Sunday , December 16 2018
ಕೇಳ್ರಪ್ಪೋ ಕೇಳಿ
Home / Sudina Special / ಡ್ರೈವಿಂಗ್​ ಮಾಡುವಾಗ ಮೊಬೈಲ್​ ಬಳಸಬೇಡಿ : ಯಾಕೆ ಗೊತ್ತಾ..? ಈ VIDEO ನೋಡಿ..!

ಡ್ರೈವಿಂಗ್​ ಮಾಡುವಾಗ ಮೊಬೈಲ್​ ಬಳಸಬೇಡಿ : ಯಾಕೆ ಗೊತ್ತಾ..? ಈ VIDEO ನೋಡಿ..!

ವಾಹನ ಚಲಾಯಿಸುವಾಗ ಮೊಬೈಲ್ ನತ್ತ ಮುಖಮಾಡಿ ರಸ್ತೆಯ ಮೇಲಿನ ಗಮನವನ್ನು ಒಂದು ಕ್ಷಣ ಕಳೆದುಕೊಂಡರೆ ನಿಮ್ಮ ಜೀವಕ್ಕೆ ತೊಂದರೆ ಆಗಬಹುದು. ಯಾಕೆಂದರೆ ಈ ವೀಡಿಯೊ ನೋಡಿದ್ರೆ ನಿಮಗೇ ಗೊತ್ತಾಗುತ್ತದೆ ವಾಹನ ಚಲಾಯಿಸುವಾಗ ಮೊಬೈಲ್​ನಲ್ಲಿ ಮಾತನಾಡುವುದು ಎಷ್ಟು ಅಪಾಯಕಾರಿ ಅಂತ.

ಚೀನಾದ ಗೌಂಝಿ ನಗರದಲ್ಲಿ ನಡೆದ ಈ ಅಪಘಾತವೇ ಇದಕ್ಕೆ ಸಾಕ್ಷಿ. ಇಲ್ಲಿನ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಕಂದಕ ನಿರ್ಮಾಣವಾಯಿತು. ಈ ಕಂದಕ 6 ಅಡಿ ಆಳ 32 ಅಡಿ ಅಗಲವಿತ್ತು. ಆಗ ಮೊಬೈಲ್​ನಲ್ಲಿ ಮಾತನಾಡುತ್ತಲೇ ದ್ವಿಚಕ್ರವಾಹನದಲ್ಲಿ ಬಂದ ವ್ಯಕ್ತಿಗೆ ಈ ಕಂದಕ ಗಮನಕ್ಕೆ ಬರಲೇ ಇಲ್ಲ. ಈತ ದ್ವಿಚಕ್ರ ವಾಹನ ಸಮೇತ ನೇರವಾಗಿ ಬಂದು ಬಿದ್ದಿದ್ದು ಈ ಆಳವಾದ ಕಂದಕಕ್ಕೆ. ಈತ ಮೊಬೈಲ್​​ನಲ್ಲಿ ಎಷ್ಟು ಬ್ಯೂಸಿ ಆಗಿದ್ದ ಅಂದರೆ ರಸ್ತೆಯಲ್ಲಿ ಹೊಂಡ ಆಗಿದೆ ಅನ್ನೋದು ಈತನ ಗಮನಕ್ಕೆ ಬರಲೇ ಇಲ್ಲ. ಯಾಕೆಂದರೆ ಸ್ಕೂಟರ್​​ನಲ್ಲಿ ಬಹಳ ವೇಗವಾಗಿಯೇ ಬಂದ ಈತ ಅದೇ ವೇಗದಲ್ಲಿ ಕಂದಕಕ್ಕೆ ಬಿದ್ದಿದ್ದ. ಅದೃಷ್ಟವಷಾತ್​ ಈ ವ್ಯಕ್ತಿಯ ಪ್ರಾಣಕ್ಕೆ ಏನೂ ತೊಂದರೆ ಆಗಿಲ್ಲ. ಆಳವಾದ ಗುಂಡಿಯಿಂದ ಈತನೇ ಮೇಲೆದ್ದು ಬಂದಿದ್ದಾನೆ. ಈ ಶಾಕಿಂಗ್​ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಅಪ್​ಲೋಡ್​ ಆದ ಒಂದು ಗಂಟೆಯಲ್ಲೇ 14 ಸಾವಿರಕ್ಕೂ ಹೆಚ್ಚು ಬಾರಿ ಜನ ಈ ವೀಡಿಯೋ ನೋಡಿದ್ದಾರೆ.

About sudina

Check Also

ಅಬುದಾಭಿಯಲ್ಲಿ ನಿರ್ಮಾಣವಾಗುತ್ತಿದೆ ಬೃಹತ್ ಹಿಂದೂ ದೇವಾಲಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದಾಭಿ : ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಬೃಹತ್ ಹಿಂದೂ ದೇವಾಲಯದ ನಿರ್ಮಾಣದ ಸಿದ್ಧತೆ …

Leave a Reply

Your email address will not be published. Required fields are marked *

error: Content is protected !!