Monday , September 24 2018
ಕೇಳ್ರಪ್ಪೋ ಕೇಳಿ
Home / Film News / Bollywood / ಅಮೀರ್ ಖಾನ್ ದೇಹಸಿರಿ, ಮುಖದ ಕಾಂತಿಯನ್ನು ಕಸಿದುಕೊಂಡ ಸ್ವೈನ್​ ಫ್ಲೂ…!

ಅಮೀರ್ ಖಾನ್ ದೇಹಸಿರಿ, ಮುಖದ ಕಾಂತಿಯನ್ನು ಕಸಿದುಕೊಂಡ ಸ್ವೈನ್​ ಫ್ಲೂ…!

ಮುಂಬೈ : ಬಾಲಿವುಡ್​ ಸೂಪರ್​ಸ್ಟಾರ್ ಅಮೀರ್ ಖಾನ್​ ಮತ್ತು ಕಿರಣ್​ ರಾವ್ ದಂಪತಿ ಸ್ವೈನ್​ ಫ್ಲೂ ನಿಂದ ಬಳಲುತ್ತಿರುವುದು ಹಳೇ ಸುದ್ದಿ (read also :ಅಮೀರ್ ಖಾನ್ ಮತ್ತು ಪತ್ನಿ ಕಿರಣ್ ರಾವ್​​ಗೆ ಎಚ್​1ಎನ್​1 ಜ್ವರ) ಈಗ ಈ ಜ್ವರದ ಕಾರಣ ಅಮೀರ್ ತನ್ನ ಮುಖದ ಕಾಂತಿ, ಚೈತನ್ಯವನ್ನೇ ಕಳೆದುಕೊಂಡಿದ್ದಾರೆ. ಅಲ್ಲದೆ, ಈ ಜ್ವರದಿಂದಾಗಿ ಅಮೀರ್ ದೇಹದ ತೂಕ ಕೂಡಾ ಇಳಿದಿದೆ. ಇದು ಬಾಲಿವುಡ್ ಫರೆಫಕ್ಷನಿಸ್ಟ್​ ಗ್ಲಾಮರ್​ಗೂ ಹೊಡೆತ ತಂದಿದೆ.

ಆಗಸ್ಟ್ ಮೊದಲ ವಾರದಲ್ಲಿ ತನಗೆ ಮತ್ತು ತನ್ನ ಹೆಂಡತಿ ಕಿರಣ್ ರಾವ್​ಗೆ ಸ್ವೈನ್ ಫ್ಲೂ ಇದೆ ಎಂದು ಅಮೀರ್ ಘೋಷಿಸಿದಾಗ ಅಭಿಮಾನಿಗಳೊಮ್ಮೆ ಬೆಚ್ಚಿ ಬಿದ್ದಿದ್ದರು. ಇದೇ ಜ್ವರದ ಕಾರಣದಿಂದ ಅಮೀರ್ ತಮ್ಮದೇ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇಲ್ಲಿ ಅಮೀರ್ ಬದಲಾಗಿ ಇವರ ಗೆಳೆಯ ಶಾರೂಖ್ ಕಾರ್ಯಕ್ರಮ ನಿರ್ವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಅಮೀರ್ ವೀಡಿಯೋ ಕಾನ್ಫರೆನ್ಸ್​ನಲ್ಲಿ ತಾನು ಮಾರಕ ಜ್ವರದಿಂದ ಬಳಲುತ್ತಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವುದಾಗಿ ಘೋಷಿಸಿದ್ದರು.

ಅಲ್ಲದೆ, ಈ ಸೋಂಕು ಅತೀ ಬೇಗ ಬೇರೆಯವರಿಗೆ ಹರಡುವುದರಿಂದ ಮನೆ ಬಿಟ್ಟು ಇವರು ಎಲ್ಲೂ ಹೋಗಿಯೇ ಇರಲಿಲ್ಲ. ಇದಾದ ಬಳಿಕ ಈಗ ಜ್ವರದಿಂದ ಗುಣಮುಖರಾಗಿರುವ ಅಮೀರ್ ತೀವ್ರ ಬಳಲಿರುವಂತೆ ಕಾಣುತ್ತಿದ್ದಾರೆ. ಇತ್ತೀಚೆಗೆ ತಮ್ಮ ಥಗ್ಸ್ ಆಫ್​ ಹಿಂದೂಸ್ಥಾನ್ ಚಿತ್ರದ ಡಬ್ಬಿಂಗ್​ಗಾಗಿ ಸ್ಟುಡಿಯೋಗಾಗಿ ಬಂದ ಸಂದರ್ಭದಲ್ಲಿ ಅಮೀರ್ ಬಳಲಿರುವಂತೆ ಕಂಡು ಬಂದಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!