Tuesday , May 22 2018
Home / Film News / Bollywood / ಸುಶ್ಮಿತಾ ಸೇನ್​ಗೆ ಬಂದಿದೆ ಸಂಕಷ್ಟ…!

ಸುಶ್ಮಿತಾ ಸೇನ್​ಗೆ ಬಂದಿದೆ ಸಂಕಷ್ಟ…!

ಚೆನ್ನೈ : ಬಾಲಿವುಡ್​ನ ಮಾದಕ ಚೆಲುವೆ ಸುಶ್ಮಿತಾ ಸೇನ್​​ಗೆ ಈಗ ಸಂಕಷ್ಟ ಎದುರಾಗಿದೆ. ಐಷಾರಾಮಿ ಕಾರು ಆಮದು ವಿಚಾರದಲ್ಲಿ ಆಗಿರುವ ವಂಚನೆ ಹಿನ್ನೆಲೆಯಲ್ಲಿಮಾಜಿ ಭುವನ ಸುಂದರಿ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ. ಸೆಪ್ಟೆಂಬರ್ 18ಕ್ಕೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಮದ್ರಾಸ್​ ಹೈಕೋರ್ಟ್​ ಸುಶ್ಮಿತಾ ಸೇನ್​ಗೆ ಈ ನಿರ್ದೇಶನ ನೀಡಿದೆ.

ಐಷಾರಾಮಿ ಕಾರು ಆಮದು ವಿಚಾರಕ್ಕೆ ಸಂಬಂಧಿಸಿದಂತೆ ಜುಲೈ 20 ರಂದು ಸುಶ್ಮಿತಾ ವಿರುದ್ಧ ವಾರೆಂಟ್ ಜಾರಿ ಆಗಿತ್ತು. ಈ ವಾರೆಂಟ್ ವಿರುದ್ಧ ಸೇನ್ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಸೆಪ್ಟೆಂಬರ್ 18 ರಂದು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚನೆ ನೀಡಿದೆ. ಅಲ್ಲದೆ, ಅದೇ ದಿನ ಮರು ವಿಚಾರಣೆಯೂ ನಡೆಯಲಿದೆ ಎಂದು ನ್ಯಾಯಪೀಠ ಹೇಳಿದೆ.

ಇನ್ನು, ದೂರುದಾರ ಸುಶ್ಮಿತಾ ಸೇನ್ ಭದ್ರತೆಗೆ ಬೇಕಾದಂತಹ ಎಲ್ಲಾ ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಸದ್ಯ ಜಾರಿಯಾಗುವ ವಾರೆಂಟ್ ಅನ್ನು ರದ್ದು ಮಾಡಿದೆ.

2006 ಜನವರಿ 24 ರಂದು ಸುಶ್ಮಿತಾ ಐಷಾರಾಮಿ ಕಾರನ್ನು ಆಮದು ಮಾಡಿಕೊಂಡಿದ್ದರು. ಆದರೆ, ಹೀಗೆ ಆಮದು ಮಾಡಿಕೊಂಡಾಗ ಸುಶ್ಮಿತಾ ಟ್ರಾನ್ಸಫರ್​ ಆಫ್​ ರೆಸಿಡೆನ್ಸ್​ ರೂಲ್​​ ಅನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!