Monday , September 24 2018
ಕೇಳ್ರಪ್ಪೋ ಕೇಳಿ
Home / Film News / Bollywood / ದೀಪಿಕಾ, ರಣವೀರ್​ ಕಿಸ್​ಗೆ ಸಂಜಯ್​ ಲೀಲಾ ಬನ್ಸಾಲಿ ಗರಂ…!

ದೀಪಿಕಾ, ರಣವೀರ್​ ಕಿಸ್​ಗೆ ಸಂಜಯ್​ ಲೀಲಾ ಬನ್ಸಾಲಿ ಗರಂ…!

ಮುಂಬೈ : ಬಾಲಿವುಡ್​ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ಪ್ರಣಯ ಪಕ್ಷಿಗಳು ಎಂಬುದು ಹಳೇ ವಿಷಯ. ಇದನ್ನು ಈ ಜೋಡಿ ಬಹಿರಂಗವಾಗಿ ಒಪ್ಪದೇ ಇದ್ದರೂ ಇವರು ಪ್ರೇಮ ಲೋಕದಲ್ಲಿ ವಿಹರಿಸುತ್ತಿರುವುದಂತೂ ಸತ್ಯ. ಈ ನಡುವೆ, ಇತ್ತೀಚಿಗೆ ಇವರಿಬ್ಬರು ಲೋಕವನ್ನೇ ಮರೆತು ಚುಂಬಿಸುತ್ತಿರುವಂತೆ ಕಾಣುವ ಚಿತ್ರವೊಂದು ವೈರಲ್ ಆಗಿದೆ. ಈ ಕಿಸ್​ಗೆ ನಿರ್ದೇಶಕರ ಸಂಜಯ್​ ಲೀಲಾ ಬನ್ಸಾಲಿ ಗರಂ ಆಗಿದ್ದಾರೆ…!

ಅರೇ ದೀಪಿಕಾ ಮತ್ತು ರಣವೀರ್​ ಕಿಸ್ ಕೊಟ್ಟರೆ ಬನ್ಸಾಲಿಗೆ ಯಾಕೆ ಕೋಪ ಬರ್ಬೇಕು…? ಅಂತ ನೀವ್​ ಕೇಳಬಹುದು. ಈ ಪ್ರಶ್ನೆ ಸಹಜ ಕೂಡಾ. ಆದರೆ, ಬನ್ಸಾಲಿ ಕೋಪಕ್ಕೆ ಒಂದು ಕಾರಣವೂ ಇದೆ. ಸಂಜಯ್​ ಲೀಲಾ ಬನ್ಸಾಲಿ ಈಗ ಪದ್ಮಾವತಿ ಎಂಬ ಚಿತ್ರವನ್ನು ಮಾಡುತ್ತಿದ್ದಾರೆ. ಇದು ಐತಿಹಾಸಿಕ ಕತೆಯುಳ್ಳ ಚಿತ್ರ. ಇಲ್ಲಿ ದೀಪಿಕಾ ಮತ್ತು ರಣವೀರ್ ನಾಯಕ ನಾಯಕಿಯರು.

