ಸ್ಟಾರ್ ಕಮಲ್​ ಹಾಸನ್​ ಅಪೂರ್ವ ರಾಗಂಗಳ್​ ಚಿತ್ರದ ನಾಯಕ. ರಜನಿಕಾಂತ್​ಗೆ ಈ ಚಿತ್ರದಲ್ಲಿ ಸಣ್ಣ ಪಾತ್ರ… ಈ ಚಿತ್ರ 1975 ಆಗಸ್ಟ್​ 18 ರಂದು ಬಿಡುಗಡೆಯಾಗಿತ್ತು.. ಈಗ ಈ ಅಪೂರ್ವ ರಾಗಂಗಳ್​ ಚಿತ್ರಕ್ಕೆ 43ನೇ ವಸಂತ…

ಈ ಚಿತ್ರದಲ್ಲಿ ರಜನಿಗೆ ಸಣ್ಣ ಪಾತ್ರ. ಆರಂಭದ ದಿನಗಳಲ್ಲಿ ರಜನಿಕಾಂತ್​ ಕಮಲ್ ಹಾಸನ್​ ಚಿತ್ರದಲ್ಲಿ ಎರಡನೇ ನಾಯಕನಾಗಿಯೇ ಅಭಿನಯಿಸುತ್ತಿದ್ದದ್ದು… ಬಳಿಕ ಇಬ್ಬರೂ ಸಮಾನಾಂತರವಾಗಿ ಬೆಳೆದು ಇಂಡಸ್ಟ್ರಿಯನ್ನೇ ಆಳುವುದಕ್ಕೆ ಆರಂಭಿಸಿದ್ದರು ಎಂಬುದು ಇತಿಹಾಸ…

ಹೀಗೆ ಆರಂಭವಾದ ರಜನಿ ಸಿನಿ ಜೀವ ಹಲವು ಏಳು ಬೀಳುಗಳನ್ನು ಕಂಡರೂ ಅದು ಅತ್ಯಲ್ಪ. ತನ್ನ ಪಾತ್ರ ಪೋಷಣೆ, ಸ್ಟೈಲ್​, ಪಂಚ್​ ಡೈಲಾಗ್​ನಿಂದಲೇ ಗಮನ ಸೆಳೆದಿದ್ದರು ರಜನಿಕಾಂತ್​… ಇದೇ ರಜನಿಕಾಂತ್​ರನ್ನು ಸೂಪರ್​ಸ್ಟಾರ್ ಆಗುವ ಮಟ್ಟಕ್ಕೇರಿಸಿತ್ತು… ಮಾಸ್​ ಪ್ರೇಕ್ಷಕರಿಗೆ ಇಷ್ಟವಾದ ನಾಯಕರಿವರು. ಬಂಡಾಯ ನಾಯಕನಾಗಿಯೇ ಹೆಚ್ಚು ಹೊರಹೊಮ್ಮಿದ್ದವರು ರಜನಿ. ಕಾರ್ಮಿಕರ, ತುಳಿತಕ್ಕೊಳಗಾದ ಕುಟುಂಬದ ಪ್ರತಿನಿಧಿಯಾಗಿ ತೆರೆ ಮೇಲೆ ಕಂಡವರು ಈ ಶಿವಾಜಿ ರಾವ್ ಗಾಯಕ್​ವಾಡ್​… ಕೂಲಿ, ರೈತ, ವೈಯ್ಟರ್​​, ಆಟೋ ಡ್ರೈವರ್​​ ಸೇರಿದಂತೆ ಹಲವು ಪಾತ್ರಗಳನ್ನು ಮಾಡುವ ಮೂಲಕವೇ ಮಾಸ್​ ಪ್ರೇಕ್ಷಕರಿಂದ ತಲೈವರ್​ ಎಂಬ ಅಭಿಮಾನದ ಪಟ್ಟಕ್ಕೂ ಪಾತ್ರರಾದರು.

