Monday , February 18 2019
ಕೇಳ್ರಪ್ಪೋ ಕೇಳಿ
Home / Mumbai Mail / ಕ್ಲಿನಿಕ್​ಗೆ ಬರುತ್ತಿದ್ದ ಮಹಿಳೆಯ ಅತ್ಯಾಚಾರ : ಥಾಣೆಯಲ್ಲಿ ವೈದ್ಯ ಅರೆಸ್ಟ್

ಕ್ಲಿನಿಕ್​ಗೆ ಬರುತ್ತಿದ್ದ ಮಹಿಳೆಯ ಅತ್ಯಾಚಾರ : ಥಾಣೆಯಲ್ಲಿ ವೈದ್ಯ ಅರೆಸ್ಟ್

ಥಾಣೆ : ತನ್ನ ಕ್ಲಿನಿಕ್​ಗೆ ಬರುತ್ತಿದ್ದ ಮಹಿಳೆಯನ್ನು ಅತ್ಯಾಚಾರ ಮಾಡಿದ ಆರೋಪಕ್ಕೆ ಥಾಣೆಯ ವೈದ್ಯನೊಬ್ಬ ಗುರಿಯಾಗಿದ್ದಾನೆ  ಮತ್ತು ಆರೋಪಕ್ಕೊಳಗಾಗಿರುವ ವೈದ್ಯನನ್ನು ಕ್ರೈಂ ಬ್ರಾಂಚ್​ ಪೊಲೀಸರು ಬಂಧಿಸಿದ್ದಾರೆ. ನೌಪಡ ಪ್ರದೇಶದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಸರ್ಜರಿ ಸ್ಪೆಷಲಿಸ್ಟ್​ ವೈದ್ಯರಿಗೆ ಸಹಾಯಕನಾಗಿದ್ದ ಈತ ಈ ಕೃತ್ಯವೆಸಗಿದ್ದಾನೆ. ಕಳೆದ 10 ವರ್ಷದಿಂದ ಈ ವೈದ್ಯ ಇಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದಾನೆ ಎಂದು ಗೊತ್ತಾಗಿದೆ.

ದಾರಾವಿಯ 21 ವರ್ಷದ ಗೃಹಿಣಿ ಈತನಿದ್ದ ಕ್ಲಿನಿಕ್​ಗೆ ಪರೀಕ್ಷೆಗೆ ಬರುತ್ತಿದ್ದರು. ಮೊನ್ನೆ ಈತ ಈ ಮಹಿಳೆಯನ್ನು ಪರೀಕ್ಷೆ ಮಾಡುತ್ತಿದ್ದ ಸಂದರ್ಭದಲ್ಲಿ ಅತ್ಯಾಚಾರ ಮಾಡಿದ್ದಾನೆ. ಈ ಸಂದರ್ಭದಲ್ಲಿ ಈಕೆ ಕಿರುಚಾಟದಾಗ ಬಾಯಿಗೆ ಕೈ ಮುಚ್ಚಿ ಬೆದರಿಕೆ ಹಾಕಿದ್ದಾನಂತೆ. ಬಳಿಕ ಇಲ್ಲಿಂದ ತಪ್ಪಿಸಿಕೊಂಡು ಬಂದ ಮಹಿಳೆ ನೌಪಡ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಈಕೆಯ ದೂರಿನನ್ವಯ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!