ಆದರೆ, ಈ ಚಿತ್ರಕ್ಕೆ ಆರಂಭದಿಂದಲೂ ರಜಪೂತ ಸಮುದಾಯದ ವಿರೋಧ ಇದೆ. ಪರಿಣಾಮ, ಎರಡು ಮೂರು ಸಲ ಸಿನೆಮಾ ಸೆಟ್​ಗೇ ದಾಳಿ ನಡೆದಿದೆ. ಬನ್ಸಾಲಿಗೂ ಒಂದು ಗುಂಪು ಹೊಡೆದಿತ್ತು. ಸಿನೆಮಾ ಸೆಟ್​ಗೂ ಬೆಂಕಿ ಹಚ್ಚಿತ್ತು. ಹೀಗಾಗಿ, ಬಿಗಿ ಭದ್ರತೆಯಿಂದ ಈ ಸಿನೆಮಾ ಶೂಟಿಂಗ್ ನಡೆಯುತ್ತಿದೆ. ಈ ಎಲ್ಲಾ ಘಟನೆಗಳ ಬಳಿಕ ಬನ್ಸಾಲಿ ವಿವಾದದಿಂದ ದೂರ ಇರುವುದಕ್ಕೆ ಯತ್ನ ಮಾಡುತ್ತಿದ್ದರು. ತಮ್ಮ ನಟ ನಟಿಯರಿಗೂ ಬನ್ಸಾಲಿ ಇಂತಹದೊಂದು ಸೂಚನೆ ಕೊಟ್ಟಿದ್ದರು. ಯಾವುದೇ ವಿವಾದವಾದರೂ ಅದು ಚಿತ್ರದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂಬ ಆತಂಕ ಬನ್ಸಾಲಿ ಅವರದ್ದು. ಈಗಾಗಲೇ ರಜಪೂತ ಸಮುದಾಯದ ವಿರೋಧ ಎದುರಿಸುತ್ತಿರುವ ಬನ್ಸಾಲಿ ಮತ್ತೊಂದು ಸಲ ಇಂತಹ ಅವಕಾಶ ನೀಡಬಾರದು ಎಂಬ ದೃಢ ಯೋಚನೆಯಲ್ಲಿ ಇರುವಾಗಲೇ ಈ ಕಿಸ್ಸಿಂಗ್ ಫೋಟೋ ಬಹಿರಂಗವಾಗಿದೆ.

ಚಿತ್ರದಲ್ಲಿ ದೀಪಿಕಾ ನಿರ್ವಹಿಸುತ್ತಿರುವುದು ರಾಜಪೂತರ ರಾಣಿ ಪದ್ಮಾವತಿ ಪಾತ್ರವನ್ನು. ಹೀಗಾಗಿ, ಚಿತ್ರ ಮುಗಿಯುವವರೆಗಾದರೂ ಇಂತಹ ವಿವಾದದಿಂದ ದೂರ ಇರಲು ದೀಪಿಕಾಗೆ ಸ್ವತಃ ಬನ್ಸಾಲಿ ಅವರೇ ಹೇಳಿದ್ದರಂತೆ. ರಣವೀರ್ ಮತ್ತು ದೀಪಿಕಾ ಜೊತೆಯಾಗಿ ಸುತ್ತಾಡುವುದಕ್ಕೆ ಬನ್ಸಾಲಿ ಅವರದ್ದು ವಿರೋಧ ಇಲ್ಲ. ಆದರೆ, ಚಿತ್ರಕ್ಕೆ ಹಾನಿಯಾಗುವಂತಹ ರೀತಿಯಲ್ಲಿ ವರ್ತಿಸಬೇಡಿ ಎಂದು ಈ ಹಿಂದೆಯೇ ಅವರು ಸೂಚನೆ ಕೊಟ್ಟಿದ್ದರಂತೆ. ಹೀಗಾಗಿ, ಈಗ ಈ ಚುಂಬನದ ಫೋಟೋ ಹೊರಬಿದ್ದಿದ್ದರಿಂದ ಬನ್ಸಾಲಿ ಬೇಸರಗೊಂಡಿದ್ದಾರೆ ಎನ್ನುವುದು ಒಂದು ಸುದ್ದಿ…

ಪದ್ಮಾವತಿ ಚಿತ್ರ ಇದೇ ನವೆಂಬರ್ 17 ರಂದು ರಿಲೀಸ್ ಆಗುತ್ತಿದೆ. ಅಲ್ಲಿ ತನಕ ಬನ್ಸಾಲಿ ತುಂಬಾ ಜಾಗರೂಕತೆಯಿಂದ ಇರಲು ನಿರ್ಧರಿಸಿದ್ದಾರೆ. ಆದರೆ, ಆಗೊಮ್ಮೆ ಈಗೊಮ್ಮೆ ಬನ್ಸಾಲಿಗೆ ಇಂತಹ ಸಂಕಷ್ಟ ಕಾಡುತ್ತಲೇ ಇದೆ…!

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!