ಸಿಗರೇಟನ್ನು ಬಗೆ ಬಗೆಯಾಗಿ ಬಳಸುವುದು, ಮೇಲಕ್ಕೆ ಚಿಮ್ಮಿಸಿ ಬಾಯಲ್ಲಿ ಹಿಡಿಯುವುದು, ಸ್ಟೈಲಿಶ್ ನಡಿಗೆಯ ಮೂಲಕ ಗಮನ ಸೆಳೆಯುವುದು ರಜನಿಗೊಂದು ಬೇರೆಯದ್ದೇ ಇಮೇಜ್​ ಅನ್ನು ತಂದಿತ್ತು. ಅದೂ ಅಲ್ಲದೆ, ಡಿಫ್ರೆಂಟ್ ಮ್ಯಾನರಿಸಂ, ಡೈಲಾಗ್ ಡೆಲಿವರಿಯಿಂದ ಗಮನ ಸೆಳೆದ ರಜನಿಕಾಂತ್​ ಸಿನಿಲೋಕದಲ್ಲಿ ಬೇರೊಂದು ಮಟ್ಟಕ್ಕೆ ಹೋಗಿ ನಿಂತರು. ರಜನಿ ಅವರ ಕೆಲವೊಂದು ಡೈಲಾಗ್​ಗಳು ಆಲ್​ ಟೈಮ್ ಹಿಟ್​…

ಹೀಗೆ ಸಿನಿಲೋಕದಲ್ಲಿ ರಜನಿ ಜರ್ನಿ ಅಪ್ರತಿಮ… 43 ವರ್ಷದಿಂದ ಬಣ್ಣದ ಲೋಕದಲ್ಲಿ ಇರುವ ರಜನಿ ಚರಿಷ್ಮಾ ಇನ್ನೂ ಕಡಿಮೆಯಾಗಿಲ್ಲ. ಜನರ ಮನಸ್ಸಿನಲ್ಲಿ ಇವರಿಗೆ ಇರುವ ದೊಡ್ಡ ಸ್ಥಾನ ಅದನ್ನು ಪದದಲ್ಲಿ ಬಣ್ಣಿಸಲೇ ಸಾಧ್ಯವಿಲ್ಲ… ಇದುವರೆಗೆ ಸುಮಾರು 162 ಚಿತ್ರಗಳಲ್ಲಿ ನಟಿಸಿರುವ ರಜನಿ ಈಗಲೂ ಸ್ಟಾರ್​​..

ವಯಸ್ಸು 66 ಆದರೂ ರಜನಿ ಈಗಲೂ ಚಿತ್ರರಂಗದ ಯಂಗ್ ಸ್ಟಾರ್​ಗಳೊಂದಿಗೆ ಬಾಕ್ಸ್​ ಆಫೀಸ್​ನಲ್ಲಿ ಜಿದ್ದಾಜಿದ್ದಿನ ಸರ್ಧೆಗೆ ಇಳಿಯುತ್ತಾರೆ. ಸದ್ಯ ಬರುತ್ತಿರುವ 2.0 ಮತ್ತು ಕಾಲ ಚಿತ್ರದವೂ ಈಗ ಸಾಕಷ್ಟು ನಿರೀಕ್ಷೆ ಮೂಡಿಸಿದೆ… ರಜನಿ ಚಿತ್ರ ಬಿಡುಗಡೆ ಯಾಗುತ್ತದೆ ಎಂದರೆ ಅಭಿಮಾನಿಗಳಿಗೆ ಅದೊಂದು ಹಬ್ಬವೇ ಸರಿ… ಅಂದರೆ ರಜನಿಗೆ ರಜನಿ ಅವರೆ ಸಾಟಿ.

ಇತ್ತೀಚಿನ ದಿನಗಳಲ್ಲಿ ಒಂದಷ್ಟು ಸೋಲನ್ನು ಕಂಡಿರುವ ರಜನಿ ಯಾವತ್ತೂ ತಮ್ಮ ನಟನೆಯಿಂದ ಹಿಂದೆ ಸರಿದವರೇ ಅಲ್ಲ. ಅಭಿಮಾನಿಗಳೂ ರಜನಿ ಅವರಿಂದ ಬಯಸುವುದೇ ಇದನ್ನು… ತೆರೆ ಮೇಲೆ ಯಾವತ್ತೂ ರಜನಿ ಅಬ್ಬರಿಸಬೇಕು ಎನ್ನುವುದೇ ಅದೆಷ್ಟೋ ಅಭಿಮಾನಿಗಳ ಹೆಬ್ಬಯಕೆ…

 

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!