Saturday , February 16 2019
ಕೇಳ್ರಪ್ಪೋ ಕೇಳಿ
Home / News NOW / ಇಂಡಿಯಾ V/s ಶ್ರೀಲಂಕಾ : ಫುಟ್ಬಾಲ್​ ಮೈದಾನದಲ್ಲಿ ಕೊಹ್ಲಿ V/s ಧೋನಿ..!

ಇಂಡಿಯಾ V/s ಶ್ರೀಲಂಕಾ : ಫುಟ್ಬಾಲ್​ ಮೈದಾನದಲ್ಲಿ ಕೊಹ್ಲಿ V/s ಧೋನಿ..!

ದಂಬುಲ್ಲಾ : ಫಿಟ್​​ನೆಸ್​​ ವಿಚಾರದಲ್ಲಿ ಟೀಂಇಂಡಿಯಾ ವಿಶ್ವದಲ್ಲೇ ಅತ್ಯುತ್ತಮ ತಂಡ ಎಂದೇ ಪರಿಗಣಿಸಲಾಗಿದೆ. ಕೊಹ್ಲಿ ನೇತೃತ್ವದಲ್ಲಿ ಭಾರತ ಕ್ರಿಕೆಟ್​ ತಂಡ ಲಂಕಾದಲ್ಲಿ ನಿರಂತರವಾಗಿ ಫಿಟ್​ನೆಸ್​ ಕಸರತ್ತುಗಳನ್ನು ನಡೆಸಿದೆ..ಸಾಮಾನ್ಯವಾಗಿ ವಾರ್ಮ್​ಅಪ್​ ಆಗಲು ಕೊಹ್ಲಿ & ಟೀಮ್​​ ಸಾಮಾನ್ಯವಾಗಿ ಫುಟ್ಬಾಲ್​ ಆಡುತ್ತದೆ. ಆಟಗಾರನೊಬ್ಬನ ದೈಹಿಕ ಸಾಮರ್ಥ್ಯ ಪರೀಕ್ಷೆಗೊಡ್ಡಲು ಫುಟ್ಬಾಲ್​​ ಬಹಳ ಸಹಾಯಕಾರಿ ಆಟ. ಫಿಟ್​ನೆಸ್​ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಟೀಂಇಂಡಿಯಾದ ಥಿಂಕ್​ಟ್ಯಾಂಕ್​ ಹಾಗೂ ತರಬೇತುದಾರ ರವಿ ಶಾಸ್ತ್ರಿ, ನಾಯಕ ವಿರಾಟ್​ ಕೊಹ್ಲಿ, ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಈಗಾಗಲೇ ಖಡಕ್​ ಆಗಿ ಹೇಳಿದ್ದಾರೆ. ಬಿಸಿಸಿಐ ಮೂಲಗಳ ಪ್ರಕಾರ​ ಯುವರಾಜ್​ ಸಿಂಗ್​ ಮತ್ತು ಸುರೇಶ್​ ರೈನಾ ಶ್ರೀಲಂಕಾ ಏಕದಿನ ಕ್ರಿಕೆಟ್​ ಸರಣಿಗೆ ಆಯ್ಕೆಯಾಗದೇ ಇರಲು ಅವರ ಫಿಟ್​ನೆಸ್​ ಕೊರತೆಯೇ ಕಾರಣ. ದಂಬುಲ್ಲಾದಲ್ಲಿ ನಾಳೆ ಲಂಕಾ ವಿರುದ್ಧ ಮೊದಲ ಏಕದಿನ ಕ್ರಿಕೆಟ್​ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಅಭ್ಯಾಸ ನಡೆಸಿದ ಭಾರತ ಫುಟ್ಬಾಲ್​ ಪಂದ್ಯವಾಡಿ ಗಮನ ಸೆಳೆಯಿತು.

ಟೀಂಇಂಡಿಯಾ ಮಾಜಿ ನಾಯಕ ಎಂಎಸ್​ ಧೋನಿಗೆ ಫುಟ್ಬಾಲ್​ ಎಂದರೆ ಪಂಚಪ್ರಾಣ. ಈ ಗೇಮ್​​ನಲ್ಲೂ ಧೋನಿ ಅದ್ಭುತ ಆಟಗಾರ ಎನ್ನೋದು ಎಲ್ಲರಿಗೂ ಗೊತ್ತಿದೆ. ಇನ್ನೊಂದು ಕಡೆ ಟೀಂಇಂಡಿಯಾದ ಫಿಟ್ಟೆಸ್ಟ್​​ ಕ್ರಿಕೆಟರ್​​ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕೂಡಾ ಫುಟ್ಬಾಲ್​​ನಲ್ಲಿ ಧೋನಿಗೆ ಪ್ರಬಲ ಪೈಪೋಟಿ ನೀಡುವ ಆಟಗಾರ ಅನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಸ್ವತಃ ಬಿಸಿಸಿಐಯೇ ವಿರಾತ್​ ಕೊಹ್ಲಿ V/s ಎಂಎಸ್​ ಧೋನಿ V/s ಕೆಎಲ್​ ರಾಹುಲ್​ ಎಂದು ಟ್ವೀಟ್​ ಮಾಡಿದೆ.

ಟೀಂಇಂಡಿಯಾ ಶ್ರೀಲಂಕಾ ವಿರುದ್ಧ 5 ಏಕದಿನ ಮತ್ತು 1 ಟಿ-20 ಪಂದ್ಯ ಆಡಲಿದೆ. ಏಕದಿನ ಕ್ರಿಕೆಟ್​ ಸರಣಿ ನಾಳೆ ದಂಬುಲ್ಲಾದಲ್ಲಿ ಆರಂಭವಾಗಲಿದೆ. ಕೊನೆಯ ಪಂದ್ಯ ಸೆ. 3ರಂದು ಕೊಲಂಬೋದಲ್ಲಿ ನಡೆಯಲಿದೆ. ಸೆ.6ರಂದು ಏಕೈಕ ಟಿ-20 ಪಂದ್ಯ ನಡೆಯಲಿದೆ. ಟೀಂಇಂಡಿಯಾ ಈಗಾಗಲೇ ದಂಬುಲ್ಲಾಗೆ ಬಂದಿಳಿದಿದೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!