Monday , January 21 2019
ಕೇಳ್ರಪ್ಪೋ ಕೇಳಿ
Home / News NOW / ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ರಾಜಾತಿಥ್ಯ…! : ಮೂವರು ಪೊಲೀಸರ ಅಮಾನತು

ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ರಾಜಾತಿಥ್ಯ…! : ಮೂವರು ಪೊಲೀಸರ ಅಮಾನತು

ಉಡುಪಿ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಆರೋಪಿಗಳಿಗೆ ಪೊಲೀಸರು ರಾಜಾತಿಥ್ಯ ನೀಡಿದ್ದಾರೆ. ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಮತ್ತು ಜ್ಯೋತಿಷಿ ನಿರಂಜನ್ ಭಟ್‍ನನ್ನು ವಿಚಾರಣೆಗೆಂದು ಮಂಗಳೂರು ಜೈಲಿನಿಂದ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ನಿಯಮದ ಪ್ರಕಾರ ಆರೋಪಿಗಳನ್ನು ಸರ್ಕಾರಿ ವಾಹನದಲ್ಲಿ ಕರೆ ತರಬೇಕು. ಆದರೆ, ಈ ಬಾರಿ ಪೊಲೀಸರು ಐಷಾರಾಮಿ, ಹವಾ ನಿಯಂತ್ರಿತ ಇನೋವಾ ಕಾರಿನಲ್ಲಿ ಆರೋಪಿಗಳನ್ನು ಕರೆ ತಂದಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಆರೋಪಿಗಳನ್ನು ಪೊಲೀಸ್ ಜೀಪ್‍ನಲ್ಲಿ ಕರೆ ತರಲಾಗಿತ್ತು. ಆದರೆ, ಈ ಬಾರಿ ಹವಾ ನಿಯಂತ್ರಿತ ಕಾರನ್ನು ಆರೋಪಿಗಳನ್ನು ಕರೆತರಲು ಬಳಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ರಾಜಾತಿಥ್ಯ ಕೊಡಲಾಗುತ್ತಿದೆ ಎಂಬ ಆರೋಪ ಹಳೆಯದ್ದು. ಸ್ಟಾರ್ ಹೊಟೇಲ್‍ನಲ್ಲಿ ಊಟ, ಜೈಲಿನಲ್ಲಿಯೂ ವಿಐಪಿ ಟ್ರೀಟ್‍ಮೆಂಡ್ ನೀಡುವ ಆರೋಪ ಇತ್ತು. ಇನ್ನು, ಈ ವಿಚಾರ ಮಾದ್ಯಮದಲ್ಲಿ ವರದಿಯಾಗುತ್ತಿದ್ದಂತೆ ಮೂವರು ಪೊಲೀಸರು ಅಮಾನತು ಮಾಡಲಾಗಿದೆ ಮತ್ತು ತನಿಖೆಯೂ ನಡೆಯುತ್ತಿದೆ. ಉಡುಪಿ ಎಸ್‍ಪಿ ಡಾ. ಸಂಜೀವ್ ಪಾಟೀಲ್ ಈ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಸಿಬ್ಬಂದಿ ರೇಣುಕಾ, ಸುಧಾಕರ್ ಮತ್ತು ಸಲ್ಮಾನ್ ಖಾನ್ ಅಮಾನತಾದವರಯ. ಮೇಲ್ನೋಟಕ್ಕೆ ಇವರು ತಪ್ಪು ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಎಸ್‍ಪಿ ಈ ಖಡಕ್ ಕ್ರಮ ಕೈಗೊಂಡಿದ್ದಾರೆ.

ಭಾಸ್ಕರ್ ಶೆಟ್ಟಿ ಕೊಲೆ ಆರೋಪಿ ಪತ್ನಿ ರಾಜೇಶ್ವರಿ ಈಗಾಗಲೇ ಹೈಕೋರ್ಟ್‍ಗೆ ಜಾಮೀನು ಅರ್ಜಿ ಸಲ್ಲಿಸಿದ್ದು, ಅದು ವಜಾ ಆಗಿದೆ. ಸುಪ್ರೀಂಕೋರ್ಟ್ ಕೂಡಾ ಜಾಮೀನು ನಿರಾಕರಿಸಿದೆ.

ಕಳೆದ ವರ್ಷದ ಜೂನ್ 28ರಂದು ಭಾಸ್ಕರ್ ಶೆಟ್ಟಿ ಅವರನ್ನು ಕೊಂದು ಹೋಮಕುಂಡದಲ್ಲಿ ಸುಟ್ಟು ಹಾಕಲಾಗಿತ್ತು ಎಂದು ಆರೋಪಿಸಲಾಗಿದ್ದು, ಇನ್ನೂ ಅವಶೇಷಗಳು ಸಿಕ್ಕಿಲ್ಲ… ಈ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!