Monday , September 24 2018
ಕೇಳ್ರಪ್ಪೋ ಕೇಳಿ
Home / Sandalwood / ಪ್ರಸಿದ್ಧಿ ಚಿಟ್​ ಫಂಡ್ ಮೋಸ : ನಟಿ ಸಂಜನಾ ಸೇರಿ ಹಲವರಿಂದ ಸಹಕಾರ ಸಂಘಗಳ ನಿಬಂಧಕರ ಕಚೇರಿಗೆ ಭೇಟಿ

ಪ್ರಸಿದ್ಧಿ ಚಿಟ್​ ಫಂಡ್ ಮೋಸ : ನಟಿ ಸಂಜನಾ ಸೇರಿ ಹಲವರಿಂದ ಸಹಕಾರ ಸಂಘಗಳ ನಿಬಂಧಕರ ಕಚೇರಿಗೆ ಭೇಟಿ

ಬೆಂಗಳೂರು : ಮಲ್ಲೇಶ್ವರದಲ್ಲಿರುವ ಪ್ರಸಿದ್ಧಿ ಚಿಟ್ ಫಂಡ್​ ಹಲವರಿಗೆ ಮೋಸ ಮಾಡಿದೆ. ಇದರಲ್ಲಿ ಸ್ಯಾಂಡಲ್​ವುಡ್ ನಟಿ ಸಂಜನಾ ಕೂಡಾ ಸೇರಿದ್ದಾರೆ. ಈ ಚಿಟ್​ ಫಂಡ್ ಸಂಜನಾರಿಗೆ 26 ಲಕ್ಷ ರೂಪಾಯಿ ವಂಚಿಸಿದೆ ಎಂದು ಆರೋಪಿಸಲಾಗಿದೆ. ಒಟ್ಟು 150 ಜನರಿಗೆ 16 ಕೋಟಿಯಷ್ಟು ವಂಚಿಸಿರುವ ಆರೋಪ ಪ್ರಸಿದ್ಧಿ ಚಿಟ್ ಫಂಡ್​ ಮೇಲಿದೆ.

ಮೊನ್ನೆ ಮೋಸ ಹೋದವರೆಲ್ಲಾ ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಇವರೆಲ್ಲಾ ಸಹಕಾರ ಸಂಘದ ನಿಬಂಧಕರ ಕಚೇರಿಗೆ ಹೋಗಿ ಮನವಿ ಸಲ್ಲಿಸಿದ್ದಾರೆ. ಅಲಿ ಅಸ್ಕರ್ ರಸ್ತೆಯಲ್ಲಿರುವ ಸಹಕಾರ ಸಂಘಗಳ ನಿಬಂಧಕರ ಕಚೇರಿಗೆ ನಟಿ ಸಂಜನಾ ಸೇರಿದಂತೆ ಹಲವರು ಭೇಟಿ ಕೊಟ್ಟು ನ್ಯಾಯ ಒದಗಿಸುವಂತೆ ಕೇಳಿಕೊಂಡಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!