Sunday , October 21 2018
ಕೇಳ್ರಪ್ಪೋ ಕೇಳಿ
Home / Sandalwood / ನಾನು ಯಶ್​ರನ್ನು ಮದ್ವೆ ಆಗ್ಲಾ…? : ಪತ್ನಿ ರಾಧಿಕಾ ಪಂಡಿತ್​​​​ ಬಳಿ ಅನುಮತಿ ಕೇಳಿದ ಯುವತಿ…!

ನಾನು ಯಶ್​ರನ್ನು ಮದ್ವೆ ಆಗ್ಲಾ…? : ಪತ್ನಿ ರಾಧಿಕಾ ಪಂಡಿತ್​​​​ ಬಳಿ ಅನುಮತಿ ಕೇಳಿದ ಯುವತಿ…!

ಬೆಂಗಳೂರು : ಇದನ್ನು ಅಭಿಮಾನ ಎನ್ನಬೇಕಾ…? ತಮಾಷೆ ಎನ್ನಬೇಕಾ…? ಗೊತ್ತಿಲ್ಲ. ಆದರೆ, ಯುವತಿಯೊಬ್ಬರು ರಾಕಿಂಗ್ ಸ್ಟಾರ್​ ಯಶ್​ರನ್ನು ಮದ್ವೆಯಾಗ್ಲಾ ಅಂತ ಯಶ್ ಪತ್ನಿ ನಟಿ ರಾಧಿಕಾ ಪಂಡಿತ್​ ಬಳಿಯೇ ಕೇಳಿದ್ದಾರೆ… ಸಾಮಾಜಿಕ ಜಾಲತಾಣದಲ್ಲಿ ಆ ಅಭಿಮಾನಿ ಹಾಕಿಕೊಂಡಿದ್ದ ಪೋಸ್ಟ್ ಮತ್ತು ಅದಕ್ಕೆ ರಾಧಿಕಾ ಪಂಡಿತ್​ ನೀಡಿದ ಉತ್ತರ ಈಗ ವೈರಲ್ ಆಗುತ್ತಿದೆ.

ಯಶ್​ಗೆ ದೊಡ್ಡ ಮಟ್ಟದ ಅಭಿಮಾನಿಗಳಿದ್ದಾರೆ. ಹೆಣ್ಣು ಮಕ್ಕಳು ಕೂಡಾ ಯಶ್​​ಗೆ ಮನಸೋತಿದ್ದಿದೆ. ಆದರೆ, ಯಶ್​ಗೆ ಮದುವೆಯಾಗಿದೆ ಎಂದು ಗೊತ್ತಾದ ಮೇಲೂ ಯಶ್ ಮೇಲಿನ ಪ್ರೀತಿ ಮಾತ್ರ ಕೆಲವರಿಗೆ ಕಡಿಮೆ ಆದಂತಿಲ್ಲ. ಅದಕ್ಕೆ ಸಾಕ್ಷಿ ಈ ಪೋಸ್ಟ್​​…

ಇವಿಷ್ಟು ನಡೆದದ್ದು ಇನ್ಸ್ಟಾಗ್ರಾಮ್​​​​ನಲ್ಲಿ.. ಯಶ್​ ಮತ್ತು ರಾಧಿಕಾ ಜೊತೆಗಿರುವ ಫೋಟೋ ಕಂಡ ಅಭಿಮಾನಿಯೊಬ್ಬರು ನಾನು ಯಶ್​ರನ್ನು ಮದುವೆಯಾಗ್ಲಾ ಅಂತ ನೇರವಾಗಿ ರಾಧಿಕಾ ಪಂಡಿತ್​ ಅವರಿಗೇ ಕೇಳಿದ್ದಾರೆ. ಈ ಪ್ರಶ್ನೆಗೆ ರಾಧಿಕಾ ಕೂಡಾ ‘ಯಶ್ ಒಪ್ಪಿದರೆ ಮದುವೆ ಆಗಿ ’ ಅಂತ ತಮಾಷೆಯಾಗಿಯೇ ಉತ್ತರ ಕೊಟ್ಟಿದ್ದಾರೆ.

ಅಭಿಮಾನಿಯ ಈ ಪ್ರಶ್ನೆ ಮತ್ತು ರಾಧಿಕಾ ಅವರ ತಮಾಷೆ ಉತ್ತರ ಈಗ ಎರಡೂ ವೈರಲ್ ಆಗುತ್ತಿದೆ…

* ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕೆಳಗೆ ಕಮೆಂಟ್ ಬಾಕ್ಸ್​ನಲ್ಲಿ ತಿಳಿಸಿ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!