Wednesday , December 12 2018
ಕೇಳ್ರಪ್ಪೋ ಕೇಳಿ
Home / News NOW / ದೂರು ನೀಡಿದ ಮಹಿಳೆಗೆ ಜಿಮ್​​ನಲ್ಲೇ ಪಂಚ್​​..!  CCTV ವೀಡಿಯೊ ನೋಡಿ..

ದೂರು ನೀಡಿದ ಮಹಿಳೆಗೆ ಜಿಮ್​​ನಲ್ಲೇ ಪಂಚ್​​..!  CCTV ವೀಡಿಯೊ ನೋಡಿ..

ಇಂದೋರ್ :  ವೀಡಿಯೊ ನೋಡಿದರೆ ನಿಜವಾಗಲೂ ಒಂದು ಸಲ ಶಾಕ್​ ಆಗುತ್ತದೆ. ಮಧ್ಯಪ್ರದೇಶದ ಇಂದೋರ್​​ ಜಿಮ್​​ನಲ್ಲಿ ನಡೆದಿರುವ ನೈಜ ಘಟನೆ ಇದು. ಜಿಮ್​​ನಲ್ಲೇ ವರ್ಕ್​​ಔಟ್​ ಮಾಡುತ್ತಿದ್ದ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಯಾಕಂದ್ರೆ ಈ ಜಿಮ್​​ನಲ್ಲಿ ಈತನ ನಡವಳಿಕೆ ಸರಿಯಾಗಿರಲಿಲ್ಲವಂತೆ. ಈ ಬಗ್ಗೆ ಈ ಮಹಿಳೆ ಹಲವು ಬಾರಿ ದೂರು ಕೊಟ್ಟಿದ್ದರೂ ಜಿಮ್​ ಮಾಲೀಕರು ಪರಿಗಣಿಸಿರಲಿಲ್ಲವಂತೆ. ಬಹುಶಃ ಇದೇ ಇಲ್ಲಿ ಗಲಾಟೆಗೆ ಕಾರಣವಾಗಿರಬಹುದು..


ವೀಡಿಯೊದಲ್ಲಿ ಏನಿದೆ..? : ಸ್ಲೀವ್​ಲೆಸ್​ ಟೀ-ಶರ್ಟ್​ ಹಾಕಿಕೊಂಡಿರುವ ವ್ಯಕ್ತಿಯೊಬ್ಬ ವರ್ಕ್​​ಔಟ್​ ಮಾಡಲು ರೆಡಿಯಾಗುತ್ತಿದ್ದಾನೆ. ಅಲ್ಲೇ ಇದ್ದ ಇನ್ನೊಬ್ಬ ಅವನಿಗೆ ವೇಯ್ಡ್​​ ಇಟ್ಟು ಸಹಾಯ ಮಾಡುತ್ತಿದ್ದಾನೆ. ಈತನ ಹಿಂದೆಯೇ ನಿಂತಿದ್ದ ಯುವತಿ ಈತನನ್ನು ನೋಡಿ ಏನನ್ನೋ ಹೇಳುತ್ತಾಳೆ. ತಕ್ಷಣ ಆತ ಹಿಂದೆ-ಮುಂದೆ ನೋಡದೆ ಆಕೆಯ ಹಣೆಗೆ ಬಲವಾಗಿ ಪಂಚ್​ ಕೊಡುತ್ತಾನೆ. ಆಗ ಆಕೆ ಕುಸಿದಂತಾಗಿ ಹಣೆಗೆ ಕೈಯನ್ನು ಹಿಡಿದುಕೊಳ್ಳುತ್ತಾಳೆ. ಆಗ ಅಲ್ಲೇ ಇದ್ದ ಕೆಲವರು ದಾಳಿ ನಡೆಸಿದ ವ್ಯಕ್ತಿಯನ್ನು ತಡೆಯುತ್ತಾರೆ. ಆದರೆ ಬಲವಾಗಿ ಯುವತಿಯ ಕಾಲಿಗೆ ಈತ ಒದೆಯುತ್ತಾನೆ. ತಕ್ಷಣ ಯುವತಿ ಕೆಳಗೆ ಕುಸಿದು ಬೀಳುತ್ತಾಳೆ. ಈ ವೇಳೆ ಜಿಮ್​​ನಲ್ಲಿದ್ದ ಸದಸ್ಯರು ದಾಳಿಕೋರನನ್ನು ಎಳೆಯುತ್ತಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದೆ. ನ್ಯೂಸ್​ ಏಜೆನ್ಸಿಯೊಂದು ಈ ವೀಡಿಯೊ ರಿಲೀಸ್​ ಮಾಡಿದೆ. ಸಿಸಿಟಿವಿಯಲ್ಲಿರುವ ದಾಳಿಕೋರನ ವಿರುದ್ಧ ಹಿಂಸೆ ಮತ್ತು ಹಲ್ಲೆ ಪ್ರಕರಣ ದಾಖಲಿಸಲಾಗಿದೆ.

courtesy : ANI

